ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ TNIE
ದೇಶ

ಮಹುವಾ ಮೊಯಿತ್ರಾಗೆ ಹೆಚ್ಚಿದ ಸಂಕಷ್ಟ: 'ಪ್ರಶ್ನೆಗಾಗಿ ಕಾಸು' ಪ್ರಕರಣದ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ

Vishwanath S

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿದೆ. ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗಾಗಿ ಕಾಸು ಪ್ರಕರಣದ ತನಿಖೆ ನಡೆಸಿ ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಇಂದು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ 'ಪ್ರಶ್ನೆಗಾಗಿ ಕಾಸು' ಪ್ರಕರಣದ ಸಂಬಂಧ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಯಿತು. ನಂತರ ತಮ್ಮ ಉಚ್ಚಾಟನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಮಧ್ಯೆ ಟಿಎಂಸಿ ಮತ್ತೆ ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ.

ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಪಡೆದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ನೀಡಿದ ದೂರಿನ ಮೇರೆಗೆ ಲೋಕಪಾಲ್ ಆದೇಶ ನೀಡಿದೆ.

ಲೋಕಪಾಲ್ ಆದೇಶದಲ್ಲಿ ಹೇಳಿದ್ದೇನು?

ಲೋಕಪಾಲ್ ಆದೇಶದಲ್ಲಿ 'ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮತ್ತು ಪರಿಗಣಿಸಿದ ನಂತರ ವಿಶೇಷವಾಗಿ ನಿಶಿಕಾಂತ್ ದುಬೆ ಅವರ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂಬ ಅಂಶದ ಬಗ್ಗೆ ಯಾವುದೇ ಸಂದೇಹವಿಲ್ಲ. ಸ್ಥಾನ ಮತ್ತು ಹೆಚ್ಚಿನ ಆರೋಪಗಳು ದೃಢವಾದ ಪುರಾವೆಗಳಿಂದ ಬೆಂಬಲಿತವಾಗಿದೆ ಎಂದು ಹೇಳಿದೆ.

ಎಲ್ಲ ಆಯಾಮಗಳಲ್ಲೂ ಸಿಬಿಐ ತನಿಖೆ ನಡೆಸಿ

ಲೋಕಪಾಲ್ ಆದೇಶದಲ್ಲಿ ಮೊಯಿತ್ರಾ ಅವರನ್ನು ಆರ್‌ಪಿಎಸ್ ಎಂದು ಉಲ್ಲೇಖಿಸಿದ್ದಾರೆ. ಲೋಕಪಾಲ್ ಪೀಠವು ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಮತ್ತು ಸದಸ್ಯರಾದ ಅರ್ಚನಾ ರಾಮಸುಂದರಂ ಮತ್ತು ಮಹೇಂದ್ರ ಸಿಂಗ್ ಅವರನ್ನು ಒಳಗೊಂಡಿತ್ತು. ದೂರಿನಲ್ಲಿ ಮಾಡಿರುವ ಆರೋಪಗಳ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ಈ ಆದೇಶದ ಸ್ವೀಕೃತಿಯ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ತನಿಖಾ ವರದಿಯ ಪ್ರತಿಯನ್ನು ಸಲ್ಲಿಸುವಂತೆ ನಾವು ಸಿಬಿಐಗೆ ನಿರ್ದೇಶಿಸುತ್ತೇವೆ ಎಂದು ಅದು ಹೇಳಿದೆ.

SCROLL FOR NEXT