ಡ್ಯಾನಿಶ್ ಅಲಿ ಕಾಂಗ್ರೆಸ್ ಸೇರ್ಪಡೆ
ಡ್ಯಾನಿಶ್ ಅಲಿ ಕಾಂಗ್ರೆಸ್ ಸೇರ್ಪಡೆ 
ದೇಶ

ಅಮಾನತುಗೊಂಡಿರುವ ಬಿಎಸ್‌ಪಿ ನಾಯಕ, ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್ ಸೇರ್ಪಡೆ

Lingaraj Badiger

ನವದೆಹಲಿ: ಅಮಾನತುಗೊಂಡಿರುವ ಬಿಎಸ್‌ಪಿ ನಾಯಕ ಮತ್ತು ಸಂಸದ ಡ್ಯಾನಿಶ್ ಅಲಿ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇಂದು ಕಾಂಗ್ರೆಸ್ ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಮಾತನಾಡಿದ ಡ್ಯಾನಿಶ್ ಅಲಿ, ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನಿಸಿ, "ವಿಭಜಕ" ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ದೇಶದ ಅತ್ಯಂತ ಹಳೆಯ ಪಕ್ಷ ಕೈಜೋಡಿಸುವುದು ಮುಖ್ಯ ಎಂದು ಹೇಳಿದರು.

"ಒಂದೆಡೆ ವಿಭಜಕ ಶಕ್ತಿಗಳು ಮತ್ತು ಇನ್ನೊಂದೆಡೆ ಮತ್ತೊಂದು ಶಕ್ತಿ, ಸಮಾಜದ ಬಡ ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿವೆ. ಹೀಗಾಗಿ ನನ್ನ ಆಯ್ಕೆ ತುಂಬಾ ಸ್ಪಷ್ಟವಾಗಿದೆ" ಎಂದು ಅಲಿ ಹೇಳಿದರು.

ವಿಭಜಕ ಶಕ್ತಿಗಳ ವಿರುದ್ಧ ಹೋರಾಡಬೇಕಾದರೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಬೇಕು ಎಂದರು.

ಡ್ಯಾನಿಶ್ ಅಲಿ ಅವರು ಪ್ರಸ್ತುತ ಉತ್ತರ ಪ್ರದೇಶದ ಅಮ್ರೋಹಾ ಸಂಸದರಾಗಿದ್ದು, ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಅಮಾನತುಗೊಳಿಸಿತ್ತು. ಈಗ ಅವರು ಕಾಂಗ್ರೆಸ್ ನಿಂದ ಅಮ್ರೋಹಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.

SCROLL FOR NEXT