ಮದಗಜಗಳ ಕಾದಾಟ
ಮದಗಜಗಳ ಕಾದಾಟ IANS
ದೇಶ

ಕೇರಳ: ದೇಗುಲ ಉತ್ಸವದ ವೇಳೆ ಮದಗಜಗಳ ಕಾದಾಟ, ಮಾವುತರು ಸೇರಿ ಹಲವರಿಗೆ ಗಾಯ, ವಿಡಿಯೋ ವೈರಲ್

Srinivasamurthy VN

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಆನೆ ಸಂಘರ್ಷ ವರದಿಯಾಗಿದ್ದು, ದೇಗುಲ ಉತ್ಸವದ ವೇಳೆ ಸಂಪೂರ್ಣವಾಗಿ ಅಲಂಕರಿಸಿ ತಂದಿದ್ದ ಮದಗಜಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಹಲವು ಮಾವುತರಿಗೆ ಗಾಯಗಳಾಗಿವೆ.

ಕೇರಳದ ತ್ರಿಶೂರ್​ನಲ್ಲಿ ನಡೆದ ಆರಾಟ್ಟುಪುಳ ಉತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಉತ್ಸವಕ್ಕಾಗಿ ಸಂಪೂರ್ಣವಾಗಿ ಅಲಂಕರಿಸಿದ ಎರಡು ಆನೆಗಳನ್ನು ತರಲಾಗಿತ್ತು. ಈ ವೇಳೆ ಆನೆಯೊಂದು ಮತ್ತೊಂದು ಆನೆಯೊಂದಿಗೆ ಘರ್ಷಣೆಗೆ ಇಳಿದಿದೆ.

ಸ್ಥಳೀಯ ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ 10.30 ರ ಸುಮಾರಿಗೆ ಗುರುವಾಯೂರು ರವಿಕೃಷ್ಣನ್ ಎಂಬ ಆನೆ ಹಿಂಸಾತ್ಮಕವಾಗಿ ವರ್ತಿಸಿದೆ. ನೋಡನೋಡುತ್ತಲೇ ಆನೆ ಸಂಘರ್ಷಕ್ಕೆ ಮುಂದಾಗಿದ್ದು. ತನ್ನನ್ನು ಹಿಡಿದಿದ್ದಾ ಮಾವುತರನ್ನೇ ತಳ್ಳಿ ಹಿಂಬಂದಿಯಲ್ಲಿದ್ದ ಮತ್ತೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನನ್ನು ಗುರಿಯಾಗಿಸಿಕೊಂಡು ಘರ್ಷಣೆಗೆ ಮುಂದಾಗಿದೆ.

ಈ ವೇಳೆ ಎರಡೂ ಆನೆಗಳ ನಡುವೆ ಘರ್ಷಣೆಯಾಗಿದ್ದು, ಈ ವೇಳೆ ಪುತ್ತುಪ್ಪಲ್ಲಿ ಅರ್ಜುನ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ಆದರೂ ಬಿಡದ ಗುರುವಾಯೂರು ರವಿಕೃಷ್ಣನ್ ಆನೆ ಅದನ್ನು ಅಟ್ಟಾಡಿಸಿದೆ. ಈ ವೇಳೆ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.

ಏನಿದು ಘಟನೆ?

ಗುರುವಾಯೂರು ರವಿಕೃಷ್ಣನ್ ಮತ್ತು ಪುತ್ತುಪ್ಪಲ್ಲಿ ಅರ್ಜುನ ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆಗೆ ಸಿದ್ಧತೆ ಮಾಡಲಾಗಿತ್ತು. ಈ ದೇವಾಲಯದ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ರವಿಕೃಷ್ಣನ್ ಆನೆ ಕೆರಳಿತ್ತು, ಅದರ ಮುಂದೆ ಹೋಗುತ್ತಿದ್ದವನ ಮೇಲೆ ದಾಳಿ ಮಾಡಿತ್ತು. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಆನೆ ಮತ್ತೊಂದು ಬದಿಯಲ್ಲಿದ್ದ ಪುತ್ತುಪ್ಪಲ್ಲಿ ಅರ್ಜುನ ಆನೆ ಮೇಲೂ ದಾಳಿಗೆ ಮುಂದಾಗಿ ಎರಡೂ ಆನೆಗಳ ನಡುವೆ ಕಾಳಗ ನಡೆಯಿತು. ಆನೆಗಳನ್ನು ಹತೋಟೆಗೆ ತರಲು ಮಾವುತರು ಪರದಾಡಿದ್ದಾರೆ. ಒಂದು ಗಂಟೆಯ ಬಳಿಕ ಆನೆಗಳು ಶಾಂತವಾದವು ಬಳಿಕ ಸರಪಳಿ ಹಾಕಿ ದೇವಸ್ಥಾನಕ್ಕೆ ಕರೆತರಲಾಯಿತು.

ಆರಾಟ್ಟುಪುಳ ದೇವಾಲಯವನ್ನು 8ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಶ್ರೀರಾಮನ ಗುರು ವಶಿಷ್ಠರ ದೈವಿ ಆತ್ಮವು ಈ ದೇವಾಲಯದ ವಿಗ್ರಹಗಳಲ್ಲಿ ನೆಲೆಸಿದೆ ಎಂಬ ಪ್ರತೀತಿ ಇದೆ.

SCROLL FOR NEXT