ರೇಖಾ ಪಾತ್ರಾ - ಪ್ರಧಾನಿ ಮೋದಿ
ರೇಖಾ ಪಾತ್ರಾ - ಪ್ರಧಾನಿ ಮೋದಿ 
ದೇಶ

ನೀವು 'ಶಕ್ತಿ ಸ್ವರೂಪಿಣಿ': ಬಿಜೆಪಿ ಅಭ್ಯರ್ಥಿ, ಸಂದೇಶ್‌ಖಾಲಿ ಸಂತ್ರಸ್ಥೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ದುಸ್ಥಿತಿಯನ್ನು ಎತ್ತಿ ತೋರಿಸಿದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶ್​ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಫೋನ್ ಮೂಲಕ ಮಾತನಾಡಿದ್ದು, ಅವರನ್ನು "ಶಕ್ತಿ ಸ್ವರೂಪಿಣಿ" ಎಂದು ಶ್ಲಾಘಿಸಿರುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ರೇಖಾ ಅವರ ಪ್ರಚಾರದ ಸಿದ್ಧತೆಗಳು ಮತ್ತು ಮತದಾರರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದರು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ 19 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಸಂದೇಶ್​ಖಾಲಿ ಪ್ರದೇಶಕ್ಕೆ ಒಳಪಡುವ ಬಸಿರ್ಹತ್ ಕ್ಷೇತ್ರದಿಂದ ರೇಖಾ ಪಾತ್ರಾ ಅವರನ್ನು ಕಣಕ್ಕಿಳಿಸಿದೆ.

ರೇಖಾ ಪಾತ್ರಾ ಅವರು ಒಬ್ಬ ಗೃಹಿಣಿಯಾಗಿದ್ದು, ಈಗ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಚರರಿಂದ ಚಿತ್ರಹಿಂಸೆ ಮತ್ತು ಕಿರುಕುಳಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.

ಮೋದಿ ನಮ್ಮ ಬೆಂಬಲಕ್ಕೆ ನಿಂತಿರುವುದು ತುಂಬಾ ಸಂತೋಷದ ವಿಚಾರ ಎಂದ ಪಾತ್ರಾ, "ಶ್ರೀರಾಮನೇ ನಮ್ಮೊಂದಿಗಿದ್ದಂತೆ" ಎಂದು ಹೇಳಿದ್ದಾರೆ.

“ನೀವು ಸಂದೇಶ್​ಖಾಲಿಯಲ್ಲಿ ದೊಡ್ಡ ಹೋರಾಟವನ್ನು ಮಾಡಿದ್ದೀರಿ, ನೀವು ಶಕ್ತಿ ಸ್ವರೂಪ. ಅಂತಹ ಶಕ್ತಿಶಾಲಿಗಳನ್ನು ನೀವು ಜೈಲಿಗೆ ಕಳುಹಿಸಿದ್ದೀರಿ. ನೀವು ತುಂಬಾ ಧೈರ್ಯದ ಕಾರ್ಯವನ್ನು ಮಾಡಿದ್ದೀರಿ ” ಎಂದು ಪ್ರಧಾನಿ ಮೋದಿ ಪತ್ರಾ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ.

“ಮಹಿಳೆಯರ ಬೆಂಬಲದಿಂದಾಗಿ ನಾನು ಅದನ್ನು ಮಾಡಲು ಸಾಧ್ಯವಾಯಿತು. ಅವರು ತೋರಿಸಿದ ಹಾದಿಯಲ್ಲಿ ನಾನು ಸಾಗುತ್ತೇನೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ” ಎಂದು ಪಾತ್ರಾ ಉತ್ತರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದರು.

SCROLL FOR NEXT