ಸದಾನಂದ ದಾಟೆ  online desk
ದೇಶ

NIA ಡಿಜಿ ಹುದ್ದೆಗೆ ಸದಾನಂದ ದಾಟೆ ನೇಮಕ, BRRD ಗೆ ರಾಜೀವ್ ಕುಮಾರ್ ಶರ್ಮಾ, NDRF ಡಿಜಿಯಾಗಿ ಪಿಯೂಷ್ ಆನಂದ್

ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ನ ಮುಖ್ಯಸ್ಥ ಸದಾನಂದ ವಸಂತ್ ದಾಟೆ ಅವರನ್ನು ಕೇಂದ್ರ ಸರ್ಕಾರ ಎನ್ಐಎ ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ನ ಮುಖ್ಯಸ್ಥ ಸದಾನಂದ ವಸಂತ್ ದಾಟೆ ಅವರನ್ನು ಕೇಂದ್ರ ಸರ್ಕಾರ ಎನ್ಐಎ ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಬ್ಯೂರೋ ಆಫ್ ಪೋಲಿಸ್ ಸಂಶೋಧನೆ ಮತ್ತು ಅಭಿವೃದ್ಧಿ ಗೆ ರಾಜೀವ್ ಕುಮಾರ್ ಶರ್ಮಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದರೆ ಎನ್ ಡಿಆರ್ ಎಫ್ ಡಿಜಿಯಾಗಿ ಪಿಯೂಷ್ ಆನಂದ್ ಅವರನ್ನು ನೇಮಿಸಲಾಗಿದೆ.

ಮಂಗಳವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ, ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ, “1990ರ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿ, ಹುದ್ದೆಗೆ ಸೇರಿದ ದಿನಾಂಕದಿಂದ ಅವರ ನಿವೃತ್ತಿಯವರೆಗಿನ ಅವಧಿಗೆ ಡಿಸೆಂಬರ್ 31, 2026, ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ನಿಯುಕ್ತಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮಾರ್ಚ್ 31 ರಂದು ಹಾಲಿ ಎನ್‌ಐಎ ಡಿಜಿ ದಿನಕರ್ ಗುಪ್ತಾ ನಿವೃತ್ತಿಯಾದ ಸದಾನಂದ ದಾಟೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದಾಟೆ 2008 ರ ನವೆಂಬರ್ 26 ರಂದು ರಾತ್ರಿ ಮುಂಬೈ ನಲ್ಲಿ ಭಯೊತ್ಪಾದಕ ದಾಳಿ ನಡೆದಾಗ ಸ್ಥಳಕ್ಕೆ ತೆರಳಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೆಲವೇ ಕೆಲವು ಮಂದಿ ಪೊಲೀಸ್ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದಾರೆ. ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅವರು ಗಾಯಗೊಂಡಿದ್ದರು.

ಅಬು ಇಸ್ಮಾಯಿಲ್ ಮತ್ತು ಅಜ್ಮಲ್ ಕಸಬ್ ಒತ್ತೆಯಾಳಾಗಿದ್ದ ಅನೇಕ ಬಲಿಪಶುಗಳನ್ನು ರಕ್ಷಿಸಲು ದಾಟೆ ಅವರ ಧೈರ್ಯ ಮತ್ತು ತ್ವರಿತ ಕ್ರಮಗಳು ಕಾರಣವಾಯಿತು. ಈ ಬಳಿಕ ದಾಟೆ ಅವರಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಮಾಡಲಾಗಿತ್ತು. ದಾಟೆ ಕೇಂದ್ರೀಯ ತನಿಖಾ ದಳದಲ್ಲಿ ಡಿಐಜಿಯಾಗಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಲ್ಲಿ ಐಜಿ (ಆಪ್ಸ್) ಆಗಿಯೂ ಕೆಲಸ ಮಾಡಿದ್ದಾರೆ.

ಏತನ್ಮಧ್ಯೆ, ಎಸಿಸಿ ರಾಜಸ್ಥಾನ ಕೇಡರ್‌ನ 1990-ಬ್ಯಾಚ್ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಶರ್ಮಾ ಅವರನ್ನು ಬಿಪಿಆರ್ & ಡಿ ಡಿಜಿಯಾಗಿ ನೇಮಕ ಮಾಡಲಾಗಿದೆ. ಶರ್ಮಾ ಪ್ರಸ್ತುತ ರಾಜಸ್ಥಾನದಲ್ಲಿ ಭ್ರಷ್ಟಾಚಾರ ವಿರೋಧಿ ಶಾಖೆಯ ಮುಖ್ಯಸ್ಥರಾಗಿದ್ದಾರೆ ಮತ್ತು ಈ ಹಿಂದೆ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ರಾಜಸ್ಥಾನ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಆರ್‌ಎಸಿ), ಮತ್ತು ರಾಜ್ಯ ವಿಪತ್ತು ರೆಸ್ಪಾನ್ಸ್ ಫೋರ್ಸ್ (ಎಸ್‌ಡಿಆರ್‌ಎಫ್) ಆಗಿ ಸೇವೆ ಸಲ್ಲಿಸಿದ್ದರು.

ಉತ್ತರ ಪ್ರದೇಶ ಕೇಡರ್‌ನ 1991 ರ ಬ್ಯಾಚ್‌ನ ಐಪಿಎಸ್ ಮತ್ತು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಲ್ಲಿ ವಿಶೇಷ ಡಿಜಿ ಹುದ್ದೆಯನ್ನು ಹೊಂದಿರುವ ಪಿಯೂಷ್ ಆನಂದ್ ಅವರನ್ನು ಎನ್ ಡಿಆರ್ ಎಫ್ ಡಿಜಿಯಾಗಿ ನೇಮಿಸಲು ಆದೇಶ ಹೊರಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT