ಕೇಜ್ರಿವಾಲ್
ಕೇಜ್ರಿವಾಲ್  
ದೇಶ

ಬಂಧನ ನಂತರ ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸಲು ಪಿಐಎಲ್, ವಜಾಗೊಳಿಸಿದ ಹೈಕೋರ್ಟ್

Nagaraja AB

ನವದೆಹಲಿ: ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದ ನಂತರ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇದು ನ್ಯಾಯಾಂಗ ಹಸ್ತಕ್ಷೇಪದ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳುವ ಮೂಲಕ ಈ ವಿಚಾರದ ಅರ್ಹತೆಗಳ ಬಗ್ಗೆ ಪ್ರತಿಕ್ರಿಯಿಸಲು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠ ನಿರಾಕರಿಸಿದೆ.

"ಕಾನೂನಿಗೆ ಅನುಸಾರವಾಗಿ ಪರಿಶೀಲಿಸುವುದು ಸರ್ಕಾರದ ಇತರ ವಿಭಾಗಳಿಗೆ ಸೇರಿದ್ದು ಎಂದು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ಪೀಠ ಹೇಳಿದೆ. ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಮುಂದುವರಿಕೆಗೆ ಕಾನೂನು ತಡೆಯನ್ನು ತೋರಿಸಲು ಅರ್ಜಿದಾರರಾದ ಸುರ್ಜಿತ್ ಸಿಂಗ್ ಯಾದವ್ ಪರ ವಕೀಲರಿಗೆ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದೆ.

"ಪ್ರಾಯೋಗಿಕ ತೊಂದರೆಗಳಿರಬಹುದು ಆದರೆ ಅದು ಬೇರೆಯದು. ಕಾನೂನು ತಡೆ ಎಲ್ಲಿದೆ? ಎಂದು ನ್ಯಾಯಾಲಯ ಕೇಳಿತು. ಮಾರ್ಚ್ 21 ರಂದು ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ನಂತರ ದೆಹಲಿ ನ್ಯಾಯಾಲಯವು ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ಒಪ್ಪಿಸಲಾಯಿತು. ನಿರ್ದಿಷ್ಟ ವ್ಯಕ್ತಿಗಳಿಗೆ ಅನುಕೂಲವಾಗುವ ಅಬಕಾರಿ ನೀತಿ ರಚನೆಗೆ ಸಂಬಂಧಿಸಿದ ಪಿತೂರಿನಲ್ಲಿ ಅವರು ನೇರವಾಗಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

SCROLL FOR NEXT