ಅಲ್ಲು ಅರ್ಜುನ್ 
ದೇಶ

ಮತದಾನಕ್ಕೂ ಮುನ್ನ ಮೆಗಾ ಕುಟುಂಬಕ್ಕೆ ಬಿಗ್ ಶಾಕ್: YCP ಅಭ್ಯರ್ಥಿ ಪರ ಅಲ್ಲು ಅರ್ಜುನ್ ಪ್ರಚಾರ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಚೇತ ನಟ ಅಲ್ಲು ಅರ್ಜುನ್ ಅವರು ನಂದ್ಯಾಲ ಹಾಲಿ ಶಾಸಕ ಹಾಗೂ ವೈಸಿಪಿ ಶಾಸಕಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಮನೆಗೆ ಭೇಟಿ ನೀಡಿರುವುದು ಆಂಧ್ರ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ವೇಗ ತಂದಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಚೇತ ನಟ ಅಲ್ಲು ಅರ್ಜುನ್ ಅವರು ನಂದ್ಯಾಲ ಹಾಲಿ ಶಾಸಕ ಹಾಗೂ ವೈಸಿಪಿ ಶಾಸಕಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಮನೆಗೆ ಭೇಟಿ ನೀಡಿರುವುದು ಆಂಧ್ರ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ವೇಗ ತಂದಿದೆ. ಒಂದೆಡೆ ಮೈತ್ರಿಕೂಟದ ಪರವಾಗಿ ಪವನ್ ಕಲ್ಯಾಣ್ ಕಣಕ್ಕಿಳಿಯುತ್ತಿದ್ದು, ಇದೇ ವೇಳೆ ಅಲ್ಲು ಅರ್ಜುನ್ ಮತ್ತು ಶಿಲ್ಪಾ ಮೋಹನ್ ರೆಡ್ಡಿ ಕುಟುಂಬಸ್ಥರಿಗೆ ಶುಭಾಶಯ ಕೋರುತ್ತಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಸೇರಿದ ನಟ ಅಲ್ಲು ಅರ್ಜುನ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋದರ ಮಾವ ಪವನ್​ ಕಲ್ಯಾಣ್​ಗೆ ಶಾಕ್ ನೀಡಿದ್ದಾರೆ. ಆಂಧ್ರ ಪ್ರದೇಶ ಚುನಾವಣೆಯಲ್ಲಿ ​ ಎದುರಾಳಿಯಾಗಿರುವ ವೈಎಸ್​ಆರ್​ಸಿಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ಮೂಲಕ ಮೆಗಾ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾರೆ.

ಚುನಾವಣಾ ಪ್ರಚಾರದ ಕೊನೆಯ ದಿನ ಒಂದೇ ಕುಟುಂಬದ ಇಬ್ಬರು ಸ್ಟಾರ್ ಹೀರೋಗಳು ಎರಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಭೇಟಿ ಮಾಡಲು ಹೊರಟಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ನಿನ್ನೆ ಅಲ್ಲು ಅರ್ಜುನ್ ಅವರು ಪವನ್ ಕಲ್ಯಾಣ್ ಜೊತೆ ಕಾಣಿಸಿಕೊಂಡಿದ್ದರು. ಇಂದು ವೈಸಿಪಿ ಶಾಸಕಿ ಶಿಲ್ಪಾ ರವಿಚಂದ್ರ ಜೊತೆ ಕಾಣಿಸಿಕೊಂಡಿದ್ದು ಈ ಎರಡು ಘಟನೆಗಳು ಆಂಧ್ರಪ್ರದೇಶ ಮತದಾರರನ್ನು ಗೊಂದಲಕ್ಕೀಡು ಮಾಡಿದಂತಿದೆ.

ಆದರೆ.. ನಂದ್ಯಾಲ್ ವೈಸಿಪಿ ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅವರ ಪತ್ನಿ ಹಾಗೂ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಉತ್ತಮ ಸ್ನೇಹಿತರಾಗಿದ್ದು ಈ ಕಾರಣಕ್ಕಾಗಿಯೇ ಅಲ್ಲು ಅರ್ಜುನ್ ಅವರ ಮನೆಗೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT