ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ 
ದೇಶ

2025 ವೇಳೆಗೆ ಭಾರತ 4ನೇ ಅತಿ ದೊಡ್ಡ ಆರ್ಥಿಕತೆ; ಜಪಾನ್ ಹಿಂದಿಕ್ಕಲು ಸಜ್ಜು!

ಸ್ಥೂಲ ಆರ್ಥಿಕತೆಯ ಹಲವು ಮಾನದಂಡಗಳನ್ನು ಉಲ್ಲೇಖಿಸಿರುವ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಭಾರತ 2025 ರ ವೇಳೆಗೆ ಜಪಾನ್ ನ್ನು ಹಿಂದಿಕ್ಕಿ 4 ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ.

ನವದೆಹಲಿ: ಸ್ಥೂಲ ಆರ್ಥಿಕತೆಯ ಹಲವು ಮಾನದಂಡಗಳನ್ನು ಉಲ್ಲೇಖಿಸಿರುವ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಭಾರತ 2025 ರ ವೇಳೆಗೆ ಜಪಾನ್ ನ್ನು ಹಿಂದಿಕ್ಕಿ 4 ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತದ ಜಿಡಿಪಿ ಈಗ 5 ನೇ ಶ್ರೇಣಿಯಲ್ಲಿದ್ದು ಅಮೇರಿಕಾ, ಚೀನಾ, ಜರ್ಮನಿ, ಜಪಾನ್ ನಂತರದ ಸ್ಥಾನದಲ್ಲಿದೆ.

ಒಂದು ದಶಕದ ಹಿಂದೆ ಭಾರತದ ಜಿಡಿಪಿ 11 ನೇ ಸ್ಥಾನದಲ್ಲಿತ್ತು. ಈಗ ಭಾರತದ ಜಿಡಿಪಿ 3.7 ಟ್ರಿಲಿಯನ್ ಡಾಲರ್ ನಷ್ಟಿದೆ. 2022 ರಲ್ಲಿ ಭಾರತ ಬ್ರಿಟನ್ ನ್ನು ಸರಿಗಟ್ಟಿತ್ತು.

ಅಮಿತಾಬ್ ಕಾಂತ್ ನೀಡಿರುವ ಮಾಹಿತಿಯ ಪ್ರಕಾರ, 2013 ರಲ್ಲಿ ದುರ್ಬಲವಾದ 5 ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತದ ಆರ್ಥಿಕತೆ 2024 ರಲ್ಲಿ ಟಾಪ್ 5 ಕ್ಕೆ ಏರಿಕೆಯಾಗುವುದಕ್ಕೆ ದಾಖಲೆಯ GST ಸಂಗ್ರಹ, ಕಳೆದ 3 ತ್ರೈಮಾಸಿಕಗಳಲ್ಲಿ ಶೇ.8 ರಷ್ಟು ಜಿಡಿಪಿ ಬೆಳವಣಿಗೆ, ಹಲವು ರಾಷ್ಟ್ರಗಳೊಂದಿಗೆ ರೂಪಾಯಿ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿರುವುದು ಹಾಗೂ ಇನ್ನಿತರ ಅಂಶಗಳು ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT