(ಸಾಂಕೇತಿಕ ಚಿತ್ರ) online desk
ದೇಶ

ಗ್ವಾಲಿಯರ್ ನಲ್ಲಿ ಗುರುತಿನ ಕಳ್ಳತನ: ಆಧಾರ್, ಪ್ಯಾನ್ ಬಳಸಿ ಕಂಪನಿ ನೋಂದಣಿ!

ತಮ್ಮ ಗುರುತಿನ ಕಳ್ಳತನವಾಗಿದೆ ಎಂದು ಆರೋಪಿಸಿ ಮಧ್ಯಪ್ರದೇಶದ ನಿವಾಸಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ವಾಲಿಯರ್: ತಮ್ಮ ಗುರುತಿನ ಕಳ್ಳತನವಾಗಿದೆ ಎಂದು ಆರೋಪಿಸಿ ಮಧ್ಯಪ್ರದೇಶದ ನಿವಾಸಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅನಾಮಿಕ ದುಷ್ಕರ್ಮಿಗಳು ನಕಲಿ ಜಿಎಸ್ ಟಿ ನಂಬರ್ ನ್ನು ತಯಾರಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ನ್ನು ಬಳಸಿಕೊಂಡಿದ್ದಾರೆ, ಈ ಮೂಲಕ ವಂಚನೆಯಿಂದ ಖಾಸಗಿ ಕಂಪನಿ ನಡೆಸುತ್ತಿದ್ದಾರೆ, ಈ ಸಂಸ್ಥೆಗೆ ವಾರ್ಷಿಕ 9 ಕೋಟಿ ರೂಪಾಯಿಗಳ ಆದಾಯವಿದೆ ಎಂದು ಆರೋಪಿಸಿದ್ದಾರೆ.

ಅನಾಮಿಕ ದುಷ್ಕರ್ಮಿಗಳು ನಕಲಿ ಜಿಎಸ್ ಟಿ ನಂಬರ್ ನ್ನು ತಯಾರಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ನ್ನು ಬಳಸಿಕೊಂಡಿದ್ದಾರೆ, ಈ ಮೂಲಕ ವಂಚನೆಯಿಂದ ಖಾಸಗಿ ಕಂಪನಿ ನಡೆಸುತ್ತಿದ್ದಾರೆ, ಈ ಸಂಸ್ಥೆಗೆ ವಾರ್ಷಿಕ 9 ಕೋಟಿ ರೂಪಾಯಿಗಳ ಆದಾಯವಿದೆ ಎಂದು ಆರೋಪಿಸಿದ್ದಾರೆ.

ದೂರುದಾರ ಚಂದನ್ ಸೋನಿ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದು, ಆರ್ಥಿಕ ಅಪರಾಧಗಳ ವಿಭಾಗ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ FIR ದಾಖಲಿಸಿ ತನಿಖೆ ಮುಂದುವರೆಸಿದೆ.

ಎಫ್ಐಆರ್ ನ ಪ್ರಕಾರ, 2022 ರ ಜುಲೈ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದಾಗ, ತಮ್ಮ PAN ನ್ನು ನಕಲಿ ಜಿಎಸ್ ಟಿ ನಂಬರ್ ಪಡೆಯುವುದಕ್ಕೆ ಅಕ್ರಮವಾಗಿ ಬಳಕೆ ಮಾಡಿರುವುದು ಕಂಡುಬಂದಿದೆ, ದೆಹಲಿ ಮೂಲದ ಎಂಜಿ ಸೇಲ್ಸ್ ಎಂಬ ಹೆಸರಿನಲ್ಲಿ ಸಂಸ್ಥೆ ನಡೆಯುತ್ತಿರುವುದಾಗಿ ಚಂದನ್ ಸೋನಿ ದೂರಿನಲ್ಲಿ ತಿಳಿಸಿದ್ದಾರೆ.

ಕಂಪನಿಯ ವಿಳಾಸವನ್ನು ಪೂರ್ವ ದೆಹಲಿಯ ಶಾಹದಾರ ಪ್ರದೇಶದಲ್ಲಿ ಎಲ್ಲೋ ತೋರಿಸಲಾಗಿದೆ, ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಗ್ವಾಲಿಯರ್‌ನ ತಾಟಿಪುರ ಪೊಲೀಸ್ ಠಾಣೆ ಶೂನ್ಯ ಎಫ್‌ಐಆರ್ ದಾಖಲಾಗಿದೆ.

ಶೂನ್ಯ ಎಫ್‌ಐಆರ್ ಎನ್ನುವುದು ಯಾವುದೇ ಪೊಲೀಸ್ ಠಾಣೆಗೆ ಆರಂಭಿಕ ಎಫ್‌ಐಆರ್ ಸಂಖ್ಯೆಯನ್ನು ನಿಯೋಜಿಸದೆಯೇ ಅಪರಾಧವನ್ನು ನೋಂದಾಯಿಸಲು ಅನುಮತಿಸುವ ಒಂದು ನಿಬಂಧನೆಯಾಗಿದೆ. ಶೂನ್ಯ ಎಫ್‌ಐಆರ್‌ಗಳಿಗೆ '0' ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಆದಾಗ್ಯೂ, ಸೋನಿ ಅವರ ದೂರಿನ ಕುತೂಹಲಕಾರಿ ಭಾಗವೆಂದರೆ 2021–22ರ ಹಣಕಾಸು ವರ್ಷದಲ್ಲಿ ಕಂಪನಿ 9.10 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು ಜಿಎಸ್‌ಟಿಯನ್ನು ಜುಲೈ 2022 ರಲ್ಲಿ ಸಲ್ಲಿಸಲಾಗಿದೆ.

ಮತ್ತೊಂದು ಅಚ್ಚರಿಯ ಅಂಶವೆಂದರೆ, ಒಂದೆರಡು ತಿಂಗಳ ಹಿಂದೆ, ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯ ಮೂಲಕ ವಂಚನೆ ಮಾಡಿದ 46 ಕೋಟಿ ರೂಪಾಯಿಗಳ ವ್ಯವಹಾರವನ್ನು ಕಂಡು ಬೆಚ್ಚಿಬಿದ್ದು ಪೊಲೀಸ್ ದೂರು ದಾಖಲಿಸಿದ್ದರು. ಮುಂಬೈ ಮತ್ತು ದೆಹಲಿಯಲ್ಲಿ ತನ್ನ ಪಾನ್ ಕಾರ್ಡ್ ರುಜುವಾತುಗಳ ಅಡಿಯಲ್ಲಿ ಖಾಸಗಿ ಕಂಪನಿಯನ್ನು ನೋಂದಾಯಿಸಲಾಗಿದೆ ಎಂದು ಆದಾಯ ತೆರಿಗೆ ಮತ್ತು ಜಿಎಸ್‌ಟಿ ಇಲಾಖೆಗಳಿಂದ ನೋಟಿಸ್ ಬಂದಾಗ ವಿದ್ಯಾರ್ಥಿಗೆ ವಿಷಯ ತಿಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT