ಚೆನ್ನೈ: ದಟ್ಟ ಕಾನನದಲ್ಲಿ ಆನೆ ಕುಟುಂಬವೊಂದು ಸುಖ ನಿದ್ರೆಗೆ ಜಾರಿದ್ದು, ಈ ಕುಟುಂಬಕ್ಕೆ ಪುಟ್ಟ ಆನೆ ಮರಿ ಭದ್ರತೆ ನೀಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಐದು ಆನೆಗಳ ಕುಟುಂಬ ನಿದ್ರೆಗೆ ಜಾರಿರುವುದನ್ನು ಸೆರೆ ಹಿಡಿಯಲಾಗಿದೆ.
ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾಡಿನಲ್ಲಿ ಆನೆಗಳು ನಿದ್ರಿಸುತ್ತಿರುವುದನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ.
ನಿದ್ರೆಗೆ ಜಾರಿರುವ ಆನೆ ಕುಟುಂಬಕ್ಕೆ ಮರಿ ಆನೆ Z ಕ್ಯಾಟಗರಿ ಭದ್ರತೆ ನೀಡುತ್ತಿದೆ ಎಂದು ಅಧಿಕಾರಿ ತಮಾಷೆಯ ಶೀರ್ಷಿಕೆ ನೀಡಿದ್ದಾರೆ. ತನ್ನ ಪೋಷಕರು ನಿದ್ರಿಸುತ್ತಿದ್ದರೆ ಪುಟ್ಟ ಆನೆ ಧೈರ್ಯದಿಂದ ಅವರ ಸುತ್ತ ಆಟವಾಡುತ್ತಾ ಸಂಚರಿಸುತ್ತಿರುವುದನ್ನು ಇಲ್ಲಿ ನೋಡಬಹುದು.