ಸ್ವಾತಿ ಮಲಿವಾಲ್ 
ದೇಶ

ನನ್ನ ಮೇಲೆ ಹಲ್ಲೆ ನಡೆದಾಗ ಕೇಜ್ರಿವಾಲ್ ಮನೆಯಲ್ಲಿಯೇ ಇದ್ದರು: ಸ್ವಾತಿ ಮಲಿವಾಲ್

ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಘಟನೆಯನ್ನು ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ವಿವರಿಸಿದ್ದಾರೆ.

ನವದೆಹಲಿ: ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಘಟನೆಯನ್ನು ವಿವರಿಸಿದ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಿಎಂ ಕೇಜ್ರಿವಾಲ್ ಮನೆಯಲ್ಲೇ ಇದ್ದರು ಎಂದು ಗುರುವಾರ ಹೇಳಿದ್ದಾರೆ. ಮೇ 13ರ ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ ಎಂದು ಕೇಜ್ರಿವಾಲ್ ಬುಧವಾರ ಹೇಳಿದ್ದರು.

ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಎಎಪಿ ರಾಜ್ಯಸಭಾ ಸದಸ್ಯೆ, ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಮೇ 13 ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಮೇ 13 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಸಿಬ್ಬಂದಿ ನನ್ನನ್ನು ಡ್ರಾಯಿಂಗ್ ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು ಮತ್ತು ಅರವಿಂದ್ ಕೇಜ್ರಿವಾಲ್ ಅವರು ಮನೆಯಲ್ಲಿದ್ದಾರೆ. ಅವರು ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು. ಅಷ್ಟರೊಳಗೆ ಬಿಭವ್ ಕೋಣೆಗೆ ನುಗ್ಗಿದರು. ಅರವಿಂದ್ ಜೀ ಅವರನನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ನಾನು ಅವರಲ್ಲಿ ಹೇಳಿದಾಗ, ಏನು ವಿಷಯ ಎಂದು ಕೇಳಿದ ಅವರು ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಲು ಶುರು ಮಾಡಿದರು. ನಾನು ಅವರನ್ನು ತಳ್ಳಲು ಪ್ರಯತ್ನಿಸಿದಾಗ ಅವರು ಕಪಾಳಕ್ಕೆ ಹೊಡೆದರು. ನಾನು ನೆಲದ ಮೇಲೆ ಬಿದ್ದಾಗ ಅವನು ನನ್ನನ್ನು ಒದೆಯಲು ಪ್ರಾರಂಭಿಸಿದನು. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.

ನನಗೆ ಯಾರೋ ಒಬ್ಬರ ಸೂಚನೆಯ ಮೇರೆಗೆ ಥಳಿಸಲಾಯಿತೋ ಅಥವಾ ಸ್ವತಃ ಅವರೇ ಸ್ವಇಚ್ಛೆಯಿಂದ ಥಳಿಸಿದರೋ ಎಂಬುದು ತಿಳಿದಿಲ್ಲ ಮತ್ತು ಇದೆಲ್ಲವೂ ತನಿಖೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

"ಎಲ್ಲವೂ ತನಿಖೆಯ ವಿಷಯವಾಗಿದೆ. ನಾನು ದೆಹಲಿ ಪೊಲೀಸರಿಗೆ ತುಂಬಾ ಸಹಕರಿಸುತ್ತಿದ್ದೇನೆ. ನಾನು ಯಾರಿಗೂ ಕ್ಲೀನ್ ಚಿಟ್ ನೀಡುತ್ತಿಲ್ಲ. ಏಕೆಂದರೆ ನಾನು ಡ್ರಾಯಿಂಗ್ ರೂಮ್‌ನಲ್ಲಿದ್ದೆ ಮತ್ತು ಅರವಿಂದ್ ಕೇಜ್ರಿವಾಲ್ ಮನೆಯಲ್ಲಿದ್ದರು ಮತ್ತು ನನಗೆ ತುಂಬಾ ಕೆಟ್ಟದಾಗಿ ಥಳಿಸಲಾಗಿದೆ. ನಾನು ಅಕ್ಷರಶಃ ತುಂಬಾ ಕೆಟ್ಟದಾಗಿ ಕಿರುಚುತ್ತಿದ್ದೆ. ಆದರೂ ಯಾರೂ ಸಹಾಯಕ್ಕೆ ಬರಲಿಲ್ಲ. ನನಗೆ ಮತ್ತು ನನ್ನ ವೃತ್ತಿಜೀವನಕ್ಕೆ ಏನಾಗುತ್ತದೆ ಎಂದು ನಾನು ಎಂದಿಗೂ ಯೋಚಿಸುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT