ಮುಂಬೈ: ಮುಂಬೈಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದು 30 ವರ್ಷದ ವ್ಯಕ್ತಿಯೊಬ್ಬ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮೇ 22 ರಂದು ಕಲ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜಗನ್ ಲಕ್ಷ್ಮಣ್ ಜಂಗಲ್ ಎಂದು ಗುರುತಿಸಲಾದ ವ್ಯಕ್ತಿ, ದಾದರ್ (ಮುಂಬೈ) ನಿಂದ ಕಲ್ಯಾಣ್ (ಥಾಣೆ) ಗೆ ಪ್ರಯಾಣಿಸುತ್ತಿದ್ದಾಗ ಜನರಿಂದ ಕಿಕ್ಕಿರಿದು ತುಂಬಿದ ರೈಲಿ ಬೋಗಿಯ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದರು ಎನ್ನಲಾಗಿದೆ.
ಕಲ್ಯಾಣ್ ನಿವಾಸಿಯಾಗಿರುವ ಜಗನ್ ಲಕ್ಷ್ಮಣ್ ಜಂಗಲ್ ದಾದರ್‌ನ ಬುಕ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ವಿವಾಹವಾಗಿದ್ದ ಅವರು, ಕುಟುಂಬದ ಏಕೈಕ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲು ಥಾಣೆ ನಿಲ್ದಾಣ ದಾಟಿದ ನಂತರ ಅವರು ತನ್ನ ಸಮತೋಲನ ಕಳೆದುಕೊಂಡಿದ್ದು, ರೈಲು ಹಳಿಗಳ ಮೇಲೆ ಬಿದ್ದಿದ್ದಾಗಿ ವ್ಯಕ್ತಿಯ ಸಹೋದರ, ವೈದ್ಯರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಥಾಣೆ ತೊರೆ ಬಳಿ ವ್ಯಕ್ತಿಯೊಬ್ಬರು ಗಾಯಗೊಂಡು ಬಿದ್ದಿದ್ದಾರೆ ಎಂಬ ಮಾಹಿತಿ ಪಡೆದ ನಂತರ, ಜಿಆರ್‌ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಂಗಲ್ ಅವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರ ಫೋನ್ ದೋಚಲು ಬೇರೆ ಯಾವುದೇ ವ್ಯಕ್ತಿ ಅವರಿಗೆ ಹೊಡೆದಿದ್ದಾರೆಯೇ ಎಂಬುದು ತನಿಖೆಯಲ್ಲಿ ದೃಢಪಟ್ಟಿಲ್ಲ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.