ಬಾಂಗ್ಲಾದೇಶಿ ಮಹಿಳೆ TNIE
ದೇಶ

ಗುಜರಾತ್‌: 15 ಸಾವಿರ ಕೊಟ್ಟು ಗಡಿದಾಟಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಮಹಿಳೆ ಬಂಧನ!

ರಸಿದಾ ಬೇಗಂ ಜಹಾಂಗೀರ್ ಅಲಿ ಶೇಖ್ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಆರಂಭದಲ್ಲಿ ಒಂದು ವರ್ಷ ಮುಂಬೈನಲ್ಲಿ ವಾಸವಾಗಿದ್ದು ನಂತರ ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿದ್ದು ಅಲ್ಲಿ ಆಕೆ ವಿವಿಧ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು.

ಅಹಮದಾಬಾದ್: ಬಾಂಗ್ಲಾದೇಶದ ಏಜೆಂಟ್‌ಗೆ ಕೇವಲ 15,000 ರೂ. ನೀಡಿ ಗಡಿ ದಾಟಿ ಭಾರತಕ್ಕೆ ಬಂದು ಕೆಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮೂಲದ ಮಹಿಳೆಯೊಬ್ಬರನ್ನು ಸೂರತ್‌ನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ರಸಿದಾ ಬೇಗಂ ಜಹಾಂಗೀರ್ ಅಲಿ ಶೇಖ್ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಆರಂಭದಲ್ಲಿ ಒಂದು ವರ್ಷ ಮುಂಬೈನಲ್ಲಿ ವಾಸವಾಗಿದ್ದು ನಂತರ ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿದ್ದು ಅಲ್ಲಿ ಆಕೆ ವಿವಿಧ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು.

ನಕಲಿ ದಾಖಲೆಗಳನ್ನು ಬಳಸಿ, ರಸಿದಾ ಹೆಸರಲ್ಲಿ ಆಧಾರ್ ಕಾರ್ಡ್ ಮತ್ತು ಇತರ ಭಾರತೀಯ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ವಾಸಿಸುತ್ತಿದ್ದಳು. ರಸಿದಾ ಬಂಧನದ ವೇಳೆ ಪೊಲೀಸರು ಆಕೆ ಬಾಂಗ್ಲಾದೇಶಿ ಪ್ರಜೆ ಎಂದು ಗುರುತಿಸುವ ದಾಖಲೆಯನ್ನು ಸಹ ವಶಪಡಿಸಿಕೊಂಡಿದ್ದಾರೆ.

ನಾನು ಭಾರತಕ್ಕೆ ಬರಲು ಏಜೆಂಟ್‌ಗೆ 15,000 ಬಾಂಗ್ಲಾದೇಶದ ಟಾಕಾವನ್ನು ನೀಡಿದ್ದೇನೆ ಎಂದು ಸೂರತ್‌ನ ಎಸ್‌ಒಜಿ ವಿಚಾರಣೆಯ ಸಮಯದಲ್ಲಿ ಆಕೆ ಬಹಿರಂಗಪಡಿಸಿದಳು. ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದೇಗೆ, ನಂತರ ರೈಲಿನಲ್ಲಿ ಮುಂಬೈಗೆ ಪ್ರಯಾಣ ಅಂತಿಮವಾಗಿ ಸೂರತ್‌ಗೆ ತಲುಪಿದ್ದು ಅಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾಳೆ.

ರಾಸಿದಾ ಬಾಂಗ್ಲಾದೇಶದ ಬರಂಗಾ ಗ್ರಾಮದವಳು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಜೆಸ್ಸೋರ್ ಜಿಲ್ಲೆಯ ಸಮೀಪವಿರುವ ನಿರ್ಬಂಧಿತ ಗಡಿಯನ್ನು ದಾಟಲು ಆಕೆ ಏಜೆಂಟರನ್ನು ಅನ್ನು ಬಳಸಿಕೊಂಡು ಪಶ್ಚಿಮ ಬಂಗಾಳದ ಬ್ಯಾಂಗನ್ ಮೂಲಕ ಭಾರತವನ್ನು ಪ್ರವೇಶಿಸಿದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್