ಸುರಭಿ ವರ್ಮಾ ಸಾವು PTI
ದೇಶ

ಗುಜರಾತ್: ಪುರಾತತ್ವ ಸ್ಥಳದಲ್ಲಿ ಮಣ್ಣು ಕುಸಿದು IIT Delhi ವಿದ್ಯಾರ್ಥಿ ಸಾವು, 3 ಮಂದಿ ಗಾಯ!

ಅಹಮದಾಬಾದ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ಕಣಿವೆ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಗುಜರಾತ್‌ನ ಲೋಥಾಲ್‌ನ ಪುರಾತತ್ವ ಸ್ಥಳದ ಬಳಿ ಬುಧವಾರ ಬೆಳಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಮಣ್ಣು ಕುಸಿದು ಐಐಟಿ ದೆಹಲಿಯ ವಿದ್ಯಾರ್ಥಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ.

ಐಐಟಿ ದೆಹಲಿಯ ಪಿಎಚ್‌ಡಿ ವಿದ್ವಾಂಸ ಸುರ್ಭಿ ವರ್ಮಾ (23) ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಹಮದಾಬಾದ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ಕಣಿವೆ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಐಐಟಿ ದೆಹಲಿಯ ಇಬ್ಬರು ಮತ್ತು ಐಐಟಿ ಗಾಂಧಿನಗರದ ಇಬ್ಬರು ಸೇರಿದಂತೆ ನಾಲ್ವರ ಸಂಶೋಧಕರ ತಂಡವು ಅಧ್ಯಯನಕ್ಕಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಹರಪ್ಪ ಬಂದರು ನಗರ ಲೋಥಾಲ್‌ನ ಪುರಾತತ್ವ ಅವಶೇಷಗಳಿಗೆ ತೆರಳಿತ್ತು ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ.

ನಾಲ್ವರೂ 10 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಗೋಡೆ ಕುಸಿದು ಮಣ್ಣಿನ ರಾಶಿಯ ಅಡಿಯಲ್ಲಿ ಹೂತುಹೋಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಐಐಟಿ ದೆಹಲಿಯ ಸಂಶೋಧಕಿ ಸುರಭಿ ವರ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!