ಎಎಪಿ ಸಂಸದ ಸಂಜೀವ್ ಅರೋರಾ 
ದೇಶ

ಪಂಜಾಬ್: ಅಕ್ರಮ ಹಣ ವರ್ಗಾವಣೆ ಪ್ರಕರಣ, AAP ಸಂಸದ ಸಂಜೀವ್ ಅರೋರಾ ಮನೆ ಮೇಲೆ ಇಡಿ ದಾಳಿ

ಜಲಂಧರ್‌ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂದ್ ಮತ್ತು ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಅಗರವಾಲ್‌ಗೆ ಸಂಬಂಧಿಸಿದ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.

ಗುರುಗ್ರಾಮ್: AAP ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಮತ್ತಿತರರ ವಿರುದ್ಧದ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಜಲಂಧರ್, ಲೂಧಿಯಾನ, ಗುರುಗ್ರಾಮ್ ಮತ್ತು ದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೂಧಿಯಾನ (ಪಂಜಾಬ್) ಮತ್ತು ಗುರುಗ್ರಾಮ್ ದಲ್ಲಿರುವ (ಹರಿಯಾಣ) 61 ವರ್ಷದ ಅರೋರಾ ಅವರ ಮನೆ ಸೇರಿದಂತೆ ಸುಮಾರು 16-17 ಕಡೆಗಳಲ್ಲಿ ಶೋಧಿಸಲಾಗುತ್ತಿದೆ. ಜಲಂಧರ್‌ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂದ್ ಮತ್ತು ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಅಗರವಾಲ್‌ಗೆ ಸಂಬಂಧಿಸಿದ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಂಜೀವ್ ಅರೋರಾ, ಶೋಧ ಕಾರ್ಯಾಚರಣೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದೇನೆ, ಶೋಧ ಕಾರ್ಯಾಚರಣೆಯ ಕಾರಣದ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಮ್ಮ ಪಕ್ಷದ ಸಂಸದ, ಉದ್ಯಮಿ ವಿರುದ್ಧದ ದಾಳಿ ಪಕ್ಷವನ್ನು ಒಡೆಯುವ ಪ್ರಯತ್ನವಾಗಿದೆ. ಆದರೆ ಎಎಪಿ ಸದಸ್ಯರು ನಿಲ್ಲುವುದಿಲ್ಲ, ಮಾರಾಟವಾಗುವುದಿಲ್ಲ ಮತ್ತು ಹೆದರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಫೋಸ್ಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಶೋಧ ನಡೆಸಲಾಗುತ್ತಿದ್ದು, ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಅರೋರಾ ತನ್ನ ಕಂಪನಿಯ ಹೆಸರಿಗೆ ಕಾನೂನು ಬಾಹಿರವಾಗಿ ಕೈಗಾರಿಕಾ ಪ್ಲಾಟ್ ಅನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG, ಗೆದ್ದ RR ಪ್ಲೇ ಆಫ್ ಕನಸು ಜೀವಂತ!

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

SCROLL FOR NEXT