ಸೋನಮ್ ವಾಂಗ್ಚುಕ್ online desk
ದೇಶ

ಆರ್ ಎಸ್ಎಸ್, ಕೆಲವು ಬಿಜೆಪಿ ನಾಯಕರ ಬೆಂಬಲ ಇದೆ: ನಿರಶನ ನಿರತ ಸೋನಮ್ ವಾಂಗ್ ಚುಕ್

ಆರ್ ಎಸ್ಎಸ್ ನ ಓರ್ವ ಸದಸ್ಯ ಕಳೆದ ರಾತ್ರಿ ತಮ್ಮನ್ನು ಭೇಟಿ ಮಾಡಿದ್ದು, ಬೆಂಬಲವನ್ನು ಸೂಚಿಸಿದ್ದಾರೆ. ಸೊಳ್ಳೆ ನಿವಾರಕ (mosquito repellent) ಗಳನ್ನೂ ನೀಡಿದ್ದಾರೆ ಎಂದು ಸೋನಮ್ ವಾಂಗ್ಚುಕ್ ಹೇಳಿದ್ದಾರೆ.

ಲಡಾಖ್: ತಮಗೆ ಆರ್ ಎಸ್ಎಸ್, ಕೆಲವು ಬಿಜೆಪಿ ನಾಯಕರ ಬೆಂಬಲ ಇದೆ ಎಂದು ನಿರಶನ ನಿರತ ಸೋನಮ್ ವಾಂಗ್ ಚುಕ್ ಹೇಳಿದ್ದಾರೆ.

ಆರ್ ಎಸ್ಎಸ್ ನ ಓರ್ವ ಸದಸ್ಯ ಕಳೆದ ರಾತ್ರಿ ತಮ್ಮನ್ನು ಭೇಟಿ ಮಾಡಿದ್ದು, ಬೆಂಬಲವನ್ನು ಸೂಚಿಸಿದ್ದಾರೆ. ಸೊಳ್ಳೆ ನಿವಾರಕ (mosquito repellent) ಗಳನ್ನೂ ನೀಡಿದ್ದಾರೆ ಎಂದು ಸೋನಮ್ ವಾಂಗ್ಚುಕ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯ ಲಡಾಖ್ ಭವನದಲ್ಲಿ ತಂಗಿರುವ ವಾಂಗ್‌ಚುಕ್ ಅವರನ್ನು ಕೇಂದ್ರ ಸರ್ಕಾರದ ಪ್ರತಿನಿಧಿಯು ಇನ್ನೂ ಸಂಪರ್ಕಿಸಿಲ್ಲ ಎಂದು ಪ್ರತಿಭಟನಾ ನಿರತ ಗುಂಪಿನ ಸದಸ್ಯರೊಬ್ಬರು ತಿಳಿಸಿದ್ದಾರೆ.

'ರಾತ್ರಿ 10.30-11ರ ಸುಮಾರಿಗೆ ಯಾರೋ ಬಂದು ನಮಗಾಗಿ ಸೊಳ್ಳೆ ನಿವಾರಕ ಔಷಧ ತಂದಿದ್ದರು. ಅವರು ಗೇಟ್‌ನಿಂದ ದೂರವಿದ್ದರು ಮತ್ತು ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬಯಸುವುದಿಲ್ಲ ಎಂದು ಹೇಳಿದರು, 'ವಾಂಗ್‌ಚುಕ್ ಭಾನುವಾರದಿಂದ ತನ್ನ ಹಲವಾರು ಬೆಂಬಲಿಗರೊಂದಿಗೆ ಮುಷ್ಕರ ನಡೆಸುತ್ತಿರುವ ವಾಂಗ್ಚುಕ್ ಎಕ್ಸ್‌ನಲ್ಲಿ ಹೇಳಿದ್ದಾರೆ.

ಬಂದಿದ್ದವರು ತಮ್ಮನ್ನು ಪರಿಚಯಿಸಿಕೊಂಡು 'ತಾವು ಆರ್‌ಎಸ್‌ಎಸ್‌ನಲ್ಲಿದ್ದೇನೆ ಮತ್ತು ಬಿಜೆಪಿಗೆ ಹತ್ತಿರವಾಗಿದ್ದೇನೆ ಎಂದು ಹೇಳಿದರು. ನಿಮ್ಮೊಂದಿಗೆ ಮತ್ತು ಲಡಾಖ್ ಜನರೊಂದಿಗೆ ನಮಗೆ ಸಹಾನುಭೂತಿ ಇದೆ, ಆದರೆ ನಾವು ಬಹಿರಂಗವಾಗಿ ನಿಮ್ಮಪರವಾಗಿ ಹೊರಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದನ್ನು ವಾಂಗ್ಚುಕ್ ತಿಳಿಸಿದ್ದಾರೆ.

'ನಿನ್ನೆ ಬಿಜೆಪಿ ಮುಖಂಡ ನರೇಶ್ ಜಿ ಅವರು ಮುರಳಿ ಮನೋಹರ ಜೋಶಿ ಅವರ ವಿಶೇಷ ಸಂದೇಶದೊಂದಿಗೆ ಬಂದಿದ್ದರು. ನ್ಯಾಯದ ವಿಚಾರಕ್ಕೆ ಬಂದಾಗ ಜನತೆಗೆ ಪಕ್ಷ, ಮತಕ್ಕಿಂತ ಹೆಚ್ಚಿನ ಆದ್ಯತೆ ಇದೆ ಎಂದು ನಮಗೆ ಅನಿಸುತ್ತದೆ. ಜನತೆ ಕುರುಡು ಅನುಯಾಯಿಗಳಲ್ಲ, ಅವರು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ,' ಎಂದು ಅವರು ಹೇಳಿದರು ಎಂದು ವಾಂಗ್ಚುಕ್ ತಿಳಿಸಿದ್ದಾರೆ.

ಗುಂಪಿನ ಸದಸ್ಯರ ಪ್ರಕಾರ, ಇಂದು ಬೆಳಿಗ್ಗೆ ಹಲವಾರು ಪ್ರತಿಭಟನಾಕಾರರು ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದರು. ಲಡಾಖ್ ನ್ನು ಆರನೇ ಶೆಡ್ಯೂಲ್ ಸಂವಿಧಾನದಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ವಾಂಗ್‌ಚುಕ್ ತನ್ನ ಬೆಂಬಲಿಗರೊಂದಿಗೆ ಲೇಹ್‌ನಿಂದ ದೆಹಲಿಗೆ ಮೆರವಣಿಗೆ ನಡೆಸಿದ್ದರು. ಅವರನ್ನು ಸೆಪ್ಟೆಂಬರ್ 30 ರಂದು ರಾಜಧಾನಿಯ ಸಿಂಗು ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿ ಅಕ್ಟೋಬರ್ 2 ರ ರಾತ್ರಿ ಬಿಡುಗಡೆ ಮಾಡಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಾಂಗ್ಚುಕ್ ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT