ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್  online desk
ದೇಶ

ಈಗ EVM ಬ್ಯಾಟರಿ ಬಗ್ಗೆಯೂ ಕಾಂಗ್ರೆಸ್ ಆರೋಪ: ಚುನಾವಣಾ ಆಯುಕ್ತ ಹೇಳಿದ್ದೇನೆಂದರೆ...

"ಈಗ ನಾವು ಮುಂದೆ ಏನಾಗಬಹುದು ಎಂದು ಯೋಚಿಸುತ್ತಿದ್ದೇವೆ, ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಹೊಸ ಆರೋಪ ಬರುತ್ತದೆ" ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ EVM ಬ್ಯಾಟರಿ, ಹ್ಯಾಕಿಂಗ್ ಕುರಿತ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ದಿನಾಂಕ ಘೋಷಿಸಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಹರ್ಯಾಣ ವಿಧಾನಸಭಾ ಚುನಾವಣೆ ಮತ ಎಣಿಕೆಯ ವೇಳೆ ಬ್ಯಾಟರಿ ಸಾಮರ್ಥ್ಯ ವ್ಯತ್ಯಯ ಹೊಂದಿದ್ದ ಬೇರೆ ಬೇರೆ ಇವಿಎಂ ಗಳು ಬೇರೆ ಬೇರೆ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತಿದ್ದವು, ಆದ್ದರಿಂದ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಕಾಂಗ್ರೆಸ್ ನ ಈ ಆರೋಪಗಳನ್ನು ಸಿಇಸಿ ರಾಜೀವ್ ಕುಮಾರ್ ತಿರಸ್ಕರಿಸಿದ್ದಾರೆ. ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಬ್ಯಾಟರಿ ಸಾಮರ್ಥ್ಯದ ಸಮಸ್ಯೆಯನ್ನು ಉಲ್ಲೇಖಿಸಿದ CEC ಹ್ಯಾಕಿಂಗ್‌ ಗೆ ಸಂಬಂಧಿಸಿದಂತೆ ಹಿಂದೆ ಆರೋಪಗಳನ್ನು ಮಾಡಲಾಗಿತ್ತು "ಆದರೆ ಬ್ಯಾಟರಿಗೆ ಸಂಬಂಧಿಸಿದಂತೆ ಇದು ಮೊದಲ ಬಾರಿಗೆ ಬಂದಿದೆ" ಎಂದು ಹೇಳಿದರು.

"ಈಗ ನಾವು ಮುಂದೆ ಏನಾಗಬಹುದು ಎಂದು ಯೋಚಿಸುತ್ತಿದ್ದೇವೆ, ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಹೊಸ ಆರೋಪ ಬರುತ್ತದೆ" ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಮತದಾನದ ದಿನಕ್ಕೆ ಸುಮಾರು ಆರು ದಿನಗಳ ಮೊದಲು, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಮತ್ತು ಅಭ್ಯರ್ಥಿಗಳ ಚುನಾವಣಾ ಚಿಹ್ನೆಗಳನ್ನು ಲೋಡ್ ಮಾಡಲಾಗುತ್ತದೆ ಮತ್ತು ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಏಜೆಂಟರ ಸಹಿ ಹೊಂದಿರುವ ಹೊಸ ಬ್ಯಾಟರಿಯನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

"ಇವಿಎಂ ಬಿಡಿ, ಬ್ಯಾಟರಿಗಳು (ಸ್ಥಾಪಿತ) ಸಹ ಅಭ್ಯರ್ಥಿಗಳ ಸಹಿಯನ್ನು ಹೊಂದಿವೆ. ನಮಗೂ (ಈ ನಿಯಮ) ತಿಳಿದಿರಲಿಲ್ಲ ಏಕೆಂದರೆ ಇದನ್ನು ಬಹಳ ಹಿಂದೆಯೇ ರೂಪಿಸಲಾಗಿದೆ. ಈಗ ಅದು ನಮಗೆ ಸಹಾಯ ಮಾಡುತ್ತಿದೆ" ಎಂದು ಅವರು ಬ್ಯಾಟರಿಗೆ ಸಂಬಂಧಿಸಿದ ವಿಶ್ವಾಸಾರ್ಹತೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕೆಲವು ದೇಶದಲ್ಲಿ ಜನರನ್ನು ಸ್ಫೋಟಿಸಲು ಪೇಜರ್‌ಗಳನ್ನು ಬಳಸಬಹುದೇ, ಇವಿಎಂಗಳನ್ನು ಏಕೆ ಹ್ಯಾಕ್ ಮಾಡಬಾರದು ಎಂದು ಜನರು ಕೇಳುತ್ತಾರೆ. ಪೇಜರ್‌ಗಳು ನೆಟ್‌ವರ್ಕ್‌ಗೆ ಸಂಪರ್ಕಗೊಂಡಿವೆ. ಇವಿಎಂಗಳು ಸಂಪರ್ಕ ಹೊಂದಿಲ್ಲ" ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Russian strike: ಉಕ್ರೇನ್‌ ರೈಲು ನಿಲ್ದಾಣದಲ್ಲಿ ರಷ್ಯಾ 'ಡ್ರೋನ್' ದಾಳಿ; ಓರ್ವ ಸಾವು, 30 ಮಂದಿಗೆ ಗಾಯ! Video

ಬೆಂಗಳೂರು: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ; Oyo ರೂಂನಲ್ಲಿ ಮಹಿಳೆ ಆತ್ಮಹತ್ಯೆ!

ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆಯಲ್ಲಿ, ಕೈ ಮುಗಿದು ಕುಳಿತ ನಿತೀಶ್ ಕುಮಾರ್; ವ್ಯಾಪಕ ಟೀಕೆ!: Video

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT