ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು  
ದೇಶ

MGNREGA: ಐದು ತಿಂಗಳಲ್ಲಿ ಪಟ್ಟಿಯಿಂದ 39 ಲಕ್ಷಕ್ಕೂ ಹೆಚ್ಚು ಕೆಲಸಗಾರರನ್ನು ಕೈಬಿಡಲಾಗಿದೆ- NGO ವರದಿ

ಎಲ್ಲಾ MGNREGA ಕೆಲಸಗಾರರಲ್ಲಿ ಶೇಕಡಾ 27.4 ಮತ್ತು ಸಕ್ರಿಯ ಕೆಲಸಗಾರರಲ್ಲಿ ಶೇಕಡಾ 4.2 ರಷ್ಟು ಮಂದಿ ಪ್ರಸ್ತುತ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಪ್ರಯೋಜನಗಳಿಗೆ ಅನರ್ಹರಾಗಿದ್ದಾರೆ.

ನವದೆಹಲಿ: ಈ ವರ್ಷ 2024ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS)ಯಿಂದ 39 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರನ್ನು ತೆಗೆದು ಹಾಕಲಾಗಿದೆ ಎಂದು ನಾಗರಿಕ ಸಮಾಜ ಸಂಸ್ಥೆ ಲಿಬ್‌ಟೆಕ್ ಇಂಡಿಯಾ ಹೇಳಿದೆ.

2022-23 ಮತ್ತು 2023-24 ರ ಆರ್ಥಿಕ ವರ್ಷಗಳಲ್ಲಿ ಎಂಜಿಎನ್‌ಆರ್‌ಇಜಿಎ ನೋಂದಣಿಯಿಂದ ಎಂಟು ಕೋಟಿಗೂ ಹೆಚ್ಚು ಕಾರ್ಮಿಕರನ್ನು ತೆಗೆದುಹಾಕಲಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ಕಡ್ಡಾಯ ಆಧಾರ್ ಸೀಡಿಂಗ್ ನ್ನು ಅನುಸರಿಸದ ಕಾರಣ ದೇಶಾದ್ಯಂತ 6.7 ಕೋಟಿಗೂ ಹೆಚ್ಚು ಕಾರ್ಮಿಕರು ಗ್ರಾಮೀಣ ಉದ್ಯೋಗ ಯೋಜನೆಯಡಿ ಕೆಲಸ ಪಡೆಯಲು ಅನರ್ಹರಾಗಿದ್ದಾರೆ ಎಂದು ಅಂಕಿಅಂಶ ತೋರಿಸುತ್ತದೆ.

ಅವಧಿ ವಿಸ್ತರಣೆಗಳ ಹೊರತಾಗಿಯೂ, ಎಲ್ಲಾ MGNREGA ಕೆಲಸಗಾರರಲ್ಲಿ ಶೇಕಡಾ 27.4 ಮತ್ತು ಸಕ್ರಿಯ ಕೆಲಸಗಾರರಲ್ಲಿ ಶೇಕಡಾ 4.2 ರಷ್ಟು ಮಂದಿ ಪ್ರಸ್ತುತ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಪ್ರಯೋಜನಗಳಿಗೆ ಅನರ್ಹರಾಗಿದ್ದಾರೆ.

ಕೇಂದ್ರ ಸರ್ಕಾರವು ಕಳೆದ ವರ್ಷ ಜನವರಿಯಲ್ಲಿ ರಾಷ್ಟ್ರವ್ಯಾಪಿ ಎಬಿಪಿಎಸ್ ಅನುಷ್ಠಾನವನ್ನು ಕಡ್ಡಾಯಗೊಳಿಸಿತ್ತು. ಆದರೆ, ಸಾರ್ವಜನಿಕ ಆಕ್ರೋಶ ಮತ್ತು ನಾಗರಿಕ ಸಮಾಜದ ಗುಂಪುಗಳ ಒತ್ತಡಕ್ಕೆ ಮಣಿದು, ಎಬಿಪಿಎಸ್ ಅನುಷ್ಠಾನದ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಕಳೆದ ಜನವರಿಯಿಂದ ಎಬಿಪಿಎಸ್ ನ್ನು ಕಡ್ಡಾಯಗೊಳಿಸಲಾಗಿದೆ.

ಎಬಿಪಿಎಸ್ ಅನುಸರಣೆಯಲ್ಲಿ ರಾಜ್ಯ ಮಟ್ಟದ ಅಸಮಾನತೆ ಕಂಡುಬರುತ್ತಿದೆ. ಅಸ್ಸಾಂನಲ್ಲಿ ಎಬಿಪಿಎಸ್‌ಗೆ ಅನರ್ಹವಾಗಿರುವ ಸಕ್ರಿಯ ಕಾರ್ಯಕರ್ತರ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ, ಎಲ್ಲಾ ನೋಂದಾಯಿತ ಕಾರ್ಮಿಕರಲ್ಲಿ, ಮಹಾರಾಷ್ಟ್ರವು ಅತ್ಯಧಿಕ ಶೇಕಡಾವಾರು ಅನರ್ಹ ಕಾರ್ಮಿಕರೊಂದಿಗೆ ಮುಂಚೂಣಿಯಲ್ಲಿದೆ, ಆದರೆ ಆಂಧ್ರಪ್ರದೇಶವು ಕಡಿಮೆ ಹೊಂದಿದೆ.

ಮಹಾರಾಷ್ಟ್ರದ ಎಲ್ಲಾ ಕಾರ್ಮಿಕರಲ್ಲಿ ಶೇಕಡಾ 66.3 ಮತ್ತು ಅಸ್ಸಾಂನಲ್ಲಿ ಶೇಕಡಾ 22 ಸಕ್ರಿಯ ಕಾರ್ಮಿಕರು ಎಬಿಪಿಎಸ್ ಗೆ ಅನರ್ಹರಾಗಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ನರೇಗಾ ಅಡಿಯಲ್ಲಿ ಉದ್ಯೋಗಾವಕಾಶಗಳಲ್ಲಿ ಸಾಕಷ್ಟು ಕುಸಿತವಾಗಿದೆ. ಉದ್ಯೋಗದ ಒಟ್ಟು ವ್ಯಕ್ತಿ-ದಿನಗಳ ಸಂಖ್ಯೆಯು ಕಳೆದ ವರ್ಷ 184 ಕೋಟಿಯಿಂದ ಈ ವರ್ಷ 154 ಕೋಟಿಗೆ ಇಳಿದಿದೆ, ತಮಿಳುನಾಡು ಮತ್ತು ಒಡಿಶಾದಲ್ಲಿ ಸಾಕಷ್ಟು ಕುಸಿತ ಕಂಡುಬಂದಿದೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದಲ್ಲಿ ಏರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT