ಜನಗಣತಿ online desk
ದೇಶ

ಕೇಂದ್ರದಿಂದ 2025ಕ್ಕೆ ಜನಗಣತಿ ಸಾಧ್ಯತೆ; 2028 ಕ್ಕೆ ಲೋಕಸಭೆ ಡಿಲಿಮಿಟೇಶನ್ ಗುರಿ!

ಜನಗಣತಿಯ ಬಳಿಕ ರಾಷ್ಟ್ರವ್ಯಾಪಿ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದ್ದು, 2028 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2025ಕ್ಕೆ ಜನಗಣತಿ ನಡೆಸುವ ಸಾಧ್ಯತೆ ಇದ್ದು 2026 ಕ್ಕೆ ಮುಕ್ತಾಯಗೊಳಿಸುವ ಗುರಿ ಹೊಂದಿದೆ.

ಜನಗಣತಿಯ ಬಳಿಕ ರಾಷ್ಟ್ರವ್ಯಾಪಿ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದ್ದು, 2028 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

2025 ರಲ್ಲಿ ಜಾತಿ ಗಣತಿಯನ್ನು ಹೊರತುಪಡಿಸಿ ಜನಗಣತಿಯನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಸರ್ಕಾರದ ಮೂಲವೊಂದು TNIE ಗೆ ತಿಳಿಸಿದೆ. ಇದು ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷಗಳು ಜಾತಿಗಣತಿ, ಜನಗಣತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವುದಕ್ಕೆ ಅವಕಾಶ ನೀಡದ ಗುರಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2021 ರಲ್ಲಿ ಜನಗಣತಿಯನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿತ್ತು. ಎಂದು ಮೂಲಗಳು ಮತ್ತಷ್ಟು ಸುಳಿವು ನೀಡಿವೆ, ಆದರೆ ದೇಶದಲ್ಲಿ COVID-19 ಸಾಂಕ್ರಾಮಿಕದ ಎರಡನೇ ಅಲೆಯ ಪರಿಣಾಮ ಅದನ್ನು ನಡೆಸಲಾಗಲಿಲ್ಲ.

ಆದರೆ, ಸದ್ಯಕ್ಕೆ ಜನಗಣತಿಯಂತಹ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ನಿರಾಕರಿಸಿದೆ. ದೇಶದ ಕೊನೆಯ ದಶವಾರ್ಷಿಕ ಜನಗಣತಿಯನ್ನು 2011 ರಲ್ಲಿ ನಡೆಸಲಾಯಿತು. ಅದರ ನಂತರ, ಯಾವುದೇ ಜನಗಣತಿ ನಡೆಯಲಿಲ್ಲ, ಆದರೂ ಅದರ ಬೇಡಿಕೆಗಳು ವಿವಿಧ ರಾಜಕೀಯ ಪಕ್ಷಗಳಿಂದ ಮುಂದುವರೆದಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಅದರಲ್ಲೂ ವಿಶೇಷವಾಗಿ ಜಾತಿ ಗಣತಿ ವಿಚಾರದಲ್ಲಿ ಟೀಕೆಗಳನ್ನು ತೀವ್ರಗೊಳಿಸಿದ್ದವು.

ಜಾತಿ ಗಣತಿ ಅಸಂಭವವೆಂದು ಮೂಲಗಳು ಸೂಚಿಸುತ್ತವೆ, ಬದಲಿಗೆ ಸರ್ಕಾರವು ರಾಷ್ಟ್ರೀಯ ಜನಗಣತಿಯೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ.

ಈ ಜನಗಣತಿಯು ಜನಸಂಖ್ಯೆಯ ಬೆಳವಣಿಗೆ, ಅಭಿವೃದ್ಧಿ ಸೂಚ್ಯಂಕಗಳು ಮತ್ತು ದೀರ್ಘಾವಧಿಯ ಯೋಜನೆ ಮತ್ತು ಪರಿಣಾಮಕಾರಿ ಆಡಳಿತಕ್ಕೆ ಅಗತ್ಯವಾದ ಇತರ ಅಂಶಗಳ ಮೇಲೆ ಡೇಟಾವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನಿಗದಿತ ಕಾಲಮಿತಿಯೊಳಗೆ ಜನಗಣತಿಯನ್ನು ಪೂರ್ಣಗೊಳಿಸಲು ದೊಡ್ಡ ಉದ್ಯೋಗಿಗಳನ್ನು ಸಜ್ಜುಗೊಳಿಸುವ ಯೋಜನೆಯನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ.

ಗಮನಾರ್ಹವಾಗಿ, ಭಾರತ 1881 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತಿದೆ. 2011 ರಲ್ಲಿ ನಡೆದ ಕೊನೆಯ ಜನಗಣತಿಯ ಆಧಾರದ ಮೇಲೆ ಭಾರತದ ಜನಸಂಖ್ಯೆಯು 121.1 ಕೋಟಿ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT