ಅಹ್ಮದಾಬಾದ್: ಗುಜರಾತ್ ನ ಪೋರಬಂದರ್ ನಲ್ಲಿ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ ಪತನವಾಗಿ ನಾಪತ್ತೆಯಾಗಿದ್ದ ಮೂವರು ಅಧಿಕಾರಿಗಳ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಪೋರಬಂದರ್ ICG ALH ಹೆಲಿಕಾಪ್ಟರ್ ಪತನವಾಗಿ ಅದರೊಳಗಿದ್ದ 4 ಅಧಿಕಾರಿಗಳ ಓರ್ವನ ರಕ್ಷಿಸಲಾಗಿದ್ದು. ಮೂವರು ನೌಕಾಪಡೆ ಅಧಿಕಾರಿಗಳು ನಾಪತ್ತೆಯಾಗಿದ್ದರು.
ಇದೀಗ ಮೂವರು ಅಧಿಕಾರಿಗಳ ಪೈಕಿ ಕಮಾಂಡೆಂಟ್ ವಿಪಿನ್ ಬಾಬು ಮತ್ತು ಪಿ/ಎನ್‌ವಿಕೆ ಕರಣ್ ಸಿಂಗ್ ಅವರ ಮೃತದೇಹಗಳನ್ನು ಕರಾವಳಿ ಭದ್ರತಾ ಪಡೆಗಳು ಪತ್ತೆ ಮಾಡಿವೆ.
ನಾಪತ್ತೆಯಾಗಿರುವ ಮತ್ತೋರ್ವ ಕಮಾಂಡೆಂಟ್ ರಾಕೇಶ್ ಕುಮಾರ್ ರಾಣಾ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಐಜಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ.
ಏನಿದು ಘಟನೆ?
ಪೋರಬಂದರ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೋಟಾರ್ ಟ್ಯಾಂಕರ್ ಹರಿ ಲೀಲಾದಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ICG ALH ಹೆಲಿಕಾಪ್ಟರ್ ಅನ್ನು ಸೆಪ್ಟೆಂಬರ್ 2 ರಂದು ರಾತ್ರಿ 11 ಗಂಟೆಗೆ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು. ಈ ವೇಳೆ ದುರಂತ ಸಂಭವಿಸಿದೆ.
ನಾಪತ್ತೆಯಾಗಿರುವ ಮತ್ತೋರ್ವ ಅಧಿಕಾರಿಗಾಗಿ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ಕು ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಿದ್ದು, ವಿಮಾನದ ಅವಶೇಷಗಳನ್ನು ಪತ್ತೆ ಮಾಡಲಾಗಿದೆ.