ಸಾಂದರ್ಭಿಕ ಚಿತ್ರ  
ದೇಶ

ಅವಿವಾಹಿತೆಯರ ಗರ್ಭಪಾತ: ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಬೆಂಬಲ, ಸಮೀಕ್ಷೆಯಲ್ಲಿ ಬಹಿರಂಗ!

ದೇಶದಲ್ಲಿ ಮೊದಲ ಬಾರಿಗೆ ನಡೆಸಿದ ಈ ಸಮೀಕ್ಷೆಯು, ಹೆಚ್ಚಿನ ಮಹಿಳೆಯರು ಈ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಹೆಣ್ಣುಮಕ್ಕಳನ್ನು ಬೆಂಬಲಿಸಿದರೆ,ತಾವು ಮುಖ್ಯವಾಗಿ ತೀರ್ಮಾನ ತೆಗೆದುಕೊಳ್ಳುವವರು ಎಂದು ಹೇಳಲು ಎರಡೂ ಲಿಂಗಗಳ ಬಹುತೇಕ ಮಂದಿ ಒಪ್ಪುವುದಿಲ್ಲ.

ನವದೆಹಲಿ: ಯುವ ವಯಸ್ಕರು ಮುಖ್ಯವಾಗಿ ಪುರುಷರು, ಕಡಿಮೆ ಶಿಕ್ಷಣ ಹೊಂದಿರುವ ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದಿರುವವರು ಗರ್ಭಪಾತದ ಬಗ್ಗೆ ಮುಕ್ತವಾಗಿ ಚರ್ಚಿಸುವುದಿಲ್ಲ, ಹೆಣ್ಣುಮಕ್ಕಳು ಗರ್ಭಪಾತ ಮಾಡಿಸಿಕೊಳ್ಳಲು ಅಷ್ಟು ಸುಲಭವಾಗಿ ಮನಸ್ಸು ತೋರುವುದಿಲ್ಲ ಎಂದು ರಾಷ್ಟ್ರವ್ಯಾಪಿ ಸಮೀಕ್ಷೆಯೊಂದು ತಿಳಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ನಡೆಸಿದ ಈ ಸಮೀಕ್ಷೆಯು, ಹೆಚ್ಚಿನ ಹೆಣ್ಣುಮಕ್ಕಳು ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಹೆಣ್ಣುಮಕ್ಕಳನ್ನು ಬೆಂಬಲಿಸಿದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಬಯಸುತ್ತಾರೆ.

ಸಮೀಕ್ಷೆಯ ಪ್ರಕಾರ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇನ್ನೊಬ್ಬ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಬೆಂಬಲ ನೀಡುವುದು ಹೆಚ್ಚು. ನಿನ್ನೆ ಬಿಡುಗಡೆಯಾದ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಐಪಾಸ್ ಡೆವಲಪ್‌ಮೆಂಟ್ ಫೌಂಡೇಶನ್ (IDF) ನಡೆಸಿದೆ. ಇದು ಲಾಭರಹಿತ ಸಂಸ್ಥೆಯಾಗಿದ್ದು, ಸುರಕ್ಷಿತ, ಗೌರವಾನ್ವಿತ ಮತ್ತು ಆಕಸ್ಮಿಕ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣುಮಕ್ಕಳ ತೀರ್ಮಾನ ಮತ್ತು ಆಯ್ಕೆ ಸ್ವಾತಂತ್ರ್ಯದ ಮೇಲೆ ಹೆಚ್ಚು ಗಮನ ಹರಿಸಿದೆ.

18ರಿಂದ 24 ವರ್ಷ ವಯಸ್ಸಿನವರಿಗೆ ಹೋಲಿಸಿದರೆ 32 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಗರ್ಭಪಾತದ ಬಗ್ಗೆ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸುಲಭವಾಗಿ ಆರಾಮದಾಯಕವಾಗಿ ಮಾತನಾಡುತ್ತಾರೆ, ಬೇಡದ ಮತ್ತು ಒಲ್ಲದ ಗರ್ಭಪಾತಕ್ಕೆ ಕೂಡ ಬೆಂಬಲ ನೀಡುತ್ತಾರೆ.

13,255 ಪ್ರತಿಕ್ರಿಯೆಗಳನ್ನು ಪಡೆದ ದೇಶ ಮಟ್ಟದ ಸಮೀಕ್ಷೆಯು ಶೇಕಡಾ 59ರಷ್ಟು ಮಹಿಳೆಯರು, ಹತ್ತರಲ್ಲಿ ಏಳು ಮಂದಿ (71 ಪ್ರತಿಶತ) ಗರ್ಭಪಾತದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆಂದು ತೋರಿಸಿದೆ. ಅವಿವಾಹಿತ ವ್ಯಕ್ತಿಗೆ ಗರ್ಭಪಾತ ವಿಷಯದಲ್ಲಿ ಇದು ಶೇಕಡಾ 62ಕ್ಕೆ ಇಳಿಕೆಯಾಗಿದೆ.

ಸಮೀಕ್ಷೆಯಲ್ಲಿ ಶೇಕಡಾ 70ರಷ್ಟು ಜನರು ಗರ್ಭಪಾತ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದಾರೆ ಶೇಕಡಾ 65ರಷ್ಟು ಮಂದಿ ಮಾತ್ರ ಕುಟುಂಬ ಸದಸ್ಯರ ಜೊತೆ ಹೇಳಿಕೊಳ್ಳುತ್ತಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅವಿವಾಹಿತರಿಗೆ ಗರ್ಭಪಾತವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚು. ಗರ್ಭಪಾತದ ಬಗೆಗಿನ ವರ್ತನೆಗಳ ಮೇಲೆ ಪ್ರಭಾವ ಬೀರುವಲ್ಲಿ ಶಿಕ್ಷಣವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಅಧ್ಯಯನವು ಹೇಳಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು 18 ರಿಂದ 46 ವರ್ಷ ವಯಸ್ಸಿನವರು, ಉನ್ನತ ಮಾಧ್ಯಮಿಕ ಶಿಕ್ಷಣ ಅರ್ಹತೆಯನ್ನು (ಶೇಕಡಾ 23 ), ನಂತರ ಪದವೀಧರರು (ಶೇಕಡಾ 21 ), ಆದರೆ ಶೇಕಡಾ 4ರಷ್ಟು ಔಪಚಾರಿಕ ಶಿಕ್ಷಣವನ್ನು ಪಡೆದವರಾಗಿದ್ದಾರೆ.

ಭಾರತದಲ್ಲಿ, ಪ್ರತಿ ವರ್ಷ ಅಂದಾಜು 15.6 ಮಿಲಿಯನ್ ಗರ್ಭಪಾತಗಳು ಸಂಭವಿಸುತ್ತವೆ. ಎಲ್ಲಾ ಗರ್ಭಧಾರಣೆಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಗರ್ಭಪಾತಗಳು. ತುಂಬಾ ಸಾಮಾನ್ಯವಾಗಿದ್ದರೂ, ಗರ್ಭಪಾತದ ಬಗ್ಗೆ ಬಹುತೇಕರು ಮುಕ್ತವಾಗಿ ಮಾತನಾಡದೆ ಇರುತ್ತಾರೆ ಎಂದು IDF ನ ಮುಖ್ಯ ತಾಂತ್ರಿಕ ಅಧಿಕಾರಿ, ಸಂಶೋಧನೆ ಮತ್ತು ಮೌಲ್ಯಮಾಪನದ ಸುಶಾಂತ ಕೆ. ಬ್ಯಾನರ್ಜಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕಾನೂನುಬಾಹಿರ ಕ್ಲಿನಿಕ್‌ಗಳಲ್ಲಿ ಗರ್ಭಪಾತವನ್ನು ಬಯಸುತ್ತಿರುವ ಹದಿಹರೆಯದ ಹುಡುಗಿಯರ ಬಗ್ಗೆ, IDF ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋಜ್ ಮ್ಯಾನಿಂಗ್, ನಿಜವಾದ ಪ್ರಶ್ನೆಯೆಂದರೆ, ಸಮಾಜವಾಗಿ ನಾವು ಏನು ಮಾಡುತ್ತಿದ್ದೇವೆ ಎಂಬುದು. ಈ ಅಸುರಕ್ಷಿತ ಗರ್ಭಪಾತ ಆಯ್ಕೆಗಳಿಗೆ ಅವರನ್ನು ಹೇಗೆ ಪ್ರೇರೇಪಿಸುತ್ತದೆ ಎಂಬುದು ಮುಖ್ಯವಾಗುತ್ತದೆ.

ಹದಿಹರೆಯದ ಹುಡುಗಿಯರು ತಮ್ಮ ದೈಹಿಕ ಸ್ವಾಯತ್ತತೆ ಮತ್ತು ಸಂತಾನೋತ್ಪತ್ತಿ ಆಯ್ಕೆಗಳಿಗೆ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂಬ ಕಲ್ಪನೆಯನ್ನು ಗುರುತಿಸುವ ಮತ್ತು ಒಪ್ಪಿಸುವ ಮೂಲಕ ನಾವು ಪ್ರಾರಂಭಿಸಬೇಕಾಗಿದೆ. ಅಲ್ಲಿಂದ, ಸಮಾಜಕ್ಕೆ, ಕಾನೂನು ಮತ್ತು ನೀತಿಯ ಚೌಕಟ್ಟುಗಳು ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಈ ಹೆಣ್ಣುಮಕ್ಕಲು ನ್ಯಾಯಸಮ್ಮತವಲ್ಲದ ಗರ್ಭಪಾತದ ಆರೈಕೆಯನ್ನು ಪ್ರವೇಶಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT