ಮನೀಶ್ ಸಿಸೋಡಿಯಾ 
ದೇಶ

ಶಿಕ್ಷಕರಿಗೆ ಐಎಎಸ್‌ ಅಧಿಕಾರಿಗಳಿಗಿಂತ ಹೆಚ್ಚು ವೇತನ ನೀಡಬೇಕು: ಸಿಸೋಡಿಯಾ

"ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಶಿಕ್ಷಕರ ಸಂಬಳವು ಅಲ್ಲಿನ ಅಧಿಕಾರಶಾಹಿಗಳಿಗಿಂತ ಹೆಚ್ಚಾಗಿದೆ. ಐದು ವರ್ಷ ಅನುಭವ ಹೊಂದಿರುವ ಶಿಕ್ಷಕರು ಒಬ್ಬ ಐಎಎಸ್ ಅಧಿಕಾರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ".

ನವದೆಹಲಿ: 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಶಿಕ್ಷಕರ ವೇತನವು ಐಎಎಸ್ ಅಧಿಕಾರಿಗಿಂತ ಹೆಚ್ಚಾಗಬೇಕು ಎಂದು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಗುರುವಾರ ಹೇಳಿದ್ದಾರೆ.

ಇಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಆಯೋಜಿಸಿದ್ದ 'ಶಿಕ್ಷಕ ಸಮ್ಮಾನ್ ಸಮಾರೋಹ್' ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ, "ಇಂದು, 2047 ರ ಭಾರತದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಲ್ಲಿ ಕುಳಿತಿರುವ ಶಿಕ್ಷಕರು, ನಿಮ್ಮೊಂದಿಗೆ ಇರುವ ಮಕ್ಕಳು 2047ಕ್ಕೆ ಬಹಳ ಮುಖ್ಯ. 2047ರ ಅಭಿವೃದ್ಧಿ ಹೊಂದಿದ ಭಾರತ ಈ ಮಕ್ಕಳ ಮೇಲೆ ಅವಲಂಬಿತವಾಗಿದೆ ಎಂದರು.

"ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಶಿಕ್ಷಕರ ಸಂಬಳವು ಅಲ್ಲಿನ ಅಧಿಕಾರಶಾಹಿಗಳಿಗಿಂತ ಹೆಚ್ಚಾಗಿದೆ. ಐದು ವರ್ಷಗಳ ಅನುಭವ ಹೊಂದಿರುವ ಶಿಕ್ಷಕರು ಒಬ್ಬ ಐಎಎಸ್ ಅಧಿಕಾರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ" ಎಂದು ಸಿಸೋಡಿಯಾ ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇತರ ಕೆಲವು ದೇಶಗಳ ಉದಾಹರಣೆ ನೀಡಿದರು.

ಇದೇ ವೇಳೆ ತಾವು ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಬಗ್ಗೆ ಮಾತನಾಡಿದ ಸಿಸೋಡಿಯಾ, ಪ್ರತಿದಿನ 8-10 ಗಂಟೆಗಳ ಕಾಲ ಪುಸ್ತಕಗಳನ್ನು ಓದುತ್ತಿದ್ದೆ ಮತ್ತು ವಿವಿಧ ದೇಶಗಳ ಶಿಕ್ಷಣ ವ್ಯವಸ್ಥೆಯನ್ನು ತಿಳಿದುಕೊಂಡೆ. "ಕಳೆದ ಒಂದೂವರೆ ವರ್ಷ ನಾನು ನನ್ನ ಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದರು.

ನಾವು ಕಷ್ಟಕರ ಸಂದರ್ಭಗಳಲ್ಲಿದ್ದಾಗ ನಮಗೆ ಶಿಕ್ಷಕರು ಕಲಿಸಿದ ಪಾಠಗಳು ಹೆಚ್ಚು ಉಪಯುಕ್ತವಾಗುತ್ತವೆ. ನಾನು ಜೈಲಿನಲ್ಲಿದ್ದಾಗ ಸಾಕಷ್ಟು ಅಧ್ಯಯನ ಮಾಡಿದ್ದೇನೆ. 8-10 ಗಂಟೆಗಳ ಕಾಲ ಪುಸ್ತಕಗಳನ್ನು ಓದುತ್ತಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ, ಭಾರತದ ಶಿಕ್ಷಣ ವ್ಯವಸ್ಥೆ ಬಗ್ಗೆ, ವಿಶ್ವದ ಶಿಕ್ಷಣ ವ್ಯವಸ್ಥೆ ಬಗ್ಗೆ ಓದಿದ್ದೇನೆ ಎಂದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಸೋಡಿಯಾ 17 ತಿಂಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

SCROLL FOR NEXT