ಮೋವ್ ದಾಳಿಯ ಆರೋಪಿಗಳ ಬಂಧನ online desk
ದೇಶ

ಮೊವ್ ದಾಳಿ: ಎಲ್ಲಾ 6 ಆರೋಪಿಗಳ ಬಂಧನ, ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ!

ದಾಳಿಯ ವೇಳೆ ಪ್ರವಾಸಿ ತಾಣದಲ್ಲಿ ಇದ್ದ 23, 24 ವಯಸ್ಸಿನ ಅಧಿಕಾರಿಗಳು ಮೊವ್ ಕಂಟೋನ್ಮೆಂಟ್ ಟೌನ್‌ನಲ್ಲಿರುವ ಇನ್‌ಫೆಂಟ್ರಿ ಸ್ಕೂಲ್‌ನಲ್ಲಿ ಯುವ ಅಧಿಕಾರಿಗಳ ಕೋರ್ಸ್ ನ ಭಾಗವಾಗಿದ್ದಾರೆ.

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಮೊವ್ ನಲ್ಲಿ ಇಬ್ಬರು ಸೇನಾ ಅಧಿಕಾರಿಗಳ ವಿರುದ್ಧ 6 ಮಂದಿಯ ಗ್ಯಾಂಗ್ ದಾಳಿ ನಡೆಸಿದ್ದು ಎಲ್ಲಾ 6 ಆರೋಪಿಗಳನ್ನು ಬಂಧಿಸಲಾಗಿದೆ.

ಈ ಮಧ್ಯೆ ಸೇನಾ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ. ಮೊವ್ ಸೇನಾ ಕಂಟೋನ್ಮೆಂಟ್ ನಿಂದ 30 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಇಬ್ಬರು ಸೇನಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ 6 ಮಂದಿಯ ತಂಡ, ಸೇನಾ ಅಧಿಕಾರಿಗಳೊಂದಿಗೆ ಇದ್ದ ಅಧಿಕಾರಿಗಳ ಮಹಿಳಾ ಸ್ನೇಹಿತರ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ಸೆ.10-11 ನ್ನು ಸಂಧಿಸುವ ಮಧ್ಯ ರಾತ್ರಿಯಲ್ಲಿ ನಡೆದಿತ್ತು.

ದಾಳಿಯ ವೇಳೆ ಪ್ರವಾಸಿ ತಾಣದಲ್ಲಿ ಇದ್ದ 23, 24 ವಯಸ್ಸಿನ ಅಧಿಕಾರಿಗಳು ಮೊವ್ ಕಂಟೋನ್ಮೆಂಟ್ ಟೌನ್‌ನಲ್ಲಿರುವ ಇನ್‌ಫೆಂಟ್ರಿ ಸ್ಕೂಲ್‌ನಲ್ಲಿ ಯುವ ಅಧಿಕಾರಿಗಳ ಕೋರ್ಸ್ ನ ಭಾಗವಾಗಿದ್ದಾರೆ. "ಇಬ್ಬರು ತರಬೇತಿ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಮತ್ತು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ನಡೆಯುತ್ತಿದೆ" ಎಂದು ಸೇನಾ ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ಮ್ಹೋವ್‌ನಿಂದ ಫೋನ್‌ನಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ದುರದೃಷ್ಟಕರ ಪಿಕ್ನಿಕ್ ಸಮಯದಲ್ಲಿ ಇಬ್ಬರು ಅಧಿಕಾರಿಗಳ ಜೊತೆಗಿದ್ದ ಮಹಿಳೆಯರು "ಹಳೆಯ ಪರಿಚಯಸ್ಥರಾಗಿದ್ದಾರೆ" ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹ ಮಾಡುತ್ತಿರುವಂತೆ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದವರಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಮಹಿಳೆಯರು ಗ್ಯಾಂಗ್‌ನ ಭಾಗವಾಗಿರಬಹುದು ಎಂಬ ಅಸಡ್ಡೆಯ ಮಾತನ್ನು ಅಲ್ಲಗಳೆದಿರುವ, ಹಿರಿಯ ಅಧಿಕಾರಿ ಅವರು "ಇಬ್ಬರು ಲೆಫ್ಟಿನೆಂಟ್‌ಗಳನ್ನು ಭೇಟಿಯಾಗಲು ನಿಲ್ದಾಣದಿಂದ ಹೊರಗೆ ಬಂದ ಕೆಲಸ ಮಾಡುವ ಮಹಿಳೆಯರು" ಎಂದು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಇಬ್ಬರು ಲೆಫ್ಟಿನೆಂಟ್‌ಗಳು ಜಮ್ ಗೇಟ್‌ಗೆ ಪಿಕ್ನಿಕ್‌ಗಾಗಿ ಮಹಿಳೆಯರೊಂದಿಗೆ ಹೋಗಿದ್ದರು, ಇದು ಮಾನ್ಸೂನ್‌ನಲ್ಲಿ ಹಗಲಿನ ವೇಳೆಯಲ್ಲಿ ಸಾಕಷ್ಟು ಪ್ರವಾಸಿಗರನ್ನು ಪಡೆಯುತ್ತದೆ ಆದರೆ ರಾತ್ರಿಯ ನಂತರ ನಿರ್ಜನವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!