ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ 
ದೇಶ

ನೊಬೆಲ್ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕೆಲ ನಾಯಕರು ಉಕ್ರೇನ್ ನಲ್ಲಿ ನಿಜವಾದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ: ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ

ಶಾಂತಿಯನ್ನು ಹುಡುಕುವ ಯಾವುದೇ ಸಮಾನಾಂತರ ಅಥವಾ ಪರ್ಯಾಯ ಪ್ರಯತ್ನಗಳು ವಾಸ್ತವವಾಗಿ, ಯುದ್ಧದ ಅಂತ್ಯದ ಬದಲು ವಿರಾಮವನ್ನು ಸಾಧಿಸುವ ಪ್ರಯತ್ನಗಳಾಗಿವೆ ಎಂದರು.

ನವದೆಹಲಿ: ನೊಬೆಲ್ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕೆಲವರು ಶಾಂತಿ ಪರಿಸ್ಥಿತಿ ತರಲು ಮಧ್ಯಸ್ಥಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ನಿಜವಾದ ಶಾಂತಿ ಸ್ಥಾಪನೆಯ ಉದ್ದೇಶದಿಂದ ಅಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಟೀಕಿಸಿದ್ದಾರೆ.

ಜಾಗತಿಕ ಉಪಕ್ರಮವಾಗಿ ಶಾಂತಿ-ಸೂತ್ರವು ಈಗಾಗಲೇ ಎರಡು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಬಹುತೇಕರು ತಮ್ಮ ರಾಜಕೀಯ ಜೀವನಚರಿತ್ರೆಗಾಗಿ ನಿಜವಾದ ಶಾಂತಿಯ ಬದಲಿಗೆ ಕದನ ವಿರಾಮಕ್ಕಾಗಿ ನೊಬೆಲ್ ಪ್ರಶಸ್ತಿ ಬಯಸುತ್ತಾರೆ, ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಿಮಗೆ ಪ್ರತಿಯಾಗಿ ನೀಡುವ ಏಕೈಕ ಬಹುಮಾನವೆಂದರೆ ಇನ್ನಷ್ಟು ಸಂಕಟಗಳು ಮತ್ತು ವಿಪತ್ತುಗಳು ಎಂದು ನ್ಯೂಯಾರ್ಕ್‌ನಲ್ಲಿ ನಿನ್ನೆ ಯುಎನ್‌ಜಿಎಯನ್ನು ಉದ್ದೇಶಿಸಿ ಝೆಲೆನ್ಸ್ಕಿ ಹೇಳಿದರು.

ಆರೋಪ ಮಾಡುವಾಗ ಅವರು ಯಾರನ್ನೂ ಹೆಸರಿಸದಿದ್ದರೂ, ಪ್ರಪಂಚದಾದ್ಯಂತ ಜನರ ಸೆಳೆಯಲು ಪ್ರಾರಂಭಿಸಿರುವ ಅನೇಕ ತೀರ್ಮಾನಗಳಿವೆ. ಇದು ಉಕ್ರೇನ್ ಮತ್ತು ರಷ್ಯಾವನ್ನು ಶಾಂತಿಯುತವಾಗಿ ಮಾತನಾಡಲು ಪ್ರಯತ್ನಿಸುತ್ತಿರುವ ಎಲ್ಲಾ ನಾಯಕರನ್ನು ಒಳಗೊಂಡಿದೆ. ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ಎ ಅಧ್ಯಕ್ಷರಾಗಿ ಮರು ಆಯ್ಕೆಯಾದ ಕೂಡಲೇ ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು.

ಶಾಂತಿಯನ್ನು ಹುಡುಕುವ ಯಾವುದೇ ಸಮಾನಾಂತರ ಅಥವಾ ಪರ್ಯಾಯ ಪ್ರಯತ್ನಗಳು ವಾಸ್ತವವಾಗಿ, ಯುದ್ಧದ ಅಂತ್ಯದ ಬದಲು ವಿರಾಮವನ್ನು ಸಾಧಿಸುವ ಪ್ರಯತ್ನಗಳಾಗಿವೆ ಎಂದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷವು ಫೆಬ್ರವರಿ 24, 2022 ರಂದು ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೇರಿದಂತೆ ಅನೇಕ ವಿಶ್ವ ನಾಯಕರು ಸಂಘರ್ಷಕ್ಕೆ ಅಂತ್ಯಹಾಡಲು ಪ್ರಯತ್ನಿಸುತ್ತಿದ್ದು ಉಕ್ರೇನ್ ಮತ್ತು ರಷ್ಯಾವನ್ನು ಒತ್ತಾಯಿಸುತ್ತಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷದ ಅಂತ್ಯವನ್ನು ಭಾರತ ಯಾವಾಗಲೂ ಪುನರುಚ್ಚರಿಸಿದೆ.

ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಶಾಂತಿ ಪ್ರಕ್ರಿಯೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಮತ್ತೊಂದೆಡೆ ಎರಡನೇ ಶಾಂತಿ ಶೃಂಗಸಭೆಗೆ ಭಾರತವನ್ನು ಆಹ್ವಾನಿಸಲಾಗಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT