ಸುಪ್ರೀಂ ಕೋರ್ಟ್ online desk
ದೇಶ

ಸುಪ್ರೀಂ ಕೋರ್ಟ್ ನೆರವು: ಶುಲ್ಕ ಪಾವತಿಸಲು ಸಾಧ್ಯವಾಗದ ದಲಿತ ವಿದ್ಯಾರ್ಥಿಗೆ ಐಐಟಿ ಪ್ರವೇಶ

ಅತುಲ್ ಕುಮಾರ್ ಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಬಿಟೆಕ್ ಕೋರ್ಸ್‌ಗೆ ಪ್ರವೇಶ ನೀಡುವುದಕ್ಕೆ ಐಐಟಿ ಧನ್‌ಬಾದ್‌ಗೆ ಸೂಚನೆ ನೀಡಲು ಉನ್ನತ ನ್ಯಾಯಾಲಯ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿದೆ.

ನವದೆಹಲಿ: ಐಐಟಿ ಧನ್ಬಾದ್ ನಲ್ಲಿ ಶುಲ್ಕ ಪಾವತಿಸಲು ಹಣವಿಲ್ಲದೇ ಪ್ರವೇಶ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದ ದಲಿತ ಯುವಕನ ನೆರವಿಗೆ ಸುಪ್ರೀಂ ಕೋರ್ಟ್ ಧಾವಿಸಿದೆ.

ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಬಿಟೆಕ್ ಕೋರ್ಸ್ ಗೆ ಆತನಿಗೆ ಪ್ರವೇಶ ಕಲ್ಪಿಸುವುದಕ್ಕೆ ಸೂಚನೆ ನೀಡಿದ್ದು, ಇಂತಹ ಯುವ ಪ್ರತಿಭಾನ್ವಿತ ಯುವಕರು ಬಿಟ್ಟು ಹೋಗುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಡಿವೈ ಚಂದ್ರಚೂಡ್ ಹಾಗೂ ನ್ಯಾ. ಜೆಬಿ ಪರ್ದಿವಾಲ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

ಅತುಲ್ ಕುಮಾರ್ ಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಬಿಟೆಕ್ ಕೋರ್ಸ್‌ಗೆ ಪ್ರವೇಶ ನೀಡುವುದಕ್ಕೆ ಐಐಟಿ ಧನ್‌ಬಾದ್‌ಗೆ ಸೂಚನೆ ನೀಡಲು ಉನ್ನತ ನ್ಯಾಯಾಲಯ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿದೆ. "ಪ್ರವೇಶವನ್ನು ಪಡೆಯಲು ಎಲ್ಲಾ ಅರ್ಹತೆ ಪಡೆದ ಗುಂಪಿಗೆ ಸೇರಿದ ಅರ್ಜಿದಾರರಂತಹ ಪ್ರತಿಭಾವಂತ ವಿದ್ಯಾರ್ಥಿಯನ್ನು ಬಿಡಬಾರದು ಎಂದು ನಾವು ಭಾವಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

ಐಐಟಿ ಧನ್‌ಬಾದ್‌ಗೆ ಅಭ್ಯರ್ಥಿಗೆ ಪ್ರವೇಶ ನೀಡುವಂತೆ ನಾವು ನಿರ್ದೇಶಿಸುತ್ತೇವೆ ಮತ್ತು ಶುಲ್ಕವನ್ನು ಪಾವತಿಸಿದರೆ ಅವರಿಗೆ ಪ್ರವೇಶ ನೀಡಲಾಗುತ್ತಿದ್ದ ಅದೇ ಬ್ಯಾಚ್‌ನಲ್ಲಿ ಪ್ರವೇಶ ಕಲ್ಪಿಸಬೇಕು, ”ಎಂದು ಪೀಠ ಆದೇಶದಲ್ಲಿ ಹೇಳಿದೆ. ನ್ಯಾಯದ ಹಿತದೃಷ್ಟಿಯಿಂದ ಯಾವುದೇ ಆದೇಶವನ್ನು ಹೊರಡಿಸಲು ನ್ಯಾಯಾಲಯಕ್ಕೆ ಸಂವಿಧಾನದ 142 ನೇ ವಿಧಿ ಉನ್ನತ ಅಧಿಕಾರವನ್ನು ನೀಡುತ್ತದೆ.

18 ವರ್ಷದ ಅತುಲ್ ಕುಮಾರ್ ಪೋಷಕರು ಜೂನ್ 24 ರೊಳಗೆ ಸ್ವೀಕಾರ ಶುಲ್ಕವಾಗಿ ರೂ 17,500 ಠೇವಣಿ ಮಾಡಲು ವಿಫಲರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT