ಸಂಗ್ರಹ ಚಿತ್ರ 
ದೇಶ

ನನ್ನ ಮಗಳಿಗೆ ನ್ಯಾಯ ಬೇಕು: ಪಂಜಾಬ್‌ನ ಮತ್ತೊಬ್ಬ ಪಾದ್ರಿ ವಿರುದ್ಧ ಅತ್ಯಾಚಾರ, ಕೊಲೆ ಆರೋಪ; ಸಿಬಿಐ ತನಿಖೆಗೆ ಒತ್ತಾಯ

ಜಶನ್ ಗಿಲ್ 2023ರಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆ ಗರ್ಭಿಣಿಯಾದಳು. ನಂತರ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಬಜಿಂದರ್ ಸಿಂಗ್ ಅತ್ಯಾಚಾರ ಪ್ರಕರಣವನ್ನು ನೆನಪಿಸುವ ಈ ಮನಕಲಕುವ ಘಟನೆಯಲ್ಲಿ, ಪಂಜಾಬ್‌ನ ಮತ್ತೊಬ್ಬ ಪಾದ್ರಿ ಜಶನ್ ಗಿಲ್ 22 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ ಆರೋಪ ಹೊರಿಸಲಾಗಿದೆ. ಇದು ಆಕೆಯ ಸಾವಿಗೆ ಕಾರಣ ಎಂದು ಸಂತ್ರಸ್ತೆ ತಂದೆ ಗಂಭೀರ ಆರೋಪ ಮಾಡಿದ್ದಾರೆ.

ಜಶನ್ ಗಿಲ್ 2023ರಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆ ಗರ್ಭಿಣಿಯಾದಳು. ನಂತರ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಗರ್ಭಪಾತವನ್ನು ಅಜಾಗರೂಕತೆಯಿಂದ ನಡೆಸಲಾಯಿತು. ಇದು 22 ವರ್ಷದ ಯುವತಿಯ ಸಾವಿಗೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ. ನನ್ನ ಮಗಳಿಗೆ ನ್ಯಾಯ ಬೇಕು... ಪಂಜಾಬ್ ಪೊಲೀಸರು ಏನೂ ಮಾಡಲಿಲ್ಲ. ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇನೆ... ಸಿಬಿಐ ತನಿಖೆಗೆ ಒತ್ತಾಯಿಸಿ ನಾನು ಹೈಕೋರ್ಟ್ ಅನ್ನು ಸಹ ಸಂಪರ್ಕಿಸಿದ್ದೇನೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

2018ರ ಅತ್ಯಾಚಾರ ಪ್ರಕರಣದಲ್ಲಿ ಪಂಜಾಬ್‌ನ ಮೊಹಾಲಿಯ ನ್ಯಾಯಾಲಯವು ಏಪ್ರಿಲ್ 1ರ ಮಂಗಳವಾರ ಪಂಜಾಬ್‌ನ ಪಾದ್ರಿ ಬಜಿಂದರ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯ ಅಬುಲ್ ಖೈರ್ ಗ್ರಾಮದವರು. ತನ್ನ ಮಗಳು ಮತ್ತು ಕುಟುಂಬದ ಇತರ ಸದಸ್ಯರು ಹಳ್ಳಿಯಲ್ಲಿರುವ ಚರ್ಚ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಜಶನ್ ಗಿಲ್ ತನ್ನ ಮಗಳನ್ನು ದಾರಿ ತಪ್ಪಿಸಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂದು ತಂದೆ ಹೇಳಿಕೊಂಡಿದ್ದಾರೆ.

ಗರ್ಭವತಿ ಆದ ನಂತರ ಜಶನ್ ಗಿಲ್ ಯುವತಿಗೆ ಗರ್ಭಪಾತಕ್ಕೆ ಒಳಪಡಿಸಿದರು. ಇದು ಅಜಾಗರೂಕತೆಯಿಂದ ನಡೆದಿದ್ದು ಇದು ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಅಂತಿಮವಾಗಿ ಆಕೆಯ ಸಾವಿಗೆ ಕಾರಣವಾಯಿತು ಎಂದು ಆರೋಪಿಸಿದರು. ಅತ್ಯಾಚಾರ ಘಟನೆಯ ನಂತರ, ತನಗೆ ಸಾಕಷ್ಟು ಬೆದರಿಕೆಗಳು ಬರಲು ಪ್ರಾರಂಭಿಸಿದ ಕಾರಣ ಅಬುಲ್ ಖೈರ್ ಗ್ರಾಮವನ್ನು ತೊರೆಯುವಂತೆ ಒತ್ತಾಯಿಸಲಾಯಿತು ಎಂದು 22 ವರ್ಷದ ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಮಾರ್ಚ್ 28 ರಂದು, 'ಯೇಶು ಯೇಸು ಪ್ರವಾದಿ' ಎಂದು ಪ್ರಸಿದ್ಧರಾಗಿದ್ದ ಸ್ವಯಂ ಘೋಷಿತ ಕ್ರಿಶ್ಚಿಯನ್ ದೇವಮಾನವ ಪಾದ್ರಿ ಬಜಿಂದರ್ ಸಿಂಗ್ ಅವರನ್ನು 2018ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ಮಂಗಳವಾರ, ಏಪ್ರಿಲ್ 1 ರಂದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT