ಸಾಂದರ್ಭಿಕ ಚಿತ್ರ 
ದೇಶ

Bihar | ಬಂಕಾದಲ್ಲಿ ಎನ್‌ಕೌಂಟರ್‌: ಸ್ವಘೋಷಿತ ಮಾವೋವಾದಿ ಕಮಾಂಡರ್ ಹತ್ಯೆ

ಬಂಕಾ ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐ (ಮಾವೋವಾದಿ)ಯ ಸ್ವಯಂ ಘೋಷಿತ ಏರಿಯಾ ಕಮಾಂಡರ್ 35 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತ ಮಾವೋವಾದಿಯನ್ನು ರಮೇಶ್ ತುಡು ಅಲಿಯಾಸ್ ಟೆಡುವಾ ಎಂದು ಗುರುತಿಸಲಾಗಿದ್ದು, ಆತನ ಹತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಬಿಹಾರ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ ಸಕ್ರಿಯನಾಗಿದ್ದ.

ಬಂಕಾ ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರನ್ನು ಕಂಡ ತುಡು ಮತ್ತು ಅವರ ಸಹಚರರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಎನ್ ಕೌಂಟರ್ ಏರ್ಪಟ್ಟಿತು.

ಕಟೋರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅರವಿಂದ್ ರೈ ನೇತೃತ್ವದ ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಲ್ಲಿ ತುಡುಗೆ ಗಾಯಗಳಾಗಿದ್ದವು. ನಂತರ ಆತನನ್ನು ಕಟೋರಿಯಾದ ಸರ್ಕಾರಿ ರೆಫರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟನು. ಅವನ ಸಹಚರರು ಬುಧಿ ಘಾಟ್ ಮತ್ತು ಕಲೋಥರ್ ನಡುವಿನ ಅರಣ್ಯದೊಳಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಕಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಉಪೇಂದ್ರ ನಾಥ್ ವರ್ಮಾ, ಮೃತ ಮಾವೋವಾದಿ ಜಮುಯಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಕ್ಸಲ್ ಸಂಘಟನೆಯ ಏರಿಯಾ ಕಮಾಂಡರ್ ಆಗಿದ್ದರು ಎಂದು ಹೇಳಿದರು. ಜಮುಯಿ ಜಿಲ್ಲೆಯ ಚಂದ್ರ ಮಂಡಿ ಮತ್ತು ಚಕೈ ಪೊಲೀಸ್ ಠಾಣೆಗಳಲ್ಲಿ ಅವನ ವಿರುದ್ಧ ಮಾವೋವಾದಿ ಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು.

ಪೊಲೀಸರ ಪ್ರಕಾರ, ಜಾರ್ಖಂಡ್‌ನ ದಿಯೋಘರ್ ಮತ್ತು ಗಸಿದಿಹ್ ಜಿಲ್ಲೆಗಳಲ್ಲಿ ನಡೆದ ನಕ್ಸಲ್ ನಿಗ್ರಹ ಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 11 ಪ್ರಕರಣಗಳಲ್ಲಿ ತುಡು ಕೂಡ ಬೇಕಾಗಿದ್ದ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಂಕಾ ಎಸ್‌ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್