ರಾಹುಲ್ ಗಾಂಧಿ  
ದೇಶ

'ಇದು ಮತ್ತೊಂದು ಸುಳ್ಳು': 'ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆ' ಬಗ್ಗೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ

ಕಳೆದ ವರ್ಷದ ಲೋಕಸಭೆ ಚುನಾವಣೆ ನಂತರ, ಪ್ರಧಾನಿ ಮೋದಿ "ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆ" ಬಹಳ ಅಬ್ಬರದಿಂದ ಘೋಷಿಸಿದರು, ನಮ್ಮ ದೇಶದ ಯುವಜನತೆಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉದ್ಯೋಗ ಸಂಯೋಜಿತ ಪ್ರೋತ್ಸಾಹಕ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರತಿದಿನ ಹೊಸ ಘೋಷಣೆಗಳನ್ನು ಮಾಡುತ್ತಿದ್ದರೂ ಯುವಕರು ಇನ್ನೂ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದು ಮತ್ತೊಂದು ಸುಳ್ಳು ಎಂದು ಹೇಳಿದ್ದಾರೆ.

ಕಳೆದ ವರ್ಷದ ಲೋಕಸಭೆ ಚುನಾವಣೆ ನಂತರ, ಪ್ರಧಾನಿ ಮೋದಿ "ಉದ್ಯೋಗ ಸಂಬಂಧಿತ ಪ್ರೋತ್ಸಾಹ" ಯೋಜನೆಯನ್ನು ಬಹಳ ಅಬ್ಬರದಿಂದ ಘೋಷಿಸಿದರು, ನಮ್ಮ ದೇಶದ ಯುವಜನತೆಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದರು.

ಯೋಜನೆಯನ್ನು ಘೋಷಿಸಿ ಸುಮಾರು ಒಂದು ವರ್ಷವಾಗಿದೆ, ಸರ್ಕಾರ ಅದನ್ನು ವ್ಯಾಖ್ಯಾನಿಸಿಲ್ಲ ಮತ್ತು ಅದಕ್ಕೆ ನಿಗದಿಪಡಿಸಿದ 10,000 ಕೋಟಿ ರೂಪಾಯಿಗಳನ್ನು ಹಿಂದಿರುಗಿಸಿದೆ. ಇದು ಪ್ರಧಾನಿ ನಿರುದ್ಯೋಗದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ, ದೇಶದ ಯುವಜನತೆಯನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ದೊಡ್ಡ ಕಾರ್ಪೊರೇಟ್‌ಗಳ ಮೇಲೆ ಮಾತ್ರ ಸರ್ಕಾರ ಗಮನಹರಿಸುವುದರಿಂದ, ನ್ಯಾಯಯುತ ವ್ಯವಹಾರಗಳಿಗಿಂತ ಮೋದಿಯವರು ತಮ್ಮ ಆಪ್ತಮಿತ್ರರನ್ನು ಉತ್ತೇಜಿಸುವುದರಿಂದ, ಉತ್ಪಾದನೆಗಿಂತ ತಮಗೆ ಬೇಕಾದವರ ಜೊತೆ ಸೇರಿ ಮಾತುಕತೆ ನಡೆಸುವುದರಿಂದ ಭಾರತದ ಸ್ಥಳೀಯ ಕೌಶಲ್ಯಗಳನ್ನು ನಿರ್ಲಕ್ಷಿಸುವುದರಿಂದ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಮಾರ್ಗವೆಂದರೆ ಎಂಎಸ್ ಎಂಇಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ, ನ್ಯಾಯಯುತ ಮಾರುಕಟ್ಟೆಗಳು, ಸ್ಥಳೀಯ ಉತ್ಪಾದನಾ ಜಾಲಗಳಿಗೆ ಬೆಂಬಲ ಮತ್ತು ಸರಿಯಾದ ಕೌಶಲ್ಯಗಳನ್ನು ಹೊಂದಿರುವ ಯುವಕರು. ಪ್ರಧಾನಿ ಈ ವಿಚಾರಗಳನ್ನು ಒಪ್ಪುವುದಿಲ್ಲ, ನಾನು ಪ್ರಧಾನಿ ಮೋದಿಯವರನ್ನು ನೇರವಾಗಿ ಕೇಳುತ್ತೇನೆ, ನೀವು ಘೋಷಿಸಿದ ಇಎಲ್ ಐ 10,000 ಕೋಟಿ ರೂಪಾಯಿ ಯೋಜನೆ ಎಲ್ಲಿ ಕಣ್ಮರೆಯಾಯಿತು ಎಂದು ಕೇಳಿದ್ದಾರೆ.

ನೀವು ನಮ್ಮ ನಿರುದ್ಯೋಗಿ ಯುವಕರನ್ನು ಕೈಬಿಟ್ಟಿದ್ದೀರಾ, ನೀವು ಪ್ರತಿದಿನ ಹೊಸ ಘೋಷಣೆಗಳನ್ನು ಘೋಷಿಸುತ್ತಿದ್ದರೂ ನಮ್ಮ ಯುವಕರು ಇನ್ನೂ ನಿಜವಾದ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಭಾರತಕ್ಕೆ ತೀರಾ ಅಗತ್ಯವಿರುವ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಲು ನಿಮ್ಮ ತಳಮಟ್ಟದ ಯೋಜನೆ ಏನಿದೆ, ಇದು ಮತ್ತೊಂದು ಸುಳ್ಳೇ ಎಂದು ಕೇಳಿದ್ದಾರೆ.

ಅದಾನಿ ಮತ್ತು ಅವರ ಬಿಲಿಯನೇರ್ ಸ್ನೇಹಿತರನ್ನು ಶ್ರೀಮಂತಗೊಳಿಸಲು ಹೋಗಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಯುವಜನರಿಗೆ ಉದ್ಯೋಗದಲ್ಲಿ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳುವತ್ತ ಪ್ರಧಾನಿ ಯಾವಾಗ ಗಮನ ಹರಿಸುತ್ತಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಗೆಲುವು; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

SCROLL FOR NEXT