ತಹವ್ವೊರು ರಾಣಾ 
ದೇಶ

ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ತಹವ್ವೂರ್ ರಾಣಾನನ್ನು ಗಡಿಯಲ್ಲಿ ಗಲ್ಲಿಗೇರಿಸಬೇಕು! ಮಹಾರಾಷ್ಟ್ರ ಸಚಿವ

26/11 ರ ಮುಂಬೈ ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸದಾನಂದ್ ಡೇಟ್ ಅವರೇ ತಹವ್ವೂರ್ ರಾಣಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ.

ಮುಂಬೈ: 2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತ- ಪಾಕಿಸ್ತಾನ ಗಡಿಯಲ್ಲಿ ಸಾಯುವವರೆಗೂ ಗಲ್ಲಿಗೇರಿಸಬೇಕು. ಇದರಿಂದ ಮುಂದೆ ಅಂತಹ ಕೃತ್ಯ ನಡೆಸಿದರೆ ನೆರೆಯ ರಾಷ್ಟ್ರಕ್ಕೆ ಪರಿಣಾಮದ ಅರಿವಾಗಲಿದೆ ಎಂದು ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ ನಾಯರ್ ಶುಕ್ರವಾರ ಒತ್ತಾಯಿಸಿದ್ದಾರೆ.

26/11 ರ ಮುಂಬೈ ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸದಾನಂದ್ ದಾಟೆ ಅವರೇ ತಹವ್ವೂರ್ ರಾಣಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ.

ಕಸಬ್‌ನನ್ನು ಗಲ್ಲಿಗೇರಿಸಿದಂತೆಯೇ ರಾಣಾನನ್ನೂ ಗಲ್ಲಿಗೇರಿಸಬೇಕು ಎಂಬುದು ಭಾರತದ ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ಆತನನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಲ್ಲಿಗೇರಿಸಬೇಕು, ಹೀಗಾಗಿ ಭಾರತದಲ್ಲಿ ಮುಂದೆ ಈ ರೀತಿಯ ಕೃತ್ಯ ಎಸಗಿದರೆ ಆಗುವ ಪರಿಣಾಮಗಳನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳುತ್ತದೆ ಎಂದು ಸರ್ ನಾಯಕ್ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದ 26/11 ಭಯೋತ್ಪಾದನಾ ದಾಳಿಯ ಪರಿಣಾಮವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ರಚಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಶುಕ್ರವಾರ ಹೇಳಿದ್ದಾರೆ. ಇಂತಹ ಘಟನೆಗಳನ್ನು ನಿಭಾಯಿಸಲು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಭಯೋತ್ಪಾದನಾ ನಿಗ್ರಹ ಕಾನೂನು ಜಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಿ: ತುಳು ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ SDPI ಆಗ್ರಹ: CMಗೆ ಪತ್ರ

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ನಟಿ ಕತ್ರಿನಾ ಕೈಫ್ ಬಾಡಿ ಶೇಮಿಂಗ್; Salman Khan ಕ್ಲಾಸ್ ಬೆನ್ನಲ್ಲೇ ಕ್ಷಮೆ ಕೋರಿದ ಪಾಕಿಸ್ತಾನ RJ! Video

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!