ತಹವ್ವೂರ್ ರಾಣಾ 
ದೇಶ

'26/11 ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು'; ಪಾಕ್ ನ ಅತ್ಯುನ್ನತ ಪ್ರಶಸ್ತಿ ಬಯಸಿದ್ದ ತಹವ್ವೂರ್ ರಾಣಾ!

ಆರು ಅಮೆರಿಕನ್ನರು ಸೇರಿದಂತೆ 166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ 10 ಕ್ರಿಮಿನಲ್ ಆರೋಪಗಳ ಮೇಲೆ ಭಾರತದಲ್ಲಿ ವಿಚಾರಣೆಗೆ ಹಾಜರಾಗಲು ಕೆನಡಾದ ಪ್ರಜೆ ಮತ್ತು ಪಾಕಿಸ್ತಾನ ಮೂಲದ ತಹವ್ವೂರ್ ರಾಣಾನನ್ನು ಯುಎಸ್ ಬುಧವಾರ ಹಸ್ತಾಂತರಿಸಿದೆ.

ವಾಷಿಂಗ್ಟನ್/ನ್ಯೂಯಾರ್ಕ್: 26/11 ಮುಂಬೈ ದಾಳಿಗೆ ಭಾರತೀಯರು ಇದಕ್ಕೆ ಅರ್ಹರಾಗಿದ್ದರು ಎಂದು ಹೇಳಿರುವ ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿ ತಹವ್ವೂರ್ ರಾಣಾ, ದಾಳಿ ವೇಳೆ ಹತರಾದ ಒಂಬತ್ತು ಎಲ್‌ಇಟಿ ಉಗ್ರರನ್ನು ಶ್ಲಾಘಿಸಿದ್ದು, ಅವರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ "ನಿಶಾನ್-ಎ-ಹೈದರ್' ನೀಡಬೇಕೆಂದು ಸೂಚಿಸಿದ್ದಾರೆ ಎಂದು ಯುಎಸ್ ನ್ಯಾಯಾಂಗ ಇಲಾಖೆ ತಿಳಿಸಿದೆ.

ಆರು ಅಮೆರಿಕನ್ನರು ಸೇರಿದಂತೆ 166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ 10 ಕ್ರಿಮಿನಲ್ ಆರೋಪಗಳ ಮೇಲೆ ಭಾರತದಲ್ಲಿ ವಿಚಾರಣೆಗೆ ಹಾಜರಾಗಲು ಕೆನಡಾದ ಪ್ರಜೆ ಮತ್ತು ಪಾಕಿಸ್ತಾನ ಮೂಲದ ತಹವ್ವೂರ್ ರಾಣಾನನ್ನು ಯುಎಸ್ ಬುಧವಾರ ಹಸ್ತಾಂತರಿಸಿದೆ. "ರಾಣಾ ಹಸ್ತಾಂತರವು ಘೋರ ದಾಳಿಯಲ್ಲಿ ಸಾವನ್ನಪ್ಪಿದ್ದ ಆರು ಅಮೆರಿಕನ್ನರು ಮತ್ತು ಇತರ ಹಲವು ಮಂದಿಗೆ ನ್ಯಾಯ ಪಡೆಯುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯರು ಇದಕ್ಕೆ ಅರ್ಹರು: ರಾಣಾ ಆಪ್ತ ಡೇವಿಡ್ ಹೆಡ್ಲಿ ಆಲಿಯಾಸ್ ದಾವೂದ್ ಗಿಲಾನಿ ಲಷ್ಟರ್ ಇ ತೊಯ್ಬಾ ಉಗ್ರ ಸಂಘಟನೆಯ ಸಂಭಾವ್ಯ ದಾಳಿಯ ತಾಣಗಳ ಬಗ್ಗೆ ತಿಳಿಯಲು ಮುಂಬೈಗೆ ಮುಕ್ತವಾಗಿ ಪ್ರಯಾಣಿಸಲು ರಾಣಾ ನೆರವಾಗಿದ್ದ ಎಂದು ಭಾರತ ಆರೋಪಿಸಿದೆ. ದಾಳಿಯ ನಂತರ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಹೆಡ್ಲಿಗೆ ಭಾರತೀಯರು ಇದಕ್ಕೆ ಅರ್ಹರು" ಎಂದು ರಾಣ ಹೆಡ್ಲಿಗೆ ಹೇಳಿದ್ದ. ಹೆಡ್ಲಿಯೊಂದಿಗಿನ ಮಾತುಕತೆಯಲ್ಲಿ ದಾಳಿಯಲ್ಲಿ ಹತರಾದ ಒಂಬತ್ತು ಎಲ್‌ಇಟಿ ಭಯೋತ್ಪಾದಕರನ್ನು ರಾಣಾ ಶ್ಲಾಘಿಸಿದ್ದಲ್ಲದೇ, ಅವರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿಯಾದ ನಿಶಾನ್-ಎ-ಹೈದರ್ ಅನ್ನು ನೀಡಬೇಕೆಂದು ಹೇಳಿದ್ದ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಹೆಡ್ಲಿ ಪಾಕಿಸ್ತಾನದಲ್ಲಿ ಎಲ್‌ಇಟಿ ಸದಸ್ಯರಿಂದ ತರಬೇತಿ ಪಡೆದಿದ್ದ.ಮುಂಬೈ ದಾಳಿಯ ಯೋಜನೆಗಳ ಬಗ್ಗೆ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂವಹನ ನಡೆಸುತ್ತಿದ್ದ ಎಂದು ಭಾರತ ಆರೋಪಿಸಿದೆ. ಯಾವುದೇ ವಲಸೆ ಅನುಭವ ಇಲ್ಲದಿದ್ದರೂ ವಲಸೆ ವ್ಯವಹಾರದ ಮುಂಬೈ ಶಾಖೆಯನ್ನು ತೆರೆಯಲು ಒಪ್ಪಿಕೊಂಡಿದ್ದ ರಾಣಾ, ಹೆಡ್ಲಿಯನ್ನು ಕಚೇರಿಯ ಮ್ಯಾನೇಜರ್ ಆಗಿ ನೇಮಿಸಿದ್ದ ಎನ್ನಲಾಗಿದೆ.

ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ರಾಣಾ ಹೆಡ್ಲಿಗೆ ವೀಸಾ ಅರ್ಜಿ ಸಿದ್ಧಪಡಿಸಲು ಮತ್ತು ಭಾರತೀಯ ಅಧಿಕಾರಿಗಳಿಗೆ ಸಲ್ಲಿಸಲು ನೆರವಾಗಿದ್ದು. ತನ್ನ ವಲಸೆ ವ್ಯವಹಾರದ ಶಾಖೆ ತೆರೆಯಲು ಭಾರತೀಯ ಅಧಿಕಾರಿಗಳಿಂದ ಔಪಚಾರಿಕ ಅನುಮೋದನೆ ಪಡೆಯುವ ಹೆಡ್ಲಿಯ ಪ್ರಯತ್ನಕ್ಕೆ ಬೆಂಬಲವಾಗಿ ರಾಣಾ ತನ್ನ ಅನುಮಾನಾಸ್ಪದ ವ್ಯಾಪಾರ ಪಾಲುದಾರರ ಮೂಲಕ ದಾಖಲಾತಿಗಳನ್ನು ಪೂರೈಸಿದ್ದ. ಎರಡು ವರ್ಷಗಳಿಗೂ ಹೆಚ್ಚು ಕಾಲ ಚಿಕಾಗೋದಲ್ಲಿ ಪದೇ ಪದೇ ರಾಣಾನನ್ನು ಹೇಡ್ಲಿ ಬೇಟಿಯಾಗಿದ್ದು, ಎಲ್ಇಟಿ ಪರ ತನ್ನ ಚಟುವಟಿಕೆಗಳನ್ನು ವಿವರಿಸಿದ್ದ. ಹೆಡ್ಲಿಯ ಚಟುವಟಿಕೆಗಳಿಗೆ ಎಲ್ಇಟಿಯ ಪ್ರತಿಕ್ರಿಯೆಗಳು ಮತ್ತು ಮುಂಬೈ ದಾಳಿಯ ಎಲ್ಇಟಿಯ ಸಂಭಾವ್ಯ ಯೋಜನೆಗಳನ್ನು ವಿವರಿಸಿದ್ದ ಎಂದು ಹೇಳಿಕೆ ತಿಳಿಸಿದೆ.

10 ಎಲ್ ಇಟಿ ಉಗ್ರರಿಂದ ಗುಂಡು,ಬಾಂಬ್ ದಾಳಿ: 2008 ರ ನವೆಂಬರ್ 26 ಮತ್ತು 29 ರ ನಡುವೆ ಹತ್ತು ಎಲ್ಇಟಿ ಉಗ್ರರು ಮುಂಬೈನಲ್ಲಿ 12 ಸಂಘಟಿತ ಗುಂಡಿನ ದಾಳಿ ಮತ್ತು ಸರಣಿ ಬಾಂಬ್ ದಾಳಿ ನಡೆಸಿದ್ದರು. ಸಮುದ್ರದ ಮೂಲಕ ವಾಣಿಜ್ಯ ನಗರಿಗೆ ನುಸುಳಿದ ಎಲ್ ಇಟಿ ಉಗ್ರರು ತಂಡಗಳಲ್ಲಿ ಅನೇಕ ಸ್ಥಳಗಳಿಗೆ ಚದುರಿಹೋಗಿದ್ದರು. ಅವರು ರೈಲು ನಿಲ್ದಾಣ, ಎರಡು ರೆಸ್ಟೋರೆಂಟ್‌ಗಳು, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಮತ್ತು ಯಹೂದಿ ಸಮುದಾಯ ಕೇಂದ್ರದ ಮೇಲೆ ದಾಳಿ ಮಾಡಿದ್ದರು. ದಾಳಿಯಲ್ಲಿ ನೂರಾರು ಜನರು ಗಾಯಗೊಂಡಿದ್ದರು. ಅಲ್ಲದೇ ಮುಂಬೈಯಲ್ಲಿ 1.5 ಶತಕೋಟಿಗೂ ಹೆಚ್ಚು ಆಸ್ತಿ ನಷ್ಟ ಉಂಟಾಗಿತ್ತು. ಈ ದಾಳಿ ಭಾರತದ ಇತಿಹಾಸದಲ್ಲಿ ಅತ್ಯಂತ ಭಯಾನಕ ಮತ್ತು ದುರಂತವಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಅಮೆರಿಕದಲ್ಲಿ 14 ವರ್ಷಗಳ ಕಾಲ ಶಿಕ್ಷೆ: ರಾಣಾ ವಿರುದ್ಧ 2013 ರಲ್ಲಿ, ಇಲಿನಾಯ್ಸ್‌ನ ಉತ್ತರ ಜಿಲ್ಲೆಯಲ್ಲಿ ಎಲ್ ಇಟಿಗೆ ಬೆಂಬಲ ಹಾಗೂ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ LeT ಪ್ರಾಯೋಜಿತ ಭಯೋತ್ಪಾದಕ ಸಂಚಿಗೆ ಪಿತೂರಿಗೆ ಸಂಬಂಧಿಸಿದಂತೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೆಡ್ಲಿಯು ಮುಂಬೈನಲ್ಲಿ ಆರು ಅಮೆರಿಕನ್ನರ ಹತ್ಯೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ ನೀಡುವುದು ಸೇರಿದಂತೆ 12 ಭಯೋತ್ಪಾದನೆ ಆರೋಪಗಳಿಗೆ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ನಂತರ ಡ್ಯಾನಿಶ್ ಪತ್ರಿಕೆಯ ಮೇಲೆ ದಾಳಿಗೆ ಸಂಚಿಗೆ ಸಂಬಂಧಿಸಿದಂತೆ 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.

ರಾಣಾ ಭಾರತಕ್ಕೆ ಹಸ್ತಾಂತರದ ಪ್ರಕ್ರಿಯೆಗಳು: ಜೂನ್ 2020 ರಲ್ಲಿ, ಭಾರತವು ಸಲ್ಲಿಸಿದ ರಾಣಾ ಹಸ್ತಾಂತರ ಕೋರಿಕೆಯ ಮೇರೆಗೆ ಯುನೈಟೆಡ್ ಸ್ಟೇಟ್ಸ್ ಕಾರ್ಯನಿರ್ವಹಿಸಿದೆ. ಮೇ 16, 2023 ರಂದು, ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನಲ್ಲಿರುವ US ಮ್ಯಾಜಿಸ್ಟ್ರೇಟ್ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಮಾಣೀಕರಿಸಿದರು. ನಂತರ ರಾಣಾ ಹೇಬಿಯಸ್ ಕಾರ್ಪಸ್ ರಿಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನಲ್ಲಿರುವ US ಜಿಲ್ಲಾ ನ್ಯಾಯಾಲಯವು ಆಗಸ್ಟ್ 10, 2023 ರಂದು ನಿರಾಕರಿಸಿತು. ಆಗಸ್ಟ್ 15, 2024 ರಂದು ಮೇಲ್ಮನವಿಗಳ ಅಮೆರಿಕ ನ್ಯಾಯಾಲಯ ಇದನ್ನು ಪುನರುಚ್ಚರಿಸಿತು.

ಜನವರಿ 21, 2025 ರಂದು ರಾಣಾ ಅವರ ಸರ್ಟಿಯೊರಾರಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೇ ರೀತಿ ನಿರಾಕರಿಸಿತು. ರಾಜ್ಯ ಕಾರ್ಯದರ್ಶಿ ರಾಣಾ ಅವರನ್ನು ಭಾರತೀಯ ಅಧಿಕಾರಿಗಳಿಗೆ ಶರಣಾಗುವಂತೆ ಆದೇಶಿಸುವ ವಾರಂಟ್ ಹೊರಡಿಸಿದರು.

ಏಪ್ರಿಲ್ 7 ರಂದು ಅಮೆರಿಕದ ಸುಪ್ರೀಂ ಕೋರ್ಟ್ ಹಸ್ತಾಂತರದ ತಡೆಗಾಗಿ ರಾಣಾ ಅವರ ಅರ್ಜಿಯನ್ನು ನಿರಾಕರಿಸಿತು. ಏಪ್ರಿಲ್ 9 ರಂದು, ಯುಎಸ್ ಮಾರ್ಷಲ್ಸ್ ಸೇವೆಯು ರಾಣಾನನ್ನು ಭಾರತೀಯ ಅಧಿಕಾರಿಗಳಿಗೆ ಒಪ್ಪಿಸುವ ಮೂಲಕ ಕಾರ್ಯದರ್ಶಿಯ ಶರಣಾಗತಿ ವಾರಂಟ್ ಅನ್ನು ಕಾರ್ಯಗತಗೊಳಿಸಿತು ಎಂದು ಹೇಳಿಕೆ ತಿಳಿಸಿದೆ.

ಅಮೆರಿಕದ ಮಾರ್ಷಲ್ಸ್ ಸೇವೆ ಮತ್ತು ಅಂತಾರಾರಾಷ್ಟ್ರೀಯ ವ್ಯವಹಾರಗಳ ನ್ಯಾಯಾಂಗ ಇಲಾಖೆಯ ಕಚೇರಿಯಲ್ಲಿನ ವಕೀಲರು ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ತಜ್ಞರು ಮತ್ತು ಈ ಹಸ್ತಾಂತರಕ್ಕೆ ಬೆಂಬಲವನ್ನು ನೀಡಿದ್ದಾರೆ. ನವದೆಹಲಿಯಲ್ಲಿರುವ ಎಫ್‌ಬಿಐನ ಕಾನೂನು ಕಛೇರಿಯೂ ಸಹಾಯ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT