ನವದೆಹಲಿ: ಮಳಿಗೆಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಗಂಡನ ಗುಪ್ತಾಂಗಕ್ಕೆ ಕೈ ಹಾಕಿದಳು ಎಂಬ ಒಂದೇ ಕಾರಣಕ್ಕೆ ಪತ್ನಿ ತನ್ನ ರೌದ್ರಾವತಾರ ತೋರಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲವಾದರೂ ವಿಡಿಯೋದಲ್ಲಿ ಅಂಗಡಿಯಲ್ಲಿ ಪತಿ ನಿಂತಿದ್ದಾಗ ಅಲ್ಲಿಗೆ ಬಂದ ಯುವತಿಯೊಬ್ಬಳು ಪತ್ನಿ ಎದುರೇ ಆಕೆಯ ಗಂಡನ ಗುಪ್ತಾಂಗಕ್ಕೆ ಕೈ ಹಾಕಿ ಅಲ್ಲಿಯೇ ನಿಂತಿದ್ದಾಳೆ. ಇದನ್ನು ಗಮನಿಸಿದ ಪತ್ನಿ ಆಕ್ರೋಶಗೊಂಡು ಆಕೆಯ ಜುಟ್ಟು ಹಿಡಿದು ಬಲವಾಗಿ ಎಳೆದಿದ್ದಾಳೆ. ಈ ವೇಳೆ ಯುವತಿ ಕೆಳಗೆ ಬಿದ್ದಿದ್ದಾಳೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ಆಗಿದ್ದೇನು?
ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಗಂಡ-ಹೆಂಡತಿ ಅಂಗಡಿಯೊಂದಕ್ಕೆ ಹೋಗಿದ್ದರು. ಅವರು ಬಾಗಿಲ ಬಳಿ ನಿಂತಿರುವಾಗ ಆಗಷ್ಟೇ ಅಂಗಡಿಯಿಂದ ಹೋಗುತ್ತಿದ್ದ ಯುವತಿಯೊಬ್ಬಳು ಆ ವ್ಯಕ್ತಿಗೆ ಡಿಕ್ಕಿ ಹೊಡೆದು ಆತನ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಬಿಡುತ್ತಾನೆ. ಇದನ್ನು ನೋಡಿದ ಪತ್ನಿ ಆಕೆಯ ಕೈ ಹಿಡಿದು ಎಳೆದು ಜುಟ್ಟು ಹಿಡಿದು ಬಿಸಾಡುತ್ತಾಳೆ. ಈ ವೇಳೆ ಯುವತಿ ಕೆಳಗೆ ಬೀಳುತ್ತಾಳೆ.
ಇದೇ ಸಂದರ್ಭದಲ್ಲಿ ಪತಿ ಪತ್ನಿಯನ್ನು ಸಮಾಧಾನ ಮಾಡಲು ಮುಂದಾಗುತ್ತಾನೆಯಾದರೂ ಆಕ್ರೋಶಗೊಂಡಿದ್ದ ಪತ್ನಿ ಪತಿಗೂ ಕಪಾಳ ಮೋಕ್ಷ ಮಾಡಿ ನಾಚಿಕೆಯಾಗುವುದಿಲ್ಲವೇ.. ಆಕೆ ಹಿಡಿದುಕೊಂಡಿದ್ದರೆ ಸುಮ್ಮನೇ ನಿಂತಿದ್ದೀಯಾ ಎನ್ನುವ ರೀತಿಯಲ್ಲಿ ಗದರುತ್ತಾಳೆ. ಇವಿಷ್ಟೂ ಘಟನೆ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಎಕ್ಸ್ನಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋ ಗಂಟೆಗಳಲ್ಲೇ ಸಾವಿರಾರು ವೀಕ್ಷಣೆಗಳನ್ನು ಪಡೆದಿದ್ದು, ಸಾವಿರಾರು ಮೀಮ್ ಗಳು ಹರಿದಾಡುತ್ತಿದೆ.