ಶೈನ್ ಟಾಮ್ ಚಾಕೊ (ಎಡ), ವಿನ್ಸಿ ಅಲೋಶಿಯಸ್ 
ದೇಶ

ನಟ ಶೈನ್ ಟಾಮ್ ಚಾಕೊ ವಿರುದ್ಧ 'ಅಮ್ಮ'ಗೆ ನಟಿ ವಿನ್ಸಿ ಅಲೋಶಿಯಸ್ ದೂರು: ಡ್ರಗ್ಸ್ ಬಳಕೆ, ಅನುಚಿತ ವರ್ತನೆ ಆರೋಪ

ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಸಹ-ನಟನ ವರ್ತನೆಯಿಂದ ತಾನು ಮತ್ತು ಮಹಿಳಾ ಸಹೋದ್ಯೋಗಿ ಇಬ್ಬರೂ ಅಹಿತಕರ ಸಂದರ್ಭಗಳನ್ನು ಎದುರಿಸಿದ್ದೇವೆ ಎಂದು ಹೇಳಿಕೊಂಡಿದ್ದರು.

ತಿರುವನಂತಪುರ: ಸೂತ್ರವಕ್ಯಂ ಚಿತ್ರದ ಚಿತ್ರೀಕರಣ ಸೆಟ್‌ ನಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಲಯಾಳಂ ಚಲನಚಿತ್ರ ನಟಿ ವಿನ್ಸಿ ಅಲೋಶಿಯಸ್ ಅವರು ಸಹ ನಟ ಶೈನ್ ಟಾಮ್ ಚಾಕೊ ವಿರುದ್ಧ ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದ್ದಾರೆ.

ದೂರು ದಾಖಲಾದ ನಟನ ವಿರುದ್ಧ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಫಿಲ್ಮ್ ಚೇಂಬರ್ ಪ್ರಧಾನ ಕಾರ್ಯದರ್ಶಿ ಸಜಿ ನಂತ್ಯಾಟ್ ತಿಳಿಸಿದ್ದಾರೆ.

ಆಪಾದಿತ ದುಷ್ಕೃತ್ಯದ ಬಗ್ಗೆ ಅಲೋಶಿಯಸ್ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ವನ್ನು ಸಹ ಸಂಪರ್ಕಿಸಿದ್ದಾರೆ. ಅಮ್ಮಾದ ತಾತ್ಕಾಲಿಕ ಸಮಿತಿಯ ಸಂಚಾಲಕ ಜಯನ್ ಚೆರ್ತಲಾ, ಸಂಘವು ಅಲೋಶಿಯಸ್ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ವಿನ್ಸಿ ಅಲೋಶಿಯಸ್ ಘಟನೆಯ ವಿವರಗಳನ್ನು ಹಂಚಿಕೊಂಡು, ಮಾದಕ ವಸ್ತುಗಳ ಪ್ರಭಾವದಡಿಯಲ್ಲಿ ನಟ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದರು. ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಸಹ-ನಟನ ವರ್ತನೆಯಿಂದ ತಾನು ಮತ್ತು ಮಹಿಳಾ ಸಹೋದ್ಯೋಗಿ ಇಬ್ಬರೂ ಅಹಿತಕರ ಸಂದರ್ಭಗಳನ್ನು ಎದುರಿಸಿದ್ದೇವೆ ಎಂದು ಹೇಳಿಕೊಂಡಿದ್ದರು.

ಚಿತ್ರೀಕರಣ ಸೆಟ್ ನಲ್ಲಿ ಪೂರ್ವಾಭ್ಯಾಸದ ಸಮಯದಲ್ಲಿ ನಟ ಮಾತನಾಡುವಾಗ ಅವರ ಬಾಯಿಂದ ಬಿಳಿ ಪುಡಿಯಂತಹ ವಸ್ತುವನ್ನು ಉಗುಳುತ್ತಿದ್ದರು, ಇದು ಸೆಟ್‌ನಲ್ಲಿ ಮಾದಕ ದ್ರವ್ಯ ಸೇವನೆಯನ್ನು ಸೂಚಿಸುತ್ತದೆ ಎಂದು ಅವರು ಆರೋಪಿಸಿದ್ದರು.

ಇತ್ತೀಚೆಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಲೋಶಿಯಸ್, ಚಲನಚಿತ್ರ ಸೆಟ್‌ಗಳಲ್ಲಿ ಮಾದಕ ದ್ರವ್ಯ ಸೇವಿಸುವ ವ್ಯಕ್ತಿಗಳೊಂದಿಗೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದರು.

ಇಂದು ಮುಂಜಾನೆ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯ ಪಡೆ (DANSAF) ನಡೆಸಿದ ದಾಳಿಯ ಸಮಯದಲ್ಲಿ ಕೊಚ್ಚಿಯ ಹೋಟೆಲ್‌ನಿಂದ ನಟ ಶೈನ್ ಟಾಮ್ ಚಾಕೊ ಪಲಾಯನ ಮಾಡುತ್ತಿರುವುದು ಕಂಡುಬಂತು. ಕಲೂರಿನ ಲಿಸ್ಸಿ ಮೆಟ್ರೋ ನಿಲ್ದಾಣದ ಬಳಿ ಇರುವ ಹೋಟೆಲ್ ಮಾದಕ ದ್ರವ್ಯ ಸೇವನೆಯ ಆರೋಪದ ಮೇಲೆ ಕಣ್ಗಾವಲಿನಲ್ಲಿತ್ತು.

ಪೊಲೀಸ್ ತಂಡ ಆಗಮಿಸುತ್ತಿದ್ದಂತೆ ಚಾಕೊ ಸೇರಿದಂತೆ ಇಬ್ಬರು ವ್ಯಕ್ತಿಗಳು ಆತುರದಿಂದ ನಿರ್ಗಮಿಸುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ಆದಾಗ್ಯೂ, ಹೋಟೆಲ್ ಕೋಣೆಯ ಹುಡುಕಾಟದಲ್ಲಿ ಯಾವುದೇ ಮಾದಕ ವಸ್ತುಗಳು ಸಿಗದಿರುವ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ.

ಓಡಿಹೋದ ವ್ಯಕ್ತಿಗಳಲ್ಲಿ ಒಬ್ಬರು ಶೈನ್ ಟಾಮ್ ಚಾಕೊ ಎಂದು ನಾವು ದೃಢಪಡಿಸಿದ್ದೇವೆ. ಯಾವುದೇ ವಸ್ತುವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಮಾದಕ ದ್ರವ್ಯ ವಿಭಾಗದ ಎಸಿಪಿ ಅಬ್ದುಲ್ ಸಲಾಂ ಕೆ ಎ ಟಿಎನ್‌ಐಇಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

ಬಿಹಾರದ ನೂತನ ಸಾರಥಿ ಯಾರು: ದಲಿತ ನಾಯಕನಿಗೆ ಸಿಎಂ ಪಟ್ಟವೋ? ಅಮಿತ್ ಶಾ ಭಂಟನಿಗೆ ಸಿಂಹಾಸನವೋ!

Karnataka Budget 2026-ಬೆಂಗಳೂರು ನಂತರ ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

SCROLL FOR NEXT