ಕಾರ್ಮಿಕರನ್ನು ಬಂಧಿಸಿ ಎಲೆಕ್ಟ್ರಿಕ್ ಶಾಕ್ ನೀಡಿರುವ ವಿಡಿಯೋದ ತುಣುಕು  
ದೇಶ

ಉಗುರು ತೆಗೆದು ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ: ಛತ್ತೀಸ್ ಗಢದಲ್ಲಿ ಐಸ್ ಕ್ರೀಂ ಫ್ಯಾಕ್ಟರಿ ಮಾಲೀಕನಿಂದ ಇಬ್ಬರು ಕಾರ್ಮಿಕರಿಗೆ ಕಿರುಕುಳ!

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯವರಾದ ಅಭಿಷೇಕ್ ಭಂಬಿ ಮತ್ತು ವಿನೋದ್ ಭಂಬಿ ಅವರನ್ನು ಗುತ್ತಿಗೆದಾರರ ಮೂಲಕ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ರಭಟ್ಟಿ ಪ್ರದೇಶದ ಛೋಟು ಗುರ್ಜರ್ ಒಡೆತನದ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ನೇಮಿಸಲಾಗಿತ್ತು.

ಕೊರ್ಬಾ: ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಅವರ ಮಾಲೀಕರು ಮತ್ತು ಸಹಾಯಕರು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಕಳ್ಳತನದ ಶಂಕೆಯಿಂದ ಅವರ ಉಗುರುಗಳನ್ನು ತೆಗೆದು ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯವರಾದ ಅಭಿಷೇಕ್ ಭಂಬಿ ಮತ್ತು ವಿನೋದ್ ಭಂಬಿ ಅವರನ್ನು ಗುತ್ತಿಗೆದಾರರ ಮೂಲಕ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ರಭಟ್ಟಿ ಪ್ರದೇಶದ ಛೋಟು ಗುರ್ಜರ್ ಒಡೆತನದ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ನೇಮಿಸಲಾಗಿತ್ತು.

ಮೊನ್ನೆ ಏಪ್ರಿಲ್ 14 ರಂದು, ಗುರ್ಜಾರ್ ಮತ್ತು ಅವರ ಸಹಚರ ಮುಖೇಶ್ ಶರ್ಮ ಎಂಬುವವರು ಇಬ್ಬರು ಕಾರ್ಮಿಕರ ಮೇಲೆ ಕಳ್ಳತನದ ಆರೋಪ ಹೊರಿಸಿದರು. ನಂತರ ಇಬ್ಬರನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಶಾಕ್ ನೀಡಿ, ಅವರ ಉಗುರುಗಳನ್ನು ತೆಗೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಾರ್ಮಿಕರಿಗೆ ಚಿತ್ರಹಿಂಸೆ ನೀಡಿದ ವೀಡಿಯೊ ವೈರಲ್ ಆಗಿದೆ. ಅರೆನಗ್ನ ವ್ಯಕ್ತಿಗೆ ವಿದ್ಯುತ್ ಶಾಕ್ ನೀಡಿ ಥಳಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು.

ಚಿತ್ರಹಿಂಸೆಗೊಳಗಾದ ಕಾರ್ಮಿಕರು ಕೊನೆಗೂ ತಪ್ಪಿಸಿಕೊಂಡು ಭಿಲ್ವಾರಾದಲ್ಲಿರುವ ತಮ್ಮ ಊರನ್ನು ತಲುಪುವಲ್ಲಿ ಯಶಸ್ವಿಯಾಗಿ ಗುಲಾಬ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ರಾಜಸ್ಥಾನ ಪೊಲೀಸರು "ಝೀರೋ' ಎಫ್ ಐಆರ್ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಕೊರ್ಬಾ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಝೀರೋ ಎಫ್‌ಐಆರ್ ಅಡಿಯಲ್ಲಿ, ಅಪರಾಧ ನಡೆದ ಸ್ಥಳ ಎಲ್ಲಿಯಾದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.

ನಿನ್ನೆ ಕೊರ್ಬಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಗುರ್ಜರ್ ಮತ್ತು ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹಲ್ಲೆಗೀಡಾದವರಲ್ಲಿ ಒಬ್ಬರಾದ ಅಭಿಷೇಕ್ ಭಂಬಿ, ವಾಹನ ಖರೀದಿಗೆ ಹಣ ಪಾವತಿಸಲು ತಮ್ಮ ಮಾಲೀಕರಿಂದ 20,000 ರೂಪಾಯಿ ಮುಂಗಡ ಹಣ ಕೇಳಿದ್ದೆ. ಮಾಲೀಕರು ನಿರಾಕರಿಸಿದಾಗ, ನಾನು ಕೆಲಸ ಬಿಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದೆ. ಕೋಪಗೊಂಡ ಆರೋಪಿಗಳು ನಮ್ಮಿಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪ್ರಮೋದ್ ದಾದ್ಸೇನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT