ಪತ್ನಿ ಶಿರಚ್ಚೇದ ಮಾಡಿ ಪೊಲೀಸ್ ಠಾಣೆಗೆ ಬಂದ ಪತಿ 
ದೇಶ

ಪತ್ನಿ ತಲೆ ಕತ್ತರಿಸಿ ಸೈಕಲ್ ನಲ್ಲಿ ಪೊಲೀಸ್ ಠಾಣೆಗೆ ತಂದ ಭೂಪ, ಕಾರಣ ನಿಗೂಢ?

ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು ಹೊತ್ತು ಸೈಕಲ್ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಗುವಾಹತಿ: ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಯನ್ನೇ ಕತ್ತರಿಸಿ ಅದನ್ನು ಸೈಕಲ್ ನಲ್ಲಿ ಪೊಲೀಸ್ ಠಾಣೆಗೆ ತಂದಿರುವ ಭಯಾನಕ ಘಟನೆ ಅಸ್ಸಾಂನಲ್ಲಿ ವರದಿಯಾಗಿದೆ.

ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು ಹೊತ್ತು ಸೈಕಲ್ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿ ಎಂಬಾಕೆಯನ್ನು ಕೊಂದು ಬಳಿಕ ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆಕೆಯ ತಲೆಯನ್ನು ತನ್ನ ಸೈಕಲ್ ನಲ್ಲಿ ಹೇರಿಕೊಂಡು ಬಲ್ಲಮ್‌ಗುರಿ ಹೊರಠಾಣೆ ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿ ಬಿತೀಶ್ ಹಜೋಂಗ್ ತನ್ನ ಕೈಯಲ್ಲಿ ಪತ್ನಿ ತಲೆಯನ್ನು ತಂದಿರುವ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, 'ಚಿರಾಂಗ್ ಜಿಲ್ಲೆಯ ಉತ್ತರ ಬಲ್ಲಮ್‌ಗುರಿಯ ನಿವಾಸಿ ಆರೋಪಿ ಬಿತೀಶ್ ಹಜೋಂಗ್ ದಿನಗೂಲಿ ಕಾರ್ಮಿಕನಾಗಿದ್ದು, ಪ್ರತಿನಿತ್ಯ ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಈಗ್ಗೆ ನಿನ್ನೆ ಸಂಜೆ ಕೂಡ ಪತಿ ಪತ್ನಿಯರ ನಡುವೆ ಗಲಾಟೆ ಏರ್ಪಟ್ಟಿದ್ದು, ಗಲಾಟೆ ತಾರಕಕ್ಕೇರಿ ಬಿತೀಶ್ ಹಜೋಂಗ್ ಹರಿತವಾದ ಆಯುಧದಿಂದ ಪತ್ನಿ ಬಜಂತಿ ಮೇಲೆ ಹಲ್ಲೆ ಮಾಡಿದ್ದಾನೆ.

ಆಕೆ ನೆಲಕ್ಕೆ ಕುಸಿಯುತ್ತಲೇ ಆಕೆಯ ಕುತ್ತಿಗೆ ಕತ್ತರಿಸಿ ಹಾಕಿದ್ದಾನೆ. ಮನೆಯಲ್ಲಿ ಕೂಗಾಟ ಕೇಳಿ ಓಡಿ ಬಂದ ನೆರೆಮನೆಯವರು ರಕ್ತದ ಮಡುವಿನಲ್ಲಿದ್ದ ಬಜಂತಿಯನ್ನು ನೋಡಿ ಆಘಾತಕೊಂಡಿದ್ದಾರೆ. ಬಳಿಕ ಬಿತೀಶ್ ಹಜೋಂಗ್ ಪತ್ನಿ ತಲೆ ಎತ್ತಿಕೊಂಡು ಸೈಕಲ್ ನಲ್ಲಿ ಹೋದ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, "ನಾವು ಶವವನ್ನು ನಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ವಿಧಿವಿಜ್ಞಾನ ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಾವು ಆರೋಪಿ ಪತಿಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಕೊಲೆಯ ಬಗ್ಗೆ ನಾವು ಊಹಿಸಲು ಸಾಧ್ಯವಿಲ್ಲ" ಎಂದು ಚಿರಾಂಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿರೇಖಾ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

ಬೆಂಗಳೂರಿನಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಹಗರಣ: 70 ವರ್ಷದ ವ್ಯಕ್ತಿಗೆ 30 ಲಕ್ಷ ರೂ.ಗೂ ಹೆಚ್ಚು ವಂಚನೆ!

ಮುಂದಿನ ಜನ್ಮದಲ್ಲಿ 'ಮುಸ್ಲಿಂ' ಆಗಿ ಹುಟ್ಟುವ ಆಸೆ: ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ವಿರುದ್ಧ ಬಿಜೆಪಿ ಕಿಡಿ! Video

ಆಗ KGF, ಈಗ ಕಾಂತಾರ ಚಾಪ್ಟರ್ 1: ಮತ್ತೆ ಕನ್ನಡ ಚಿತ್ರದ ಕೇರಳ ವಿತರಣೆ ಹಕ್ಕು ಪಡೆದ Actor Prithviraj Sukumaran

SCROLL FOR NEXT