ಅಸಾದುದ್ದೀನ್ ಓವೈಸಿ online desk
ದೇಶ

ಆರಂಭದಲ್ಲಿ ಸರ್ವಪಕ್ಷ ಸಭೆಗೆ ಆಹ್ವಾನವಿಲ್ಲ: ಅಮಿತ್ ಶಾ ಕರೆ ಬಳಿಕ ಸಭೆಯಲ್ಲಿ ಭಾಗಿಯಾಗಲಿರುವ ಅಸಾದುದ್ದೀನ್ ಓವೈಸಿ!

"ಸರ್ವಪಕ್ಷ ಸಭೆಯನ್ನು ಕರೆಯಲು ಕಾರಣ ರಾಷ್ಟ್ರೀಯ ಮಹತ್ವದ್ದಾಗಿದೆ. ಗೃಹ ಸಚಿವರು ನನಗೆ ಕರೆ ಮಾಡಿ ನಾನು ಎಲ್ಲಿದ್ದೇನೆ ಎಂದು ಕೇಳಿದರು. ಅವರು ನನಗೆ ಬರಲು ಹೇಳಿದ್ದಾರೆ ನಾನು ಮೊದಲು ಟಿಕೆಟ್ ಕಾಯ್ದಿರಿಸಿ (ದೆಹಲಿಯಲ್ಲಿ) ಸರ್ವಪಕ್ಷ ಸಭೆಗೆ ತಲುಪುತ್ತೇನೆ" ಎಂದು ಓವೈಸಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಆಹ್ವಾನಿಸಿದ ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತಾದ ಸರ್ವಪಕ್ಷ ಸಭೆಯಲ್ಲಿ AIMIM ಮುಖ್ಯಸ್ಥ ಅಸ್ಸಾದುದ್ದೀನ್ ಓವೈಸಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಅಮಿತ್ ಶಾ ಸಭೆಗೆ ಹಾಜರಾಗಲು ತಮ್ಮನ್ನು ಆಹ್ವಾನಿಸಿದ್ದಾರೆ ಮತ್ತು ಅಲ್ಲಿಗೆ ಹಾಜರಾಗಲು ತಾವು ಮೊದಲು ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿದ್ದಾರೆ.

"ಸರ್ವಪಕ್ಷ ಸಭೆಯನ್ನು ಕರೆಯಲು ಕಾರಣ ರಾಷ್ಟ್ರೀಯ ಮಹತ್ವದ್ದಾಗಿದೆ. ಗೃಹ ಸಚಿವರು ನನಗೆ ಕರೆ ಮಾಡಿ ನಾನು ಎಲ್ಲಿದ್ದೇನೆ ಎಂದು ಕೇಳಿದರು. ಅವರು ನನಗೆ ಬರಲು ಹೇಳಿದ್ದಾರೆ ನಾನು ಮೊದಲು ಟಿಕೆಟ್ ಕಾಯ್ದಿರಿಸಿ (ದೆಹಲಿಯಲ್ಲಿ) ಸರ್ವಪಕ್ಷ ಸಭೆಗೆ ತಲುಪುತ್ತೇನೆ" ಎಂದು ಓವೈಸಿ ಹೇಳಿದ್ದಾರೆ.

ಆರಂಭದಲ್ಲಿ ಸರ್ವಪಕ್ಷ ಸಭೆಗೆ 5-10 ಸಂಸದರಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುತ್ತಿದ್ದೇವೆ ಆದ್ದರಿಂದ ನಿಮ್ಮನ್ನು ಆಹ್ವಾನಿಸಿಲ್ಲ ಎಂದು ಕಿರಣ್ ರಿಜಿಜು ಅಸಾದುದ್ದೀನ್ ಓವೈಸಿಗೆ ಹೇಳಿದ್ದರು. ಈ ನಡುವೆ ತಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂಬ ಓವೈಸಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ರಿಜಿಜು, ನಿಮ್ಮ ಧ್ವನಿ ಜೋರಾಗಿಯೇ ಇದೆ ಹಾಗೆಯೇ ಕೇಳುತ್ತದೆ ಬಿಡಿ ಎಂದು ತಮಾಷೆ ಮಾಡಿದ್ದರು. ಅಷ್ಟೇ ಅಲ್ಲದೇ ಎಲ್ಲರಿಗೂ ಆಹ್ವಾನ ನೀಡಿದರೆ ಸಭೆ "ತುಂಬಾ ಸಮಯ ತೆಗೆದುಕೊಳ್ಳುತ್ತದೆ" ಎಂದು ರಿಜಿಜು ವಾದಿಸಿದ್ದಾರೆ ಎಂದು ಓವೈಸಿ ಹೇಳಿದರು.

"ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ನಡೆಸಲಾದ ಸರ್ವಪಕ್ಷ ಸಭೆಯಾಗಿದೆ. ಎಲ್ಲಾ ಪಕ್ಷಗಳ ಕಳವಳಗಳನ್ನು ಆಲಿಸಲು ನರೇಂದ್ರ ಮೋದಿ ಹೆಚ್ಚುವರಿ ಒಂದು ಗಂಟೆ ಕಳೆಯಲು ಸಾಧ್ಯವಿಲ್ಲವೇ?" ಎಂದು ಓವೈಸಿ ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಎಲ್ಲಾ ಪಕ್ಷಗಳು ಹಾಜರಿರುವ ಅಗತ್ಯವನ್ನು ಓವೈಸಿ ಒತ್ತಿ ಹೇಳಿದರು ಮತ್ತು ಎಲ್ಲರಿಗೂ ಆಹ್ವಾನ ನೀಡಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT