ಅನಂತ್‌ನಾಗ್ ಜಿಲ್ಲೆಯ ಬಿಜ್‌ಭೇರಾದಲ್ಲಿ ಕೆಡವಲಾದ ಪಹಲ್ಗಾಮ್ ಭಯೋತ್ಪಾದಕ ಆದಿಲ್ ಥೋಕರ್ ಮನೆಯ ಅವಶೇಷಗಳು 
ದೇಶ

ಪಹಲ್ಗಾಮ್ ದಾಳಿಯಲ್ಲಿ ಭಾಗಿ ಶಂಕೆ: ಇಬ್ಬರು ಭಯೋತ್ಪಾದಕರ ಮನೆ ಸ್ಫೋಟದಲ್ಲಿ ಧ್ವಂಸ; Video

ಭದ್ರತಾ ಪಡೆಗಳು ಇಬ್ಬರು ಎಲ್‌ಇಟಿ ಭಯೋತ್ಪಾದಕರ ಮನೆಗಳ ಒಳಗೆ ಶೋಧ ನಡೆಸುತ್ತಿದ್ದಾಗ ಮನೆಗಳಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡವು.

ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಲಷ್ಕರ್-ಎ-ತೈಬಾ (LeT) ಭಯೋತ್ಪಾದಕರ ಮನೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಶಪಡಿಸಲಾಗಿದೆ.

ನಿನ್ನೆ ಗುರುವಾರ ರಾತ್ರಿ ನಡೆದ ಸ್ಫೋಟದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರ ಮನೆಗಳು ನಾಶವಾಗಿದೆ. ಭದ್ರತಾ ಪಡೆಗಳು ಇಬ್ಬರು ಎಲ್‌ಇಟಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ನ ಮನೆಗಳ ಒಳಗೆ ಶೋಧ ನಡೆಸುತ್ತಿದ್ದಾಗ ಮನೆಗಳಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕಗಳಿಂದ ಬೆಂಕಿ ಹೊತ್ತುಕೊಂಡು ಇಡೀ ಮನೆಗಳು ನಾಶವಾಗಿವೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ನಿವಾಸಿ ಥೋಕರ್ ಮಂಗಳವಾರದ ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದರೆ, ಪುಲ್ವಾಮಾ ಜಿಲ್ಲೆಯ ಟ್ರಾಲ್ ನಿವಾಸಿ ಶೇಖ್ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ

ಅಭಿಷೇಕ್ ಬಗ್ಗೆ ಭಾರತೀಯ ಆಟಗಾರರಿಗೆ 'ಅಸೂಯೆ ಇದೆಯಾ? ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಸಂಜು ಸ್ಯಾಮ್ಸನ್

ಅಂಬೇಡ್ಕರ್‌ ತತ್ವಕ್ಕೆ ತಿಲಾಂಜಲಿ: ಈಗ ಮಗ, ಇನ್ನಾರು ತಿಂಗಳು ಬಿಟ್ಟು ಮೊಮ್ಮಗನನ್ನು ಬೆಳೆಸಿ ಅಂತಾರೆ; ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ವ್ಯಂಗ್ಯ

ಯುಕೆಪಿ ಯೋಜನೆಗೆ ಆಂಧ್ರ ತಕರಾರು: ರಾಜ್ಯದ ಸಂಸದರ ಜತೆ ದೆಹಲಿಯಲ್ಲಿ ಸಭೆ; ಡಿ.ಕೆ. ಶಿವಕುಮಾರ್

ಬೆಂಗಳೂರು: ಲಿವ್ ಇನ್ ಪಾರ್ಟ್ನರ್ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ವ್ಯಕ್ತಿಯ ಬಂಧನ!

SCROLL FOR NEXT