ಮಿಶಾ ಅಗರ್ವಾಲ್ 
ದೇಶ

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಿಶಾ ಅಗರ್ವಾಲ್ ಹಠಾತ್ ನಿಧನ; 25ನೇ ಹುಟ್ಟು ಹಬ್ಬಕ್ಕೆ ಎರಡೇ ದಿನ ಇರುವಾಗಲೇ ಸಾವು!

ಮಿಶಾ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಹಾಗೂ ರೀಲ್ಸ್ ಮೂಲಕ ಪ್ರಸಿದ್ಧರಾಗುವ ಮೂಲಕ ಅಪಾರ ಫಾಲೋವರ್ಸ್ ಪಡೆದಿದ್ದಾರೆ.

ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್, ಮಿಶಾ ಅಗರವಾಲ್ ಅವರು ತಮ್ಮ 25 ನೇ ಹುಟ್ಟುಹಬ್ಬದ ಎರಡು ದಿನಗಳ ಮೊದಲು ನಿಧನರಾಗಿದ್ದಾರೆ. ಈ ಸುದ್ದಿಯನ್ನು ಆಕೆಯ ಕುಟುಂಬದವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ಭಾವನಾತ್ಮಕ ಹೇಳಿಕೆಯ ಮೂಲಕ ಖಚಿತಪಡಿಸಿದ್ದಾರೆ.

ಮಿಶಾ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಹಾಗೂ ರೀಲ್ಸ್ ಮೂಲಕ ಪ್ರಸಿದ್ಧರಾಗುವ ಮೂಲಕ ಅಪಾರ ಫಾಲೋವರ್ಸ್ ಪಡೆದಿದ್ದಾರೆ. ಆಕೆಯ ಹಠಾತ್ ನಿಧನ ಇಂಟರ್ ನೆಟ್ ಲೋಕದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಆಕೆಯ ಅಭಿಮಾನಿಗಳು, ಸ್ನೇಹಿತರು, ಕೆಲ ಕಂಟೆಂಟ್ ಕ್ರಿಯೇಟರ್ ಗಳು ತೀವ್ರ ದು:ಖ ವ್ಯಕ್ತಪಡಿಸುತ್ತಿದ್ದಾರೆ.

ಆಕೆಯ ಕುಟುಂಬಸ್ಥರು ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ, ಮಿಶಾ ಅಗರ್ವಾಲ್ ನಿಧನದ ಹೃದಯ ವಿದ್ರಾವಕ ಸುದ್ದಿಯನ್ನು ನಾವು ಹಂಚಿಕೊಳ್ಳುತ್ತೇವೆ. ಆಕೆ ಹಾಗೂ ಅವರ ಕೆಲಸಕ್ಕೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ಎಲ್ಲರಿಗೂ ಧನ್ಯವಾದಗಳು. ಈ ನಷ್ಟವನ್ನು ಎದುರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಫೋಸ್ಟ್ ಮಾಡಿದ್ದಾರೆ.

ಈ ಸುದ್ದಿ ತ್ವರಿತಗತಿಯಲ್ಲಿ ಸೋಶಿಯಲ್ ಮೀಡಿಯಾ ತುಂಬ ಹರಡಿ, ದು:ಖ, ನೋವಿನ ಸಂದೇಶಗಳು ಹರಿದಾಡುತ್ತಿವೆ. ಪ್ರತಿಭಾವಂತರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಮಿಶಾ ಅವರ ಸಹೋದರಿ ಮುಕ್ತಾ ಅಗರವಾಲ್ ಅವರು ಪೋಸ್ಟ್ ಅನ್ನು ರೀ ಫೋಸ್ಟ್ ಮಾಡಿದ್ದು, ಗೆಳೆಯರೇ, ದಯವಿಟ್ಟು ಗಾಬರಿಯಾಗಬೇಡಿ. ಈ ಸುದ್ದಿ ತಿಳಿಯುವ ಅರ್ಹತೆ ನಿಮಗಿದೆ. ಹಾಗಾಗಿ ನಾವು ಈಗ ಅಪ್ ಡೇಟ್ ಸುದ್ದಿ ನೀಡಿದ್ದೇವೆ. ಸಾವಿಗೆ ಏನು ಕಾರಣ ಎಂಬ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಕಾಳಜಿ ವಹಿಸಿ ಎಂದು ಫೋಸ್ಟ್ ಮಾಡಿದ್ದಾರೆ.

ಅನೇಕ ಅಭಿಮಾನಿಗಳು ಪ್ರಕಟಣೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಎರಡನೇ ದಿನ ಇರುವಾಗ ಇದು ತಮಾಷೆಯಾಗಿದೆಯೇ ಎಂಬುದು ಖಚಿತವಾಗಿಲ್ಲ. ಆದಾಗ್ಯೂ ಆಕೆಯನ್ನು ಹೆಚ್ಚಾಗಿ ತಿಳಿದಿರುವ ಮತ್ತು ಪ್ರೀತಿಸುವವರಿಂದ ಸಾವು ನಿಜ ಎಂಬ ಸುದ್ದಿಗಳು ಹರಿದಾಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT