ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವು 
ದೇಶ

'ಅಲ್ಲಿ ನಾವು ದೇಶ ಕಾಯುತ್ತೇವೆ.. ಇಲ್ಲಿ ನಮ್ಮ ಮಕ್ಕಳಿಗೇ ರಕ್ಷಣೆ ಇಲ್ಲ..': 5 ಆಸ್ಪತ್ರೆ, 180 ಕಿಮೀ ಆ್ಯಂಬುಲೆನ್ಸ್ ಸುತ್ತಾಟ, ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವು!

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಿಢೀರ್ ಅನಾರೋಗ್ಯಕ್ಕೆ (ದೇಹದ ನಿರ್ಜಲೀಕರಣ-ಹೊಟ್ಟೆ ನೋವು) ತುತ್ತಾದ 1 ವರ್ಷದ ಮಗು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಬಾಗೇಶ್ವರ: ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಿಢೀರ್ ಅನಾರೋಗ್ಯಕ್ಕೆ (ದೇಹದ ನಿರ್ಜಲೀಕರಣ-ಹೊಟ್ಟೆ ನೋವು) ತುತ್ತಾದ 1 ವರ್ಷದ ಮಗು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದ ನಿವಾಸಿ ಮತ್ತು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಚಂದ್ರ ಎಂಬ ಸೈನಿಕನ 1 ವರ್ಷದ ಪುಟ್ಟ ಮಗು ಶುಭಾಂಶು ಅನಾರೋಗ್ಯಕ್ಕೆ ತುತ್ತಾಗಿತ್ತು. ಕೂಡಲೇ ಮಗುವನ್ನು ಅದರ ಪೋಷಕರು ಆಸ್ಪತ್ರೆಗೆ ದಾಖಲಿಸಲು ಮುಂದಾದರು.

5 ಆಸ್ಪತ್ರೆ, 180 ಕಿಮೀ ಆ್ಯಂಬುಲೆನ್ಸ್ ಸುತ್ತಾಟ

ಈ ವೇಳೆ ಶುಭಾಂಶುವಿನ ತಾಯಿ ಮತ್ತು ಅಜ್ಜಿ ಮಗುವನ್ನು ಗ್ವಾಲ್ಡಮ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ಮಗುವಿಗೆ ಚಿಕಿತ್ಸೆ ಸಿಗಲಿಲ್ಲ. ಇದಾದ ನಂತರ, ಮಗುವನ್ನು ಬೈಜ್ನಾಥ್ ಆಸ್ಪತ್ರೆಗೆ ಮತ್ತು ನಂತರ ಬಾಗೇಶ್ವರಕ್ಕೆ ಉಲ್ಲೇಖಿಸಲಾಯಿತು. ಸಂಜೆ ಮಗುವನ್ನು ಬಾಗೇಶ್ವರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಕೂಡ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಅಲ್ಮೋರಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು.

ಅಲ್ಮೋರಾ ವೈದ್ಯಕೀಯ ಕಾಲೇಜನ್ನು ತಲುಪಿದ ನಂತರ, ಶುಭಾಂಶು ಮಗುವನ್ನು ಮತ್ತೆ ಹಲ್ದ್ವಾನಿಯ ಸುಶೀಲಾ ತಿವಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ದಾರಿಯಲ್ಲೇ ಕೊನೆಯುಸಿರೆಳೆದಿದೆ ಎಂದು ಘೋಷಿಸಿದರು. ಹೀಗೆ ಒಂದರ ಬಳಿಕ ಒಂದರಂತೆ 180 ಕಿ.ಮೀ ಸುತ್ತಾಡಿ 5 ಆಸ್ಪತ್ರೆಗಳಿಗೆ ತಿರುಗಿದರೂ ಮಗುವಿಗೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ.

ವೈದ್ಯಕೀಯ ನಿರ್ಲಕ್ಷ್ಯ ಆರೋಪ

ಇನ್ನು ತಮ್ಮ ಮಗುವಿನ ಸಾವಿಗೆ ಆಸ್ಪತ್ರೆಗಳ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಪೋಷಕರು ಆರೋಪಿಸಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕಿರುತ್ತಿತ್ತು. ಕಳಪೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯ ವಿಳಂಬವು ತನ್ನ ಮಗನ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ತಂದೆ ಸೈನಿಕ ದಿನೇಶ್ ಚಂದ್ರ ಆರೋಪಿಸಿದ್ದಾರೆ.

ನಾವು ಅಲ್ಲಿ ದೇಶ ಕಾಯುತ್ತೇವೆ.. ಆದರೆ ಇಲ್ಲಿ ನಮ್ಮ ಕುಟುಂಬಗಳಿಗೇ ರಕ್ಷಣೆ ಇಲ್ಲ

ಈಗ ಸೈನಿಕ ತಂದೆಯ ಈ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮನ್ನು ದೇಶದ ಗಡಿಯಲ್ಲಿ ಇರಿಸಲಾಗಿದೆ, ಆದರೆ ಇಲ್ಲಿ ತಮ್ಮ ಸ್ವಂತ ಮಗನ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

1 ಗಂಟೆ ತಡವಾಗಿ ಬಂದ ಆ್ಯಂಬುಲೆನ್ಸ್

ಮಗು ಬಾಗೇಶ್ವರದಲ್ಲಿದ್ದಾಗ, ಮಗುವಿನ ಕುಟುಂಬವು 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿತು. ಈ ವೇಳೆ ಆ್ಯಂಬುಲೆನ್ಸ್ ಬರುತ್ತಿದೆ ಎಂದು ಕೇವಲ ಭರವಸೆ ಸಿಕ್ಕಿತು. ಆಂಬ್ಯುಲೆನ್ಸ್ ಒಂದು ಗಂಟೆಯಾದರೂ ಬರಲಿಲ್ಲ. ಮಗು ನೋವಿನಿಂದ ನರಳುತ್ತಲೇ ಇತ್ತು. ಜಿಲ್ಲಾಧಿಕಾರಿಗೆ ಸ್ವತಃ ಕರೆ ಮಾಡಲಾಯಿತು, ನಂತರ ರಾತ್ರಿ 9.30 ರ ಸುಮಾರಿಗೆ ಆಂಬ್ಯುಲೆನ್ಸ್ ಒದಗಿಸಲಾಯಿತು. ಆಗ ತುಂಬಾ ತಡವಾಗಿತ್ತು. ಮಗುವನ್ನು ಅಲ್ಮೋರಾದಿಂದ ಹಲ್ದ್ವಾನಿಗೆ ಕರೆದೊಯ್ಯುವಾಗ, ಅಲ್ಲಿಗೆ ತಲುಪುವ ಮೊದಲೇ ಅದು ಕೊನೆಯುಸಿರೆಳೆಯಿತು ಎಂದು ಸೈನಿಕ ದಿನೇಶ್ ಚಂದ್ರ ಹೇಳಿದ್ದಾರೆ.

ತನಿಖೆಗೆ ಆದೇಶಿಸಿದ ಸಿಎಂ ಧಾಮಿ

ಇನ್ನು ಈ ವಿಚಾರ ವೈರಲ್ ಆಗುತ್ತಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದಿಂದ ಬಾಗೇಶ್ವರದಲ್ಲಿ ಅಮಾಯಕ ಮಗುವಿನ ಸಾವಿನ ಸುದ್ದಿ ತುಂಬಾ ದುಃಖಕರ ಮತ್ತು ದುರದೃಷ್ಟಕರ ಎಂದು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಕೆಲವು ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಹೇಳಿದರು.

ಈ ಬಗ್ಗೆ ತನಿಖೆ ನಡೆಸುವಂತೆ ಕುಮಾವೂನ್ ಆಯುಕ್ತರಿಗೆ ಸೂಚಿಸಿದ್ದಾರೆ. ಯಾವುದೇ ಮಟ್ಟದಲ್ಲಿ ನಿರ್ಲಕ್ಷ್ಯ ಕಂಡುಬಂದರೆ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಜೀವ ಮತ್ತು ನಂಬಿಕೆಯ ರಕ್ಷಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT