ಪಂಜಾಬ್ ಪೊಲೀಸರ ಲಾಂಛನದ ಚಿತ್ರ 
ದೇಶ

Punjab: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ಪಾಕ್ ಬೆಂಬಲಿತ ಉಗ್ರರ ಸಂಚು ವಿಫಲ!

ನೌಶೇರಾ ಪನ್ನುವಾನ್‌ನಿಂದ IED ವಶಪಡಿಸಿಕೊಳ್ಳಲಾಗಿದೆ. ಅದನ್ನು ಉಗ್ರರ ಸಹಚರರಾದ ರಿಂಡಾ ಮತ್ತು ಲಾಂಡಾ ಅವರಿಗೆ ಕಳುಹಿಸಲು ಉದ್ದೇಶಿಸಲಾಗಿತ್ತು.

ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ಪಂಜಾಬಿನ ದರೋಡೆಕೋರ ವಿರೋಧಿ ಕಾರ್ಯಪಡೆ ( AGTF)ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ನ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ.

ಸುಧಾರಿತ ಸ್ಫೋಟಕ ಸಾಧನವನ್ನು (IED) ವಶಪಡಿಸಿಕೊಂಡಿದೆ. ಪಾಕಿಸ್ತಾನದಿಂದ ಪ್ರಬಲ ಸ್ಫೋಟಕ ಸಾಧನ ( ಐಇಡಿ) ರವಾನೆಯ ಬಗ್ಗೆ ದೊರತ ಗುಪ್ತಚರ ಮಾಹಿತಿ ಆಧಾರದ ಮೇಲೆ AGTF ತಂಡಗಳು ಸ್ಥಳೀಯ ಪೊಲೀಸರೊಂದಿಗೆ ತರ್ನ್ ತರಣ್ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ನೌಶೇರಾ ಪನ್ನುವಾನ್‌ನಿಂದ IED ವಶಪಡಿಸಿಕೊಳ್ಳಲಾಗಿದೆ. ಅದನ್ನು ಉಗ್ರರ ಸಹಚರರಾದ ರಿಂಡಾ ಮತ್ತು ಲಾಂಡಾ ಅವರಿಗೆ ಕಳುಹಿಸಲು ಉದ್ದೇಶಿಸಲಾಗಿತ್ತು. ಸ್ಪೋಟಕವನ್ನು ವಶಕ್ಕೆ ಪಡೆದ ನಂತರ ಅವುಗಳನ್ನು ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಡಿ ರಾಜ್ಯದಲ್ಲಿ ಅಮಾಯಕ ಜನರನ್ನು ಗುರಿಯಾಗಿಟ್ಟುಕೊಂಡು ಸಾರ್ವಜನಿಕ ನೆಮ್ಮದಿ ಹಾಳುವ ಮಾಡುವ ಉದ್ದೇಶದಿಂದ ಐಇಡಿಯನ್ನು ಪಂಜಾಬ್ ಗೆ ಕಳುಹಿಸಲಾಗುತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು AGTF ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಮೋದ್ ಬಾನ್ ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 111 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ಅಡಿಯಲ್ಲಿ ತರನ್ ತರನ್‌ನಲ್ಲಿರುವ ಸಿರ್ಹಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಜಿಟಿಎಫ್ ಗುರ್ಮೀತ್ ಸಿಂಗ್ ಚೌಹಾಣ್ ಖಚಿತಪಡಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ನಾಲ್ವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು 9 ಎಂಎಂ PX5 ಪಿಸ್ತೂಲ್ ಸೇರಿದಂತೆ ಏಳು ಪಿಸ್ತೂಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಟಿ20 ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 101 ರನ್‌ಗಳ ದಾಖಲೆಯ ಜಯ; ಕಟಕ್‌ನಲ್ಲಿ ಹರಿಣರಿಗೆ ಮೊದಲ ಸೋಲು!

Indigo ವಿರುದ್ಧ ದಿಟ್ಟ ಕ್ರಮ: ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

Microsoft ಮೆಗಾ ಹೂಡಿಕೆ: 'AI 1st ಫ್ಯೂಚರ್'ಗಾಗಿ 1.5 ಲಕ್ಷ ಕೋಟಿ ರೂ ಬಂಡವಾಳ; ಬೆಂಗಳೂರಿನಲ್ಲಿ AI ಘಟಕ!

1st T20I: ಹಾರ್ದಿಕ್ ಪಾಂಡ್ಯಾ ಏಕಾಂಗಿ ಹೋರಾಟ; ದಕ್ಷಿಣ ಆಫ್ರಿಕಾ ಗೆ 176 ರನ್ ಗುರಿ!

SCROLL FOR NEXT