ನವದೆಹಲಿ: ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬುಧವಾರ ಇಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
1xBet ಹೆಸರಿನ "ಅಕ್ರಮ" ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ತನಿಖೆಯ ಭಾಗವಾಗಿ, ಕೇಂದ್ರದ ತನಿಖಾ ಸಂಸ್ಥೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಿದೆ ಎಂದು ಮೂಲಗಳು ತಿಳಿಸಿವೆ.
38 ವರ್ಷದ ಭಾರತೀಯ ಮಾಜಿ ಕ್ರಿಕೆಟಿಗನನ್ನು ಈ ಆ್ಯಪ್ ಅನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದ್ದು, ವಿಚಾರಣೆಯ ಸಮಯದಲ್ಲಿ ಈ ಅಪ್ಲಿಕೇಶನ್‌ನೊಂದಿಗೆ ಅವರ ಸಂಪರ್ಕ ಏನೆಂಬುದನ್ನು ಅರ್ಥಮಾಡಿಕೊಳ್ಳಲು ED ತನಿಖೆ ಕೈಗೊಂಡಿದೆ.
ಹಲವಾರು ಜನರು ಮತ್ತು ಹೂಡಿಕೆದಾರಿಗೆ ಕೋಟ್ಯಂತರ ರೂಪಾಯಿಯನ್ನು ವಂಚಿಸಿದೆ ಅಥವಾ ಭಾರಿ ಪ್ರಮಾಣದ ತೆರಿಗೆಯನ್ನು ತಪ್ಪಿಸಿದೆ ಎಂದು ಹೇಳಲಾದ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಒಳಗೊಂಡ ಹಲವಾರು ಪ್ರಕರಣಗಳನ್ನು ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.