ಅಮೆರಿಕದ ಪತ್ನಿಯೊಂದಿಗೆ ಭಾರತೀಯ ಅನಿಕೇತ್ 
ದೇಶ

ನನ್ನ ಯಾವ ಗುಣ ನೋಡಿ ಮದುವೆಯಾದೆ?: ಅಮೆರಿಕದ ಪತ್ನಿ ಪ್ರಶ್ನೆಗೆ ಭಾರತೀಯನ ಹೃದಯಸ್ಪರ್ಶಿ ಪ್ರತಿಕ್ರಿಯೆ; ನೆಟ್ಟಿಗರು ಫಿದಾ! Video ಭಾರಿ ವೈರಲ್

'ನನ್ನ ಗಂಡ ನನ್ನನ್ನು ಯಾಕೆ ಮದುವೆಯಾದ್ರು? ಅನಿಕೇತ್, ನೀನು ನನ್ನನ್ನು ಯಾಕೆ ಮದುವೆಯಾದೆ? ಎಂದು ಕ್ಯಾಂಡೇಸ್ ಕರ್ನೆ ಕೇಳುವ ವಿಡಿಯೋವೊಂದನ್ನು ಇಬ್ಬರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನವದೆಹಲಿ: ' ನನ್ನನ್ನು ಏಕೆ ವಿವಾಹವಾದೆ? ಎಂಬ ಅಮೆರಿಕದ ಪತ್ನಿಯ ಪ್ರಶ್ನೆಗೆ ಭಾರತೀಯ ವ್ಯಕ್ತಿಯೊಬ್ಬರು ನೀಡಿರುವ ಪ್ರಾಮಾಣಿಕ, ಹೃದಯ ಸ್ಪರ್ಶಿ ಪ್ರತಿಕ್ರಿಯೆ ಇಂಟರ್ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ 'ನನ್ನ ಯಾವ ಗುಣ ನೋಡಿ, ಮದುವೆಯಾದೆ ಎಂದು ಪತ್ನಿ ಕ್ಯಾಂಡೇಸ್ ಕರ್ನೆ, ತನ್ನ ಪತಿ ಅನಿಕೇತ್‌ಗೆ ಕೇಳುವುದನ್ನು ನೋಡಬಹುದಾಗಿದೆ.

'ಒಬ್ಬರನ್ನೊಬ್ಬರು ಹೇಗೆ ಅಥವಾ ಏಕೆ ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದರ ಕುರಿತು ನಾವು ಆಗಾಗ್ಗೆ ಮಾತನಾಡಿಲ್ಲ. ದಂಪತಿಗಳಿಗಾಗಿ ಹೆಚ್ಚಿನ ಮಾತುಕತೆಯ ಆಟ ಹುಡುಕಬೇಕಾಗಿದೆ. ಆದ್ದರಿಂದ ನಾವು ನಮ್ಮ ಬಗ್ಗೆ ಹೆಚ್ಚು ಮಾತನಾಡಬಹುದು" ಎಂದು ಕೇಳುವುದು ವಿಡಿಯೋದಲ್ಲಿದೆ.

'ನನ್ನ ಗಂಡ ನನ್ನನ್ನು ಯಾಕೆ ಮದುವೆಯಾದ್ರು? ಅನಿಕೇತ್, ನೀನು ನನ್ನನ್ನು ಯಾಕೆ ಮದುವೆಯಾದೆ? ಎಂದು ಕ್ಯಾಂಡೇಸ್ ಕರ್ನೆ ಕೇಳುವ ವಿಡಿಯೋವೊಂದನ್ನು ಇಬ್ಬರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪತ್ನಿಗೆ ಉತ್ತರಿಸುವ ಅನಿಕೇತ್, ನಾನು ನಿನ್ನನ್ನು ಮೊದಲು ಭೇಟಿಯಾದಾಗ ಅಥವಾ ನಾನು ನಿನ್ನನ್ನು ಮೊದಲ ಬಾರಿಗೆ ನೋಡಿದಾಗ ನೀನು ಮಾಡುತ್ತಿದ್ದ ಎಲ್ಲ ಕೆಲಸಗಳಿಂದ ನಿಜವಾಗಿಯೂ ಪ್ರಭಾವಿತನಾಗಿದ್ದೆ. ನೀವು ಶಿಕ್ಷಕರಾಗಿರುವುದು ನನಗೆ ವಿಶೇಷವಾಗಿ ಇಷ್ಟವಾಯಿತು. ಆ ರಾತ್ರಿ ನೀವು ಹೇಳಿದ್ದೆಲ್ಲವೂ ನನ್ನನ್ನು ಮದುವೆಯಾಗಲು ಕಾರಣವಾಯಿತು ಎಂದು ಹೇಳುತ್ತಾರೆ.

ವಿದೇಶಿ ವಿದ್ಯಾರ್ಥಿಯಾಗಿ ಕ್ಯಾಂಡೇಸ್ ಅವರ ಆತಿಥ್ಯ ಮತ್ತಷ್ಟು ಹತ್ತಿರವಾಗಿಸಿತು. ಆಕೆ ಯಾವಾಗಲೂ ಉತ್ತಮ ಜೊತೆಗಾರ್ತಿಯಾಗಿದ್ದರು. ನಿನ್ನೊಂದಿಗೆ ಕಳೆದ ಸಮಯ ಉತ್ತಮ ಮತ್ತು ವಿನೋದಮಯವಾಗಿರುತ್ತದೆ. ನಿಮ್ಮ ಕುಟುಂಬವನ್ನು ನಾನು ಸಹ ಇಷ್ಟಪಡುತ್ತೇನೆ ಎಂದು ಅನಿಕೇತ್ ಹೇಳಿದ್ದಾರೆ.

ಈ ದಂಪತಿಯ ಸಂಭಾಷಣೆ ಮುಂದುವರೆದಿದ್ದು, ಪರಸ್ಪರರ ಕುಟುಂಬಗಳ ಮೇಲೆ ಇಬ್ಬರು ಇಟ್ಟಿರುವ ನಂಬಿಕೆ, ಗೌರವ ನೆಟ್ಟಿಗರನ್ನು ಸೆಳೆದಿದ್ದು, ಸಾಕಷ್ಟು ಮಂದಿ ವಿಡಿಯೋ ಗೆ ಲೈಕ್ ಮಾಡಿ, ಶೇರ್ ಮಾಡುತ್ತಾರೆ. ಈ ವಿಡಿಯೋ ಸುಮಾರು 70,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಭಾರಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡೊನಾಲ್ಡ್ ಟ್ರಂಪ್ ಕರೆಗೂ ನಿಲ್ಲದ ಘರ್ಷಣೆ: ಇಸ್ರೇಲ್ ದಾಳಿಗೆ ಗಾಜಾದಲ್ಲಿ ಕನಿಷ್ಠ 60 ಮಂದಿ ಸಾವು

ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಶೇ.50ರಷ್ಟು ಸಚಿವರಿಗೆ ಕೊಕ್..?

ಕೆಮ್ಮಿನ ಸಿರಪ್ ಬಗ್ಗೆ ಕೇಂದ್ರ ಸರ್ಕಾರ ಯೂ-ಟರ್ನ್: ಮಧ್ಯ ಪ್ರದೇಶ, ರಾಜಸ್ತಾನ, ತಮಿಳು ನಾಡು ಬ್ಯಾನ್

KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಮತ್ತೆ ವಿವಾದದ ಕಿಡಿಹೊತ್ತಿಸಿದ ಮಾಜಿ ಸಚಿವ ರಾಜಣ್ಣ

2013-18ರ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದುನೇ ಬೇರೆ; ನಾಯಕನಾದವನಿಗೆ ಹೇಳಲಾಗದ ಒತ್ತಡ ಇರುತ್ತದೆ: ರಾಜಣ್ಣ ಹೊಸ ಬಾಂಬ್

SCROLL FOR NEXT