ನಕಲಿ ಮತದಾರರ ಪಟ್ಟಿ (ಸಾಂದರ್ಭಿಕ ಚಿತ್ರ) 
ದೇಶ

Bihar SIR: ಕೈ ಬಿಟ್ಟ 65 ಲಕ್ಷ ಮತದಾರರ ಪಟ್ಟಿ ಬಿಡುಗಡೆ ಮಾಡಿದ Election Commission

ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಆರಂಭಿಸಿದ್ದಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಬಿಹಾರ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಬಹಿರಂಗಪಡಿಸಿದೆ.

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕೇಂದ್ರ ಚುನಾವಣಾ ಆಯೋಗ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದು, ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೌದು.. ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಆರಂಭಿಸಿದ್ದಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಬಿಹಾರ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಬಹಿರಂಗಪಡಿಸಿದೆ.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 19 ರೊಳಗೆ ಅಳಿಸಲಾದ ಹೆಸರುಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಆಗಸ್ಟ್ 22 ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.

ಚುನಾವಣಾ ಆಯೋಗವು ಮತಗಟ್ಟೆಗಳಾದ್ಯಂತ 'ASD' (ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಸತ್ತ) ಮತದಾರರ ಹೆಸರುಗಳನ್ನು ಪ್ರಕಟಿಸುತ್ತಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆನ್‌ಲೈನ್‌ನಲ್ಲಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.

ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (CEO) ಪ್ರಕಾರ, ರೋಹ್ತಾಸ್, ಬೇಗುಸರಾಯ್, ಅರ್ವಾಲ್ ಮತ್ತು ಇತರ ಸ್ಥಳಗಳ ಮತಗಟ್ಟೆಗಳಲ್ಲಿ ASD ಪಟ್ಟಿಗಳನ್ನು ಪ್ರದರ್ಶಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿಯ 'ವೋಟ್ ಚೋರಿ' ಆರೋಪ ಖಂಡಿಸಿ 272 ಗಣ್ಯರಿಂದ ಬಹಿರಂಗ ಪತ್ರ; ಚುನಾವಣಾ ಆಯೋಗದ ಪರವಾಗಿ ವಾದ!

ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ ರೂ. ಹಣ ದರೋಡೆ; ಗ್ಯಾಂಗ್ ಪರಾರಿ!

ನೇಪಾಳದ Gen Zಗಳು ಭಾರತಕ್ಕೂ ಬೇಕೆಂಬ ಆಸೆಯಲ್ಲಿದ್ದವರಿಗೆ ಬಿಹಾರದಲ್ಲಿ ಸಿಕ್ಕಿದ್ದು ಮೈಥಿಲಿ! (ತೆರೆದ ಕಿಟಕಿ)

ಭಾರತೀಯ ಮೂಲದ ಮಮ್ದಾನಿ "ಭಾರತೀಯರನ್ನು ದ್ವೇಷಿಸುತ್ತಾರೆ: ಹೊಸ ಬಾಂಬ್ ಸಿಡಿಸಿದ ಡೊನಾಲ್ಡ್ ಟ್ರಂಪ್ ಪುತ್ರ!

ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ; ನಾಳೆ ಬಿಹಾರ ನೂತನ ಸಿಎಂ ಆಗಿ ಪ್ರಮಾಣ

SCROLL FOR NEXT