ಕಾಶ್ಮೀರ: ನಿಷೇಧಿತ ಜಮಾತ್- ಇ- ಇಸ್ಲಾಮಿ (JeI) ನೊಂದಿಗೆ ಸಂಯೋಜಿತವಾಗಿರುವ 215 ಶಾಲೆಗಳ ನಿರ್ವಹಣೆಯನ್ನು ಜಮ್ಮು ಮತ್ತು ಸರ್ಕಾರ ತೆಗೆದುಕೊಂಡಿರುವುದನ್ನು ಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಶನಿವಾರ ಟೀಕಿಸಿವೆ.
ಅನೇಕರು ಇದನ್ನು ನ್ಯಾಷನಲ್ ಕಾನ್ಫರೆನ್ಸ್‌ನ "ದ್ರೋಹ" ಎಂದು ಕರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಸಂಸ್ಥೆಗಳ ಮೇಲಿನ ಮತ್ತೊಂದು ದಾಳಿ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬಣ್ಣಿಸಿದ್ದಾರೆ.
ಆಡಳಿತ ಪಕ್ಷವು "ತನ್ನ ಸ್ವಂತ ಜನರ ವಿರುದ್ಧ ಮತ್ತು ಬಿಜೆಪಿಯ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ. ಇದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಇಸ್ಲಾಮಿಕ್ ಶಿಕ್ಷಣದ ಜೊತೆಗೆ ನಿಯಮಿತ ಶಿಕ್ಷಣವನ್ನು ಒದಗಿಸುವ ಕೆಲವೇ ಶಾಲೆಗಳಿವೆ. ಸರ್ಕಾರದ ಕ್ರಮ ಜಮ್ಮು ಮತ್ತು ಕಾಶ್ಮೀರದ ಸಂಸ್ಥೆಗಳು ಮತ್ತು ಸಂಸ್ಕೃತಿಯ ಮೇಲಿನ ಮತ್ತೊಂದು ದಾಳಿಯಾಗಿದೆ ಎಂದಿದ್ದಾರೆ.
ಈ ಹಿಂದೆ JEIನ ಆಸ್ತಿಯನ್ನು ಸ್ವಾಧೀನಪಡಿಸಲಾಗಿತ್ತು.ತದನಂತರ ಅದನ್ನು ನಿಷೇಧಿಸಲಾಗಿತ್ತು, ಆದರೆ ಚುನಾಯಿತ ಸರ್ಕಾರ ಬಂದ ಮೇಲೆ ಇಂತಹ ನಮ್ಮ ಸಂಸ್ಥೆಗಳ ಮೇಲಿನ ದಾಳಿ ನಿಲ್ಲುತ್ತದೆ ಎಂದು ಜನರು ಭಾವಿಸಿದ್ದರು. ಹೀಗಾಗಿ ಜನರು ಜನರು ನ್ಯಾಷನಲ್ ಕಾನ್ಫರೆನ್ಸ್‌ಗೆ ಸುಮಾರು 50 ಸ್ಥಾನಗಳನ್ನು ಮತ್ತು ಲಡಾಖ್ ಸೇರಿದಂತೆ ಮೂರು ಕಡೆಗಳಲ್ಲಿ ಸಂಸದರನ್ನು ಆಯ್ಕೆ ಮಾಡಿದ್ದರು. ಆದರೆ, ಸರ್ಕಾರದಿಂದ ಇಂತಹ ಆದೇಶ ಬಂದಿರುವುದು ದುರಾದೃಷ್ಟಕರವಾಗಿದ್ದು, ಬಿಜೆಪಿ ಅಜೆಂಡಾ ಹೇರಲಾಗುತ್ತಿದೆ ಎಂದು ಟೀಕಿಸಿದ್ದಾರೆ
ಸರ್ಕಾರದ ಸ್ಪಷ್ಟನೆ: ಈ ಮಧ್ಯೆ ಜಮಾತ್ ಸಂಬಂಧಿತ 215 ಶಾಲೆಗಳನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂಬ ಆರೋಪವನ್ನು ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಸಚಿವರು ನಿರಾಕರಿಸಿದ್ದಾರೆ. ಸಿಐಡಿ ಪರಿಶೀಲನೆಯ ನಂತರ ಹೊಸ ಸಮಿತಿಗಳನ್ನು ರಚಿಸುವವರೆಗೆ ತಾತ್ಕಾಲಿಕವಾಗಿ ಆ ಶಾಲೆಗಳ ಬಗ್ಗೆ ಕಾಳಜಿಗೆ ಪ್ರಸ್ತಾಪಿಸಲಾಗಿದೆ ಎಂದು ಶಿಕ್ಷಣ ಸಚಿವರಾದ ಸಕೀನಾ ಇಟೂ ಸ್ಪಷ್ಪಪಡಿಸಿದ್ದಾರೆ.
"ಈ 215 ಶಾಲೆಗಳ ಆಡಳಿತ ಸಮಿತಿಗಳ ಅವಧಿ ಮುಗಿದಿದೆ ಮತ್ತು ಈ ಶಾಲೆಗಳನ್ನು ಕ್ಲಸ್ಟರ್ ಪ್ರಾಂಶುಪಾಲರು ನೋಡಿಕೊಳ್ಳುತ್ತಾರೆ. ಜಿಲ್ಲಾಧಿಕಾರಿ ಅಲ್ಲ ಎಂಬುದನ್ನು ಸರ್ಕಾರದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.