ಗಣಪತಿ ಮೂರ್ತಿಗಳ ನಿಮಜ್ಜನ 
ದೇಶ

Mumbai: ಅದ್ಧೂರಿ ಗಣೇಶೋತ್ಸವ, ಕೇವಲ ಒಂದೂವರೆ ದಿನಗಳಲ್ಲಿ ಸುಮಾರು 600 ಮೂರ್ತಿಗಳ ನಿಮಜ್ಜನ!

10 ದಿನಗಳ ಉತ್ಸವದಲ್ಲಿ ಒಂದೂವರೆ ದಿನ ನಂತರ ಐದು ಹಾಗೂ ಏಳನೇ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಗುರುವಾರ ಮಧ್ಯಾಹ್ನದವರೆಗೆ ಸುಮಾರು 600 ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.

10 ದಿನಗಳ ಉತ್ಸವದಲ್ಲಿ ಒಂದೂವರೆ ದಿನ ನಂತರ ಐದು ಹಾಗೂ ಏಳನೇ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಇದುವರೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಉತ್ಸವದ ಎರಡನೇ ದಿನವಾದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 583 ' ಗಣಪತಿ ಮೂರ್ತಿಗಳನ್ನು ಸಮುದ್ರ, ಕೆರೆ ಮತ್ತಿತರ ಕಡೆಗಳಲ್ಲಿ ವಿಸರ್ಜಿಸಲಾಗಿದೆ. ಇವುಗಳಲ್ಲಿ 575 ಮನೆಗಳಲ್ಲಿ ಇಡಲಾದ ಗಣಪತಿ ಮೂರ್ತಿಗಳು ಮತ್ತು ಮೂರು ಸಾರ್ವಜನಿಕ ಗಣೇಶೋತ್ಸವದ ಗಣಪತಿ ಮೂರ್ತಿಗಳು ಸೇರಿವೆ.

583 ಗಣಪತಿ ಮೂರ್ತಿಗಳ ಪೈಕಿ ಮನೆಯಲಲಿ ಇಟ್ಟಿದ್ದ 321 ಮೂರ್ತಿಗಳು, ಎರಡು ಸಾರ್ವಜನಿಕ ಗಣೇಶೋತ್ಸವದ ಮೂರ್ತಿಗಳು ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಣೇಶ ಮೂರ್ತಿಗಳ ವಿಸರ್ಜನೆಗಾಗಿ BMC ಈ ವರ್ಷ 70 ಜಲಮೂಲಗಳು ಮತ್ತು 288 ಕೃತಕ ಕೊಳಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಹಬ್ಬವು ಗಣೇಶ ಚತುರ್ಥಿಯಂದು (ಆಗಸ್ಟ್ 27) ಪ್ರಾರಂಭವಾಯಿತು. ಅನಂತ ಚತುರ್ದಶಿ (ಸೆಪ್ಟೆಂಬರ್ 6) ರಂದು ಕೊನೆಗೊಳ್ಳುತ್ತದೆ.

ಪರಿಸರವನ್ನು ಸಂರಕ್ಷಿಸುವ ಕ್ರಮಗಳ ಭಾಗವಾಗಿ, ನಾಗರಿಕರು ತಮ್ಮ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಡ್ರಮ್ ಅಥವಾ ಬಕೆಟ್‌ಗಳಲ್ಲಿ ವಿಸರ್ಜಿಸುವಂತೆ ನಾಗರಿಕ ಸಂಸ್ಥೆ ಸೂಚಿಸಿದೆ. ಆದರೆ 6 ಅಡಿಗಿಂತ ಕಡಿಮೆ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ಕೃತಕ ಕೊಳಗಳಲ್ಲಿ ವಿಸರ್ಜಿಸಬೇಕು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT