ಪ್ರಧಾನಿ ಮೋದಿ 
ದೇಶ

ಸಂಸತ್ ಚಳಿಗಾಲದ ಅಧಿವೇಶನ: ಸೋಲಿನ ಭೀತಿ ಚರ್ಚೆಗೆ ಕಾರಣವಾಗಬಾರದು- ವಿಪಕ್ಷಗಳಿಗೆ ಪ್ರಧಾನಿ ಮೋದಿ ಒತ್ತಾಯ

ಭಾರತ ಪ್ರಜಾಪ್ರಭುತ್ವದಲ್ಲಿ ಬದುಕಿದ್ದು, ಪ್ರಜಾಪ್ರಭುತ್ವದ ಉತ್ಸಾಹ ಪದೇ ಪದೇ ವ್ಯಕ್ತವಾಗುತ್ತಿರುವುದರಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಬಲವಾಗಿ ಬೆಳೆಯುತ್ತಲೇ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನದಲ್ಲಿ ಸೋಲಿನ ಭೀತಿ ಪ್ರತಿಪಕ್ಷಗಳ ಚರ್ಚೆಗೆ ಕಾರಣವಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಸಂಸತ್ ಭವನದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಭಾರತ ಪ್ರಜಾಪ್ರಭುತ್ವದಲ್ಲಿ ಬದುಕಿದ್ದು, ಪ್ರಜಾಪ್ರಭುತ್ವದ ಉತ್ಸಾಹ ಪದೇ ಪದೇ ವ್ಯಕ್ತವಾಗುತ್ತಿರುವುದರಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಬಲವಾಗಿ ಬೆಳೆಯುತ್ತಲೇ ಇದೆ ಎಂದರು.

ಈ ಅಧಿವೇಶನದಲ್ಲಿ ಸೋಲಿನ ಭೀತಿ ಚರ್ಚೆಗೆ ಕಾರಣವಾಗಬಾರದು ಎಂದು ವಿಪಕ್ಷಗಳನ್ನು ಒತ್ತಾಯಿಸುತ್ತೇನೆ. ಜನರ ಪ್ರತಿನಿಧಿಗಳಾಗಿ, ಭವಿಷ್ಯದ ಬಗ್ಗೆ ಯೋಚಿಸುವಾಗ ನಾವು ದೇಶದ ಜನರ ಜವಾಬ್ದಾರಿ ಮತ್ತು ನಿರೀಕ್ಷೆಗಳನ್ನು ಅತ್ಯಂತ ಸಮತೋಲನ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ಈ ಸಂಸತ್ತು ದೇಶದ ಬಗ್ಗೆ ಏನು ಯೋಚಿಸುತ್ತದೆ ದೇಶಕ್ಕಾಗಿ ಏನು ಮಾಡಲು ಬಯಸುತ್ತದೆ ಎಂಬುದರ ಮೇಲೆ ಅಧಿವೇಶನ ಗಮನ ಕೇಂದ್ರೀಕರಿಸಬೇಕು. ವಿರೋಧ ಪಕ್ಷಗಳು ಸಹ ತನ್ನ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಅಂತಹ ಸಮಸ್ಯೆಗಳು, ಬಲವಾದ ಸಮಸ್ಯೆಗಳನ್ನು ಎತ್ತಬೇಕು. ಅವರ ಸೋಲಿನ ನಿರಾಶೆಯನ್ನು ಮರೆತುಬಿಡಬೇಕು ಎಂದರು.

ದುರಾದೃಷ್ಟವಶಾತ್ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವು ಪಕ್ಷಗಳಿವೆ. ಬಿಹಾರ ಫಲಿತಾಂಶ ಬಂದು ಸ್ವಲ್ಪ ದಿನ ಆಗಿರುವುದರಿಂದ ಅವರು ಸ್ವಲ್ಪ ಶಾಂತವಾಗಿರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರು ಸೋಲಿನಿಂದ ಹೊರಬಂದಿಲ್ಲ ಎಂಬ ವಿಚಾರವನ್ನು ನಿನ್ನೆ ನಾನು ಕೇಳಿದೆ ಎಂದರು.

ನಾಟಕ ಮಾಡ ಬಯಸುವವರ ಅದನ್ನು ಇಲ್ಲಿ ಮಾಡಬಹುದು. ಆದರೆ ನಾಟಕವಲ್ಲ, ನೀತಿಯ ಮೇಲೆ ಮಾಡಬಹುದು. ಪ್ರತಿಭಟನೆ ಅಲ್ಲ ಎಂದು ಹೇಳಿದರು. ಡಿಸೆಂಬರ್ 19ರವರೆಗೂ ಸಂಸತ್ ಚಳಿಗಾಲದ ಅಧಿವೇಶನ ಮುಂದುವರೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಸತ್ ಚಳಿಗಾಲದ ಅಧಿವೇಶನ: SIR ಬಗ್ಗೆ ಚರ್ಚೆಗೆ ವಿಪಕ್ಷಗಳ ಪ್ರತಿಭಟನೆ, ಗದ್ದಲ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ: SIR ಕುರಿತ ಚರ್ಚೆಗೆ ವಿಪಕ್ಷಗಳಿಂದ ಪಟ್ಟು, ಸ್ಪಷ್ಟನೆ ನೀಡದ ಸರ್ಕಾರ

ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)

ಕುರ್ಚಿ ಕದನ: ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ನಡೆದ ಚರ್ಚೆ ಏನು?

' ನನ್ನ ರಾಜಕೀಯ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ, ನನ್ನ ಇತಿಮಿತಿ ತಿಳಿದಿದೆ- DKS ಸೈಲೆಂಟ್ ಗುಟ್ಟೇನು?

SCROLL FOR NEXT