ಇಂಡಿಗೋ 
ದೇಶ

ಇಂಡಿಗೋ ಅವ್ಯವಸ್ಥೆಯ ನಂತರ, ಪೈಲಟ್​ಗಳ ರಜಾ ನಿಯಮ ಸಡಿಲಿಸಿದ DGCA

"ವಾರದ ವಿಶ್ರಾಂತಿ ಜೊತೆ ಯಾವುದೇ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ", ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.

ನವದೆಹಲಿ: ಇಂಡಿಗೋ ವಿಮಾನಯಾನ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಸ್ಥೆಯ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ವು ಶುಕ್ರವಾರ ಪೈಲಟ್​ಗಳ ರಜಾ ನಿಯಮಗಳನ್ನು ಸಡಿಲಿಸಿದ್ದು, ವಾರದ ವಿಶ್ರಾಂತಿ ಅವಧಿಯನ್ನು ಅನುಮತಿಸಿದೆ ಎಂದು ಮೂಲಗಳು ತಿಳಿಸಿವೆ.

ಪರಿಷ್ಕೃತ ವಿಮಾನ ಸಿಬ್ಬಂದಿ ಕರ್ತವ್ಯ ಸಮಯ ಮಿತಿಗಳು(FDTL) ಮಾನದಂಡಗಳ ಪ್ರಕಾರ, "ವಾರದ ವಿಶ್ರಾಂತಿ ಜೊತೆ ಯಾವುದೇ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ", ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.

ಪೈಲಟ್‌ಗಳಲ್ಲಿನ ಹೆಚ್ಚಿನ ಕೆಲಸದ ಒತ್ತಡವನ್ನು ಪರಿಹರಿಸುವ ಪ್ರಯತ್ನಗಳ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ.

ಇಂಡಿಗೋ ವಿಮಾನದ ಅಡಚಣೆಗಳನ್ನು ಉಲ್ಲೇಖಿಸಿ, FDTL ಮಾನದಂಡಗಳಿಂದ 'ವಾರದ ವಿಶ್ರಾಂತಿಗೆ ಜೊತೆ ಯಾವುದೇ ರಜೆಯನ್ನು ಬದಲಾಯಿಸಬಾರದು' ಎಂಬ ನಿಬಂಧನೆಯನ್ನು ಹಿಂತೆಗೆದುಕೊಳ್ಳಲು DGCA ನಿರ್ಧರಿಸಿದೆ ಎಂದು ಮೂಲಗಳು PTI ಗೆ ತಿಳಿಸಿವೆ.

FDTL ಮಾನದಂಡಗಳ ಪ್ರಕಾರ ಒಂದು ವಾರಕ್ಕೆ ಎರಡು ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಬೇಕಾಗಿತ್ತು. ಈಗ ಈ ನಿಯಮ ಕಡ್ಡಾಯ ಜಾರಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪೈಲಟ್ ಗಳ ಕೊರತೆಯ ಸಮಸ್ಯೆಯು ಸ್ಪಲ್ಪ ಮಟ್ಟಿಗೆ ಬಗೆಹರಿದು ಪ್ರಯಾಣಿಕರ ಸಂಕಷ್ಟ ಸ್ಪಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ.

ನವೆಂಬರ್ 1 ರಿಂದ ಜಾರಿಗೆ ಬಂದ ಎರಡನೇ ಹಂತದ ಪರಿಷ್ಕೃತ ಎಫ್‌ಡಿಟಿಎಲ್ ಅನುಷ್ಠಾನಕ್ಕೆ ಮುಂಚಿತವಾಗಿ ಯೋಜನೆಯಲ್ಲಿನ ಅಂತರವು ಇಂಡಿಗೋದಲ್ಲಿ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ ಮತ್ತು ಇದು ಪ್ರಸ್ತುತ ಅಡಚಣೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಟ": ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ, ಪುಟಿನ್

ಭಾರತದ ಕಂಪನಿಗಳಿಂದ ರಫ್ತು ವಿಸ್ತರಣೆಗೆ 6 ವಲಯ ಗುರುತಿಸಿದ ರಷ್ಯಾ: 2030 ರ ವೇಳೆಗೆ $100 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರದ ಗುರಿ!

ಅಕ್ಷಯ್ ಕುಮಾರ್- ಶಿಲ್ಪಾ ಶೆಟ್ಟಿ ಮದುವೆ ಮುರಿದು ಬೀಳಲು ಇದೇ ಕಾರಣ! ಅವರಿಬ್ಬರ 'ಗುಟ್ಟು ರಟ್ಟು' ಮಾಡಿದ ನಿರ್ದೇಶಕ

ಅನಾಥರಿಗೆ ಶೇ.1 ರಷ್ಟು ಮೀಸಲಾತಿ 'ಐತಿಹಾಸಿಕ'; ಇದು ನಿಜವಾದ ಸಾಮಾಜಿಕ ಪರಿವರ್ತನೆ: ಮಹಾ ಸಿಎಂ ಫಡ್ನವೀಸ್

ದಿಢೀರ್ ನೂರಾರು ವಿಮಾನ ರದ್ದು: ಪ್ರಯಾಣಿಕರ ಕ್ಷಮೆ ಕೇಳಿದ ಇಂಡಿಗೋ!

SCROLL FOR NEXT