ನವದೆಹಲಿ: 'ಸುಪ್ರೀಂಕೋರ್ಟ್ ಅಂದ್ರೆ ಜನ ಸಾಮಾನ್ಯರಿಗಾಗಿ' ಎಂಬರ್ಥದ ಬಲವಾದ ಸಂದೇಶ ನೀಡಲು ಬಯಸುತ್ತೇನೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶನಿವಾರ ಹೇಳಿದ್ದಾರೆ.
ಸೂಕ್ತ ಸಮಯಾವಧಿ ಮತ್ತು ರಾಷ್ಟ್ರೀಯ ಏಕೀಕೃತ ನ್ಯಾಯಾಂಗ ನೀತಿ ಆಧಾರಿತವಾಗಿ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥ ತಮ್ಮ ಆದ್ಯತೆ ಎಂದಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಸಿಜೆಐ, ನ್ಯಾಯ ಪಡೆಯುವ ಬಗ್ಗೆ ಮಾತನಾಡಿದರು. ಮೊಕದ್ದಮೆಗೆ ತಗಲುವ ವೆಚ್ಚ ಕಡಿಮೆ ಮಾಡುವುದು ಮತ್ತು ಸೂಕ್ತ ಸಮಯದಲ್ಲಿ ಹೇಗೆ ಪ್ರಕರಣ ಇತ್ಯರ್ಥಪಡಿಸಬಹುದು ಎಂಬುದು ತನ್ನ ಮೊದಲ ಆದ್ಯತೆಯಾಗಿದೆ ಎಂದರು.
ಸ್ವಾತಂತ್ರ್ಯ ನ್ಯಾಯಾಂಗ ಕುರಿತ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ಕಾಂತ್, ಅಧಿಕಾರ ಹಂಚಿಕೆಯ ಸಾಂವಿಧಾನಿಕ ತತ್ವಶಾಸ್ತ್ರವನ್ನು ಉಲ್ಲೇಖಿಸಿದರು.
ಸಂವಿಧಾನವು ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಆಯಾ ಪಾತ್ರಗಳನ್ನು ಸುಂದರವಾಗಿ ವ್ಯಾಖ್ಯಾನಿಸಿದೆ. ಯಾವುದೇ ಅತಿಕ್ರಮಣವಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಹೇಳಿದರು.
ಊಹಿಸಬಹುದಾದ ಸೂಕ್ತ ಸಂದರ್ಭದಲ್ಲಿ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥ ನನ್ನ ಪ್ರಥಮ ಆದ್ಯತೆಯಾಗಿದೆ. ಎಲ್ಲಾ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತೇನೆ ಎಂದು ಹೇಳಲ್ಲ. ಅದು ಆಗದು ಇಲ್ಲ. ಮೊಕದ್ದಮೆ ಹಾಕುವುದು ನಡೆಯುತ್ತಾ ಇರುವ ಪ್ರಕ್ರಿಯೆ ಇರುವುದರಿಂದ ಅದು ಸಾಧ್ಯವಾಗಲ್ಲ. ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದರು.
ಕೇಸ್ ದಾಖಲಿಸಬಹುದು ಆದರೆ ಹಳೆಯ ಬಾಕಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕಾದ ಅಗತ್ಯವಿದೆ. ಇದೊಂದು ಪ್ರಬಲ ಗೇಮ್ ಚೇಂಜರ್ ಆಗಿದೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೊಕದ್ದಮೆಗಳು ಸೇರಿದಂತೆ ಸುಪ್ರೀಂಕೋರ್ಟ್ ನಲ್ಲಿ ಕೆಲವೊಂದು ಸುಧಾರಣೆಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.