ನಾಗ್ಪುರ: ಆರ್ಥಿಕ ಸಂಕಷ್ಟ, ಪತಿಯ ನಂಬಿಕೆ ದ್ರೋಹದಿಂದ ನೊಂದ ಕಬಡ್ಡಿ ಆಟಗಾರ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಸೂರಜ್ ದಾಧೆ ಆತ್ಮಹತ್ಯೆ ಮಾಡಿಕೊಂಡ ಕಬಡ್ಡಿ ಆಟಗಾರ್ತಿ.
ಆರ್ಥಿಕವಾಗಿ ದುರ್ಬಲರಾಗಿದ್ದ ಕಿರಣ್ ಸೂರಜ್ ದಾಧೆ 2020 ರಲ್ಲಿ ಸ್ವಪ್ನಿಲ್ ಜಯದೇವ್ ಲಂಬ್‌ಘರೆ ಎಂಬಾತನನ್ನು ವಿವಾಹವಾದರು. ಮದುವೆ ವೇಳೆ ಆಕೆಗೆ ನೌಕರಿ ಕೊಡಿಸಿ ಆರ್ಥಿಕ ಸಂಕಷ್ಟವನ್ನು ಬಗೆಹರಿಸುವುದಾಗಿ ಸಪ್ನಿಲ್ ಭರವಸೆ ನೀಡಿದ್ದ.
ಆದರೆ ಸ್ವಪ್ನಿಲ್ ನೌಕರಿ ಕೊಡಿಸುವ ವಿಷಯದಲ್ಲಿ ವಿಳಂಬ ಮಾಡಿದ್ದರಿಂದ. ಜೊತೆಗೆ ಲೈಂಗಿಕ ನೆರವು ಕೋರುವುದು ಸೇರಿದಂತೆ ಮಾನಸಿಕ ಕಿರುಕುಳ ನೀಡಿದ್ದರಿಂದ ತಾನು ಮೋಸ ಹೋಗಿದ್ದೇನೆ ಎಂದು ನಂತರ ಅರಿವಾಯಿತು. ಕೊನೆಗೆ ಆತನ ಮನೆಯನ್ನು ತೊರೆದು ತನ್ನ ಪೋಷಕರ ಮನೆಗೆ ಕಿರಣ್ ಮರಳಿದಳು. ಬೆದರಿಕೆ ಮತ್ತು ನಿಂದನೆಯನ್ನು ಎದುರಿಸಿದ ಆಕೆಯ ಕುಟುಂಬವು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿತು. ಕಿರಣ್ ಕಿರುಕುಳ ನೀಡಿದ್ದ ಸಾಕ್ಷಿಗಾಗಿ ತನ್ನ ಫೋನ್‌ನಲ್ಲಿ ಸಂದೇಶಗಳನ್ನು ಸಂರಕ್ಷಿಸಿಟ್ಟಿದ್ದಾಳೆಂದು ವರದಿಯಾಗಿದೆ.
ಡಿಸೆಂಬರ್ 4 ರಂದು ಕಿರಣ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು. ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಮೂರು ದಿನಗಳ ನಂತರ ನಿಧನರಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಸ್ವಪ್ನಿಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.