ಕಂಗನಾ ರಣಾವತ್ 
ದೇಶ

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

ನಾವು ಜನರ ಪ್ರತಿನಿಧಿಗಳು, ಹೊಸ ಸಂಸದರಾಗಿ ಇಲ್ಲಿಗೆ ಬಂದಿರುವ ನಾವು ಕಲಿಯುವುದು ಸಾಕಷ್ಟಿದೆ. ವಿಪಕ್ಷಗಳ ಸದಸ್ಯರು ಪ್ರತಿಯೊಂದು ಅಧಿವೇಶನವನ್ನು ರಂಗಮಂದಿರವನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲಲು ಮತದಾನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಅವರ ಜನರ ಹೃದಯವನ್ನು ಹ್ಯಾಕ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ನಡೆದ 'ಚುನಾವಣೆ ಸುಧಾರಣೆ' ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಣಾವತ್, ಪ್ರತಿಪಕ್ಷಗಳ ಸದಸ್ಯರು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕಳೆದ ವರ್ಷ ತೀವ್ರ ಆಘಾತವಾಗಿತ್ತು. ಅವರನ್ನು ಆಗಾಗ್ಗೆ ಹಾಗೆ ನೋಡುವುದು ಆಘಾತಕಾರಿ ಎಂದು ಹೇಳಿದರು.

ವಿಪಕ್ಷ ಸಂಸದರು ಪದೇ ಪದೇ ಸದನದ ಬಾವಿಗಿಳಿದು SIR, SIR'ಎಂದು ಕೂಗಿ ಸಾಧ್ಯವಾದಷ್ಟು ಎಲ್ಲಾ ಮಾರ್ಗಗಳಲ್ಲಿ ಬೆದರಿಕೆ, ಅನುಚಿತ ವರ್ತನೆ ಮಾಡಲು ಪ್ರಯತ್ನಿಸಿದರು. ಈ ಅಡ್ಡಿಯಿಂದ ಸಂಸತ್ ಕಲಾಪ ಸುಗಮವಾಗಿ ಸಾಗಿರಲಿಲ್ಲ .ಕಳೆದ ಎರಡೂ ಮೂರು ದಿನ ಹೊರತುಪಡಿಸಿದರೆ ಬಹುತೇಕ ಅವರು ಸದನ ನಡೆಯಲು ಅವಕಾಶ ನೀಡಿರಲಿಲ್ಲ ಎಂದರು.

ನಾವು ಜನರ ಪ್ರತಿನಿಧಿಗಳು, ಹೊಸ ಸಂಸದರಾಗಿ ಇಲ್ಲಿಗೆ ಬಂದಿರುವ ನಾವು ಕಲಿಯುವುದು ಸಾಕಷ್ಟಿದೆ. ವಿಪಕ್ಷಗಳ ಸದಸ್ಯರು ಪ್ರತಿಯೊಂದು ಅಧಿವೇಶನವನ್ನು ರಂಗಮಂದಿರವನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಜನರ ಹೃದಯವನ್ನೇ ಹ್ಯಾಕ್ ಮಾಡಿದ್ದಾರೆ: ಇವಿಎಂ ದುರ್ಬಳಕೆ ಆರೋಪ ಕುರಿತು ವಿಪಕ್ಷಗಳ ವಿರುದ್ಧ ಕಿಡಿಕಾರಿದ ರಣಾವತ್, ಕಾಂಗ್ರೆಸ್ ನಾಯಕರು ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪ್ರಧಾನಿ EVM ಹ್ಯಾಕ್ ಮಾಡಿಲ್ಲ. ಜನರ ಹೃದಯವನ್ನೇ ಹ್ಯಾಕ್ ಮಾಡಿದ್ದಾರೆ ಎಂದು ನಾನು ಕಾಂಗ್ರೆಸ್ ಜನರಿಗೆ ಹೇಳುತ್ತೇನೆ ಎಂದ ಅವರು, ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ವಾಪಸ್ಸಾಗುವ ಬೇಡಿಕೆಯನ್ನು ಅಪಹಾಸ್ಯ ಮಾಡಿದರು. ಅದನ್ನು ಮತ್ತೊಂದು ಯುಗದ ಹಳೆಯ ಅವಶೇಷ" ಎಂದು ಕರೆದರು.

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ, ವರ್ಷವಿಡೀ ಅದೇ ಆರೋಪಗಳನ್ನು ಕೇಳಿದ ನಂತರ ಅವರು ದೊಡ್ಡ ವಿಚಾರನ್ನು ಬಹಿರಂಗ ಮಾಡುವ ಬಗ್ಗೆ ನಿರೀಕ್ಷಿಸುತ್ತಿದ್ದೆ. ಬದಲಾಗಿ, ಗಾಂಧಿಯವರು ಖಾದಿ, ದಾರಗಳು ಮತ್ತು ಜನರ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿದರು.

ವಿದೇಶಿ ಪ್ರಜೆಯ ಫೋಟೋ ಪ್ರದರ್ಶನಕ್ಕೆ ಕಿಡಿ: ಚರ್ಚೆ ವೇಳೆ ಯಾವುದೇ ಫಲಕ ಪ್ರದರ್ಶಿಸಬಾರದು ಎಂಬ ಸದನದ ನಿಯಮಗಳಿದ್ದರೂ ವಿದೇಶಿ ಮೂಲದ" ಮಹಿಳೆಯ ಫೋಟೋವನ್ನು ಪ್ರದರ್ಶಿಸಿದ್ದಕ್ಕಾಗಿ ವಿಪಕ್ಷ ಸದಸ್ಯರ ವಿರುದ್ಧ ಕಿಡಿಕಾರಿದರು.

ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಗೆ ಕ್ಷಮೆಯಾಚನೆ: ಮಹಿಳೆಯಾಗಿ ಪ್ರತಿಯೊಬ್ಬ ಮಹಿಳೆ ತನ್ನ ಘನತೆಗೆ ಅರ್ಹಳು ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು. ಹರಿಯಾಣ ವಿಧಾನಸಭೆ ಚುನಾವಣೆ ಸಂಬಂಧ ವಿವಾದಕ್ಕೊಳಗಾಗಿರುವ ಮಹಿಳೆ ತಾನು ಭಾರತಕ್ಕೆ ಎಂದಿಗೂ ಬಂದಿಲ್ಲ" ಮತ್ತು ಚುನಾವಣೆಗೆ ಯಾವುದೇ ಸಂಬಂಧವಿಲ್ಲ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. "ಆದರೂ ಯಾವುದೇ ಪುರಾವೆಗಳಿಲ್ಲದೆ ಅವರ ಫೋಟೋವನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಅದು ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಸದನದ ಪರವಾಗಿ ನಾನು ಅವಳಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ರಣಾವತ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಡಿಗೆದಾರರಿಗೆ ಸಿಹಿ ಸುದ್ದಿ: ಕರ್ನಾಟಕ 'ಬಾಡಿಗೆ ತಿದ್ದುಪಡಿ ವಿಧೇಯಕ' 2025 ವಿಧಾನಸಭೆಯಲ್ಲಿ ಮಂಡನೆ!

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

ಸರ್ಕಾರದ ವಿರುದ್ಧ ಹೋರಾಡಿ ಗೆದ್ದ ಅಲೋಕ್ ಕುಮಾರ್​​ಗೆ DGP ಆಗಿ ಮುಂಬಡ್ತಿ: ADGP ಬಿ.ದಯಾನಂದ್ ವರ್ಗಾವಣೆ

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು!

SCROLL FOR NEXT