ಸಂಸತ್ ಭವನ 
ದೇಶ

'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಪರಿಶೀಲಿಸುವ ಸಮಿತಿಯ ಅವಧಿ ವಿಸ್ತರಣೆ

ಲೋಕಸಭೆಯು ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಿತು.

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಪರಿಶೀಲಿಸಲು ರಚಿಸಲಾಗಿರುವ ಸಂಸದೀಯ ಸಮಿತಿಯ ಅವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ.

ಸಂವಿಧಾನದ(129 ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು(ತಿದ್ದುಪಡಿ) ಮಸೂದೆ, 2024 ಕುರಿತ ಜಂಟಿ ಸಮಿತಿ ಅವಧಿಯನ್ನು 2026ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಕೋರಿ ಸಮಿತಿಯ ಅಧ್ಯಕ್ಷ ಪಿ ಪಿ ಚೌಧರಿ ಪ್ರಸ್ತಾವನೆ ಮಂಡಿಸಿದರು.

ಬಳಿಕ ಲೋಕಸಭೆಯು ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಿತು.

ಕಳೆದ ಡಿಸೆಂಬರ್‌ನಲ್ಲಿ ಸಮಿತಿಯನ್ನು ರಚಿಸಿದಾಗಿನಿಂದ, ಸಮಿತಿಯು ಸಾಂವಿಧಾನಿಕ ತಜ್ಞರು, ಅರ್ಥಶಾಸ್ತ್ರಜ್ಞರು, ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಸೇರಿದಂತೆ ಇತರರನ್ನು ಭೇಟಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತ ಮೇಲೆ ಶೇ.50 ಸುಂಕ ರದ್ದು ಮಾಡಿ, ಇದರಿಂದ ನಮ್ಮ ದೇಶಕ್ಕೇ ನಷ್ಟ': Donald Trump ಗೆ ಸೆನೆಟ್ ಸದಸ್ಯರ ಬೇಡಿಕೆ, ನಿರ್ಣಯ ಮಂಡನೆ

ಕಾಂಗ್ರೆಸ್‌ ಪ್ರತಿಭಟನೆಗೆ ಹೊಸ ಅಸ್ತ್ರ: ಆಳಂದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ CID ಚಾರ್ಜ್ ಶೀಟ್ ಸಲ್ಲಿಕೆ

ಜನೌಷಧಿ ಕೇಂದ್ರಗಳಿಗೆ ಶಕ್ತಿ ತುಂಬಿದ ಕರ್ನಾಟಕ, ಕೇರಳ, ತಮಿಳುನಾಡು!

ಚುಮು ಚುಮು ಚಳಿಯಲಿ ಆಹಾರ ಹೀಗಿರಲಿ (ಕುಶಲವೇ ಕ್ಷೇಮವೇ)

MUDA Scam: ಮಾಜಿ ಆಯುಕ್ತರಿಂದ ಸಂಬಂಧಿಕರ ಮೂಲಕ ನಗದು ಲಂಚ ಪಡೆದು ನಿವೇಶನ ಹಂಚಿಕೆ!

SCROLL FOR NEXT